For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ

  |

  ಡಬ್ಬಿಂಗ್ ಸಿನಿಮಾ ಬಗ್ಗೆ ಚರ್ಚೆ ಇಂದು ನಿನ್ನೆಯದಲ್ಲ. ಮಂದಗಾಮಿನಿಯಾಗಿದ್ದ ಡಬ್ಬಿಂಗ್ ಚರ್ಚೆ, ನ್ಯಾಯಾಲಯದ ತೀರ್ಪಿನ ನಂತರ ಬಹಿರಂಗವಾಯಿತು. ಈಗ ಪರಿಸ್ಥಿತಿ ಬದಲಾಗಿದ್ದು, ಡಬ್ಬಿಂಗ್ ವಿರೋಧಿಸುವವರ ಸಂಖ್ಯೆ ವಿರಳವಾಗುತ್ತಾ ಹೋಗುತ್ತಿದೆ.

  ಆದರೆ ಇನ್ನೂ ಹಲವರು ಡಬ್ಬಿಂಗ್ ವಿರುದ್ಧವಾಗಿ ತಮ್ಮ ದನಿಯನ್ನು ಎತ್ತುತ್ತಲೇ ಇದ್ದಾರೆ. ಇದೀಗ ಹಿರಿಯ ನಟ ದೊಡ್ಡಣ್ಣ ಅವರು ಡಬ್ಬಿಂಗ್ ಸಿನಿಮಾ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ನಿರ್ದೇಶಕ ಶಶಾಂಕ್ ಮಾಡಿದ 'ಡಬ್ಬಿಂಗ್' ಟ್ವೀಟ್‌ಗೆ ಭಾರಿ ವಿರೋಧನಿರ್ದೇಶಕ ಶಶಾಂಕ್ ಮಾಡಿದ 'ಡಬ್ಬಿಂಗ್' ಟ್ವೀಟ್‌ಗೆ ಭಾರಿ ವಿರೋಧ

  ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ದೊಡ್ಡಣ್ಣ, 'ಡಬ್ಬಿಂಗ್ ಸಿನಿಮಾ ಎಂಬುದು ನೀರಿನ ಬಟ್ಟಲಲ್ಲಿ ಕೈಅದ್ದಿ ನೆಕ್ಕಿದಂತೆ' ಎಂದರು. ಅದೇ ಸ್ವಮೇಕ್ ಸಿನಿಮಾಗಳು ಪಾಯಸದ ಬಟ್ಟಲ್ಲಲ್ಲಿ ಕೈ ಅದ್ದಿದಂತೆ ಎಂದು ಉಪಮೇಯ ನೀಡಿದರು ದೊಡ್ಡಣ್ಣ.

  ಕನ್ನಡ ಭಾಷೆಯ ಬಗ್ಗೆ ಮಾತನಾಡಿದ ದೊಡ್ಡಣ್ಣ, 'ಕನ್ನಡ ಎಂದರೆ ಹಡೆದವ್ವ. ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡದ ಹಿರಿಮೆ-ಗರಿಮೆ ಕಡಿಮೆ ಆಗುತ್ತಿದೆ, ಅದು ಸರಿಯಲ್ಲ. ಕನ್ನಡ ಭಾಷೆ, ಕನ್ನಡ ಶಾಲೆಗಳು ಉಳಿಯಬೇಕು' ಎಂದು ಕಾಳಜಿ ವ್ಯಕ್ತಪಡಿಸಿದರು.

  ಕೊರೊನಾ ಉಂಟು ಮಾಡಿರುವ ಭೀತಿಯಿಂದ ಜನರು ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಹ ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಶೀಘ್ರವೇ ಸರಿ ಹೋಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

  ತೆಲುಗಿಗೆ ರಾಬರ್ಟ್‌: ದರ್ಶನ್‌ ಪಾತ್ರಕ್ಕೆ ಧ್ವನಿ ಕೊಡುವವರು ಯಾರು?ತೆಲುಗಿಗೆ ರಾಬರ್ಟ್‌: ದರ್ಶನ್‌ ಪಾತ್ರಕ್ಕೆ ಧ್ವನಿ ಕೊಡುವವರು ಯಾರು?

  ತಮ್ಮ ಜೀವನ ಸಾಗಿ ಬಂದ ಹಾದಿ, ಸಿನಿಮಾದೊಂದಿಗೆ ನಂಟು, ಸಿನಿಮಾದ ಮುಂಚಿನ ಜೀವನ ಹೀಗೆ ಹಲವು ವಿಷಯಗಳ ಬಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾಧ್ಯಮದವರೊಟ್ಟಿಗೆ ಮಾತನಾಡಿದರು ದೊಡ್ಡಣ್ಣ.

  English summary
  Senior actor Doddanna oppose to Dubbing movies. He said own movies is like sweet.
  Wednesday, January 27, 2021, 9:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X