»   » ವಿವಾದ ಹುಟ್ಟು ಹಾಕಿದ್ದ ರವಿಚಂದ್ರನ್ ಡೈಲಾಗ್ ಗೆ ಕತ್ತರಿ ಬಿತ್ತು

ವಿವಾದ ಹುಟ್ಟು ಹಾಕಿದ್ದ ರವಿಚಂದ್ರನ್ ಡೈಲಾಗ್ ಗೆ ಕತ್ತರಿ ಬಿತ್ತು

Posted By:
Subscribe to Filmibeat Kannada
ವಿವಾದ ಸೃಷ್ಟಿಸಿದ ರವಿಚಂದ್ರನ್ ಹೇಳಿಕೆ | Filmibeat Kannada

ನಟ ರವಿಚಂದ್ರನ್ ಅವರ ಒಂದು ಡೈಲಾಗ್ ಇತ್ತೀಚಿಗಷ್ಟೆ ದೊಡ್ಡ ವಿವಾದ ಹುಟ್ಟುಹಾಕಿತ್ತು. 'ಸೀಜರ್' ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರವಿಚಂದ್ರನ್ ಚಿತ್ರದಲ್ಲಿ ಹೇಳಿರುವ ಒಂದು ಡೈಲಾಗ್ ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು.

''ಗೋ ಹತ್ಯೆ ಮಾಡುವುದು ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ'' ಎನ್ನುವ ಸಂಭಾಷಣೆಯನ್ನು ಚಿತ್ರದ ರವಿಚಂದ್ರನ್ ಪಾತ್ರ ಹೇಳುತ್ತದೆ. ಈ ಸಂಭಾಷಣೆ ಹೊರಬಂದ ಮೇಲೆ ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಸಿನಿಮಾದ ಒಂದು ಪಾತ್ರದಲ್ಲಿ ಅಭಿನಯಿಸಿದ್ದ ನಟ ಪ್ರಕಾಶ್ ರಾಜ್ ಕೂಡ ನಿರ್ದೇಶಕರ ವಿರುದ್ಧ ಗರಂ ಆಗಿದ್ದರು. ಈ ಸಂಭಾಷಣೆಯನ್ನು ತೆಗೆಯುವಂತೆ ಹೇಳಿದ್ದರು.

ಮೊದಲು ಆ ಸಂಭಾಷಣೆಯನ್ನು ಸಮರ್ಥನೆ ಮಾಡಿಕೊಂಡ ನಿರ್ದೇಶಕ ವಿನಯ್ ಕುಮಾರ್ ಈಗ ಅದನ್ನು ತೆಗೆದಿದ್ದಾರೆ. ರವಿಚಂದ್ರನ್ ಕೂಡ ಆ ಡೈಲಾಗ್ ತೆಗೆಯುವಂತೆ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಹೇಳಿದ್ದು, ಆ ಸಂಭಾಷಣೆಯನ್ನು ಮ್ಯೂಟ್ ಮಾಡಲಾಗಿದೆಯಂತೆ.

Seizer kannada movie Beef dialogue beeped.

ಅಂದಹಾಗೆ, ಸೀಜರ್ ಸಿನಿಮಾದಲ್ಲಿ ನಟ ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಪಾರೂಲ್ ಯಾದವ್ ನಾಯಕಿ ಆಗಿದ್ದಾರೆ. ಈ ಸಿನಿಮಾ ನಾಳೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

English summary
Kannada actor Ravichandran's Seizer kannada movie controversial beef dialogue beeped.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X