Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ದೊಡ್ಡಣ್ಣ ಬಗ್ಗೆ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಿದ ಹಿರಿಯ ನಟ ಡಿಂಗ್ರಿ ನಾಗರಾಜ್
ಸ್ಯಾಂಡಲ್ ವುಡ್ ನ ಹಿರಿಯ ನಟ, ಕಾಮಿಡಿ ಸ್ಟಾರ್ ದೊಡ್ಡಣ್ಣ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ ಬಗ್ಗೆ ನಟ ಡಿಂಗ್ರಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ. ದೊಡ್ಡಣ್ಣ ಆರೋಗ್ಯವಾಗಿ ಇದ್ದಾರೆ, ಈಗ ತಾನೆ ಅವರ ಜೊತೆ ಮಾತನಾಡಿದ್ದೇನೆ, ಯಾರೊ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹಿರಿಯ ನಟ ಡಿಂಗ್ರಿ ನಾಗರಾಜ್ ಆಡಿಯೋ ಮೂಲಕ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದ (ಮೇ 5) ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಯಾರೋ ಕಿಡಿಗೇಡಿಗಳು ದೊಡ್ಡಣ್ಣ ಇನ್ನಿಲ್ಲ ಎನ್ನುವ ಸುದ್ದಿಯನ್ನು ಹಬ್ಬಿಸಿ ಬಿಟ್ಟಿದ್ದಾರೆ. ಸುದ್ದಿ ನೋಡಿ ಆತಂಕಗೊಂಡ ಚಿತ್ರರಂಗದ ಅನೇಕ ಗಣ್ಯರು ದೊಡ್ಡಣ್ಣ ಅವರಿಗೆ ಕರೆ ಮಾಡುತ್ತಿದ್ದಾರೆ.
ಖ್ಯಾತ
ಗಾಯಕ
ಲಕ್ಕಿ
ಅಲಿ
ಸಾವಿನ
ವದಂತಿ
ತಳ್ಳಿಹಾಕಿ
ಸತ್ಯ
ಬಿಚ್ಚಿಟ್ಟ
ಸ್ನೇಹಿತೆ
ಸುಳ್ಳು ಎಂದು ಗೊತ್ತಾಗಿ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. ಕಿಡಿಗೇಡಿಗಳು ಮಾಡಿರುವ ಅವಾಂತರದಿಂದ ಆತಂಕ ಪಟ್ಟ ದೊಡ್ಡಣ್ಣ ಗೆಳೆಯ ಮತ್ತು ಹಿರಿಯ ನಟ ಡಿಂಗ್ರಿ ನಾಗರಾಜ್ ಕೂಡ ಫೋನ್ ಮಾಡಿ ವಿಚಾರಿಸಿದ್ದಾರೆ. ದೊಡ್ಡಣ್ಣ ಬಳಿ ಮಾತನಾಡಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಾಗರಾಜ್ ದೊಡ್ಡಣ್ಣ ಆರೋಗ್ಯವಾಗಿದ್ದಾರೆ, ವದಂತಿ ನಂಬಬೇಡಿ ಎಂದಿದ್ದಾರೆ.
'ದೊಡ್ಡಣ್ಣ ಬಗ್ಗೆ ಊಹಾಪೋಹ ಹಬ್ಬಿರುವ ಬಗ್ಗೆ ನಿಮಗೆಲ್ಲ ಗೊತ್ತಿದೆ. ದಯವಿಟ್ಟು ಯಾರು ತಪ್ಪು ತಿಳಿದುಕೊಳ್ಳಬೇಡಿ. ದೊಡ್ಡಣ್ಣ ಆರೋಗ್ಯವಾಗಿದ್ದಾರೆ. ಈಗ ತಾನೆ ಅವರ ಜೊೆತೆ ಮಾತನಾಡಿದ್ದೇನೆ. ನೋಡು ನಾಗು ಯಾವನೋ ಹಾಕ್ಬಿಟ್ಟಿದ್ದಾನೆ. ನಿಂದು ಸೇರಿ 21ನೇ ಫೋನ್ ಅಂತ ಹೇಳಿದ್ರು. ದೊಡ್ಡಣ್ಣ ಚೆನ್ನಾಗಿದ್ದಾರೆ. ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಡಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
Recommended Video
ಕೊರೊನಾ ಭೀಕರತೆ ನಡುವೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಗಣ್ಯ ವ್ಯಕ್ತಿಗಳ ಬಗ್ಗೆ ಸುಳ್ಳು ಪೋಸ್ಟ್ ಗಳನ್ನು ಹಾಕಿ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳುತ್ತಿದ್ದಾರೆ. ಇಂದು ಬೆಳಗ್ಗೆ ಬಾಲಿವುಡ್ ಖ್ಯಾತ ಗಾಯಕ ಲಕ್ಕಿ ಅಲಿ ಬಗ್ಗೆಯೂ ವದಂತಿ ವೈರಲ್ ಆಗಿತ್ತು. ಬಳಿಕ ಲಕ್ಕಿ ಅಲಿ ಸ್ನೇಹಿತೆ ಸ್ಪಷ್ಟನೆ ನೀಡಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.