For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  |

  2022ನೇ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ನೀಡಲಾಗುವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಕನ್ನಡದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ದಿನಗಳು ಇರುವಾಗಲೇ ಸರ್ಕಾರಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.

  ಸುಮಾರು 67 ಮಂದಿ ಸಾಧಕರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಕೀರ್ಣ, ಸೈನಿಕ, ಪತ್ರಿಕೋದ್ಯಮ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಪೌರಕಾರ್ಮಿಕ, ಆಡಳಿತ, ಹೊರನಾಡು, ಹೊರದೇಶ, ವೈದ್ಯಕೀಯ, ರಂಗಭೂಮಿ, ಸಂಗೀತ, ಜಾನಪದ ಸೇರಿದಂತೆ ಸಿನಿಮಾ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

  ಸಿನಿಮಾ ಕ್ಷೇತ್ರದಿಂದ ಇಬ್ಬರಿಗೆ ಪ್ರಶಸ್ತಿ

  ಪ್ರತಿ ವರ್ಷದಂತೆ ಈ ಬಾರಿ ಆಯ್ಕೆ ಮಾಡಿರುವ ಸುಮಾರು 67 ಮಂದಿಗೆ ಸಾಧಕರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದವರೂ ಇದ್ದಾರೆ. ಸ್ಯಾಂಡಲ್‌ವುಡ್‌ನ ಹಿರಿಯ ನಟರಾದ ದತ್ತಣ್ಣ ಹಾಗೂ ಅವಿನಾಶ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

  ಹಿರಿಯ ನಟ ದತ್ತಣ್ಣ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆನಂತರ ಚಿತ್ರರಂಗಕ್ಕೆ ಕಾಲಿಟ್ಟ ದತ್ತಣ್ಣ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ದತ್ತಣ್ಣ ಸೇವೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂತೆಯೇ ಅವಿನಾಶ್ ಕೂಡ ನಾಲ್ಕು ದಶಕಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

  Senior Actor Avinash, Dattanna And Sihi Kahi Chandru Got Kannada Rajyotsava Award

  ಕಿರುತೆರೆ ವಿಭಾಗದಿಂದ ಸಿಹಿ ಕಹಿ ಚಂದ್ರುಗೆ ಪ್ರಶಸ್ತಿ

  ಸಿನಿಮಾ ಕ್ಷೇತ್ರದಿಂದ ದತ್ತಣ್ಣ ಹಾಗೂ ಅವಿನಾಶ್‌ಗೆ ಪ್ರಶಸ್ತಿ ಲಭಿಸಿದ್ದರೆ, ಕಿರುತೆರೆ ವಿಭಾಗದಿಂದಲೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಿನಿಮಾ ಹಾಗೂ ಕಿರುತೆರೆ ಎರಡೂ ವಿಭಾಗಗಳಲ್ಲಿಯೂ ಗುರುತಿಸಿಕೊಂಡಿರೋ ಸಿಹಿ ಕಹಿ ಚಂದ್ರು ಅವರು ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  ಸಿಹಿ ಕಹಿ ಚಂದ್ರು ಸದ್ಯ ಮನರಂಜನಾ ವಾಹಿನಿಯಲ್ಲಿ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಿರುತೆರೆಗಾಗಿ 'ಪಾಪ ಪಾಂಡು', 'ಸಿಲ್ಲಿ-ಲಲ್ಲಿ'ಯಂತಹ ಹಾಸ್ಯ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ನಟನರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಸಿಹಿಕಹಿ ಚಂದ್ರು ಗುರುತಿಸಿಕೊಂಡಿದ್ದಾರೆ.

  ದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗೆದ್ದಿರೋ ಗಣ್ಯರಿಗೆ ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿಯನ್ನು ಗೌರವಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದವರಿಗೆ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

  English summary
  Senior Actor Avinash, Dattanna And Sihi Kahi Chandru Got Kannada Rajyotsava Award, Know More.
  Sunday, October 30, 2022, 20:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X