»   » ಕನ್ನಡದ ಕುಳ್ಳ ದ್ವಾರಕೀಶ್ ನಿರ್ಮಿಸಿದ ಹಿಟ್ ಚಿತ್ರಗಳು

ಕನ್ನಡದ ಕುಳ್ಳ ದ್ವಾರಕೀಶ್ ನಿರ್ಮಿಸಿದ ಹಿಟ್ ಚಿತ್ರಗಳು

Posted By:
Subscribe to Filmibeat Kannada

ಬಂಗ್ಲೆ ಶ್ಯಾಮ ರಾವ್ ದ್ವಾರಕನಾಥ್ ಆಲಿಯಾಸ್ ದ್ವಾರಕೀಶ್ ಹುಟ್ಟಿದ್ದು 19 ಆಗಸ್ಟ್ 1942 ಹುಣಸೂರಿನಲ್ಲಿ. ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ದ್ವಾರಕೀಶ್ ನಂತರದ ದಿನಗಳಲ್ಲಿ ನಾಯಕ ನಟನಾಗಿ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡರು.

ಹೆಸರಾಂತ ಚಿತ್ರ ನಿರ್ಮಾಪಕ ಸಿ ವಿ ಶಿವಶಂಕರ್ ಅವರಿಂದ ದ್ವಾರಕೀಶ್ ಎಂದು ಮರುನಾಮಕರಣಗೊಂಡ ಇವರು ಬಂಗ್ಲೆ ಶ್ಯಾಮ ರಾವ್ ಮತ್ತು ಜಯಮ್ಮ ದಂಪತಿಯ ಮಗ. ಡಿಪ್ಲಮೋ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ದ್ವಾರಕೀಶ್ ಸಿನಿಮಾ ರಂಗ ಪ್ರವೇಶಿಸುವ ಮೊದಲು ಬದುಕು ಕಂಡುಕೊಂಡಿದ್ದು ಭಾರತ್ ಆಟೋ ಸ್ಪೇರ್ಸ್ ಎನ್ನುವ ಅಂಗಡಿಯ ಮೂಲಕ.

1963ರಲ್ಲಿ ಹುಣಸೂರು ಕೃಷ್ಣಮೂರ್ತಿ ದ್ವಾರಕೀಶ್ ಅವರಿಗೆ ಚಿತ್ರರಂಗದಲ್ಲಿ ಎಂಟ್ರಿ ಕೊಡಿಸಿದರು. ಮೊದಲು ಹಾಸ್ಯನಟನಾಗಿ, ಸಹಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ದ್ವಾರಕೀಶ್ 1969ರಲ್ಲಿ ಡಾ.ರಾಜಕುಮಾರ್ ಅಭಿನಯದ 'ಮೇಯರ್ ಮುತ್ತಣ್ಣ' ಚಿತ್ರವನ್ನು ನಿರ್ಮಿಸಿದರು.

ನಿರ್ದೇಶಕರಾಗಿ ಕೂಡಾ ಗುರುತಿಸಿಕೊಂಡ ದ್ವಾರಕೀಶ್ ನೀ ಬರದ ಕಾದಂಬರಿ, ಶೃತಿ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಮುಂತಾದ ಹಿಟ್ ಚಿತ್ರವನ್ನು ನೀಡಿದ್ದರು.

'ದ್ವಾರಕೀಶ್ ಚಿತ್ರ' ಬ್ಯಾನರ್ ಮೂಲಕ ಅವರು ನಿರ್ಮಿಸಿದ ಹಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಗಣನೀಯ ಸೋಲು ಅನುಭವಿಸಿತ್ತು. ಆದರೂ ಧೃತಿ ಕೆಡದೆ ಮತ್ತೆ ಚತ್ರ ನಿರ್ಮಿಸಿ, ಹೊಸ ಕಲಾವಿದರು ಮತ್ತು ತಂತ್ರಜ್ಞಾನರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

ಕನ್ನಡದ ಪ್ರತಿಷ್ಟಿತ 'ದ್ವಾರಕೀಶ್ ಚಿತ್ರ' ಬ್ಯಾನರ್ ನೀಡಿದ ಕೆಲವು ಸೂಪರ್ ಹಿಟ್ ಚಿತ್ರಗಳು ಸ್ಲೈಡಿನಲ್ಲಿ ನೋಡಿ. ಇದರಲ್ಲಿ ನಿಮ್ಮ ಅತ್ಯುತ್ತಮ ಚಿತ್ರ ಆಯ್ಕೆ ಯಾವುದು?

ಮೇಯರ್ ಮತ್ತಣ್ಣ

1969 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಡಾ. ರಾಜಕುಮಾರ್, ಭಾರತಿ, ದ್ವಾರಕೀಶ್ ಪ್ರಮುಖ ಭೂಮಿಕೆಯಲ್ಲಿದ್ದರು. ಸಿದ್ದಲಿಂಗಯ್ಯ ಚಿತ್ರವನ್ನು ನಿರ್ದೇಶಿಸಿದ್ದರು.

ಕುಳ್ಳ ಏಜೆಂಟ್ 000

1972ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ದ್ವಾರಕೀಶ್ ನಾಯಕ ನಟನಾಗಿದ್ದರು. ಜ್ಯೋತಿಲಕ್ಷ್ಮಿ, ಜಯಾ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಕೆ ಎಸ್ ಎಲ್ ಸ್ವಾಮಿ ನಿರ್ದೇಶಿದ್ದರು.

ಭಾಗ್ಯವಂತರು

ಭಾರ್ಗವ ನಿರ್ದೇಶಿಸಿದ್ದ ಈ ಚಿತ್ರ 1977ರಲ್ಲಿ ಬಿಡುಗಡೆಯಾಗಿತ್ತು. ಡಾ.ರಾಜಕುಮಾರ್, ಸರೋಜಾ ದೇವಿ, ಅಶೋಕ್, ರಾಮಕೃಷ್ಣ ಚಿತ್ರದ ಇತರ ತಾರಾಗಣದಲ್ಲಿದ್ದರು.

ಕಿಟ್ಟುಪುಟ್ಟು

1977ರಲ್ಲಿ ಬಿಡಿಗಡೆಯಾದ ಚಿತ್ರ. ಕನ್ನಡದ ಜನಪ್ರಿಯ ಜೋಡಿ ವಿಷ್ಣುವರ್ಧನ್, ದ್ವಾರಕೀಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮಂಜುಳಾ ನಟಿಸಿದ್ದರು. ಸಿ ವಿ ರಾಜೇಂದ್ರನ್ ಚಿತ್ರದ ನಿರ್ದೇಶಕರು.

ಸಿಂಗಾಪುರದಲ್ಲಿ ರಾಜಾಕುಳ್ಳ

1978ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್, ದ್ವಾರಕೀಶ್ ಜೋಡಿಯ ಮತ್ತೊಂದು ಚಿತ್ರ. ಸಿ ವಿ ರಾಜೇಂದ್ರನ್ ಚಿತ್ರದ ನಿರ್ದೇಶಿಸಿದ ಚಿತ್ರದಲ್ಲಿ ನಾಯಕಿಯಾಗಿ ಮಂಜುಳಾ ನಟಿಸಿದ್ದರು.

ಪ್ರೀತಿ ಮಾಡು ತಮಾಷೆ ನೋಡು

1979ರಲ್ಲಿ ಬಿಡುಗಡೆಯಾದ ಮತ್ತೋಂದು ಹಿಟ್ ಚಿತ್ರ. ಶ್ರೀನಾಥ್, ಶಂಕರನಾಗ್, ಮಂಜುಳಾ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಸಿ ವಿ ರಾಜೇಂದ್ರನ್ ನಿರ್ದೇಶಿಸಿದ್ದರು.

ಗುರುಶಿಷ್ಯರು

1981ರಲ್ಲಿ ಬಂದ ಮತ್ತೊಂದು ಜನಪ್ರಿಯ ಚಿತ್ರ. ಹಾಸ್ಯನಟರ ದಂಡೇ ಇರುವ ಈ ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಪ್ರಮುಖ ಭೂಮಿಕೆಯಲ್ಲಿದ್ದರು. ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು.

ಪ್ರಚಂಡಕುಳ್ಳ

ವಿಷ್ಣುವರ್ಧನ್, ದ್ವಾರಕೀಶ್, ಸುದರ್ಶನ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ 1984ರಲ್ಲಿ ಬಿಡುಗಡೆಯಾಯಿತು. ಪಿ ಎಸ್ ಪ್ರಕಾಶ್ ಚಿತ್ರವನ್ನು ನಿರ್ದೇಶಿಸಿದ್ದರು.

ನೀ ಬರೆದ ಕಾದಂಬರಿ

1985ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ವಿಷ್ಣುವರ್ಧನ್, ಭವ್ಯಾ, ಸಿ ಆರ್ ಸಿಂಹ ಮುಖ್ಯ ತಾರಾಗಣದಲ್ಲಿದ್ದರು. ದ್ವಾರಕೀಶ್ ಚಿತ್ರದ ನಿರ್ದೇಶಕರು.

ಮದುವೆ ಮಾಡು ತಮಾಷೆ ನೋಡು

ಎಸ್ ಎ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಆರತಿ, ಮಹಾಲಕ್ಷ್ಮಿ ಪ್ರಮುಖ ತಾರಾಗಣದಲ್ಲಿದ್ದಾರೆ.

ಡ್ಯಾನ್ಸ್ ರಾಜಾ ಡ್ಯಾನ್ಸ್

ಲೀಲಾವತಿ ಪುತ್ರ ವಿನೋದ್ ರಾಜ್ ಮುಖ್ಯ ಭೂಮಿಕೆಲ್ಲಿರುವ ಈ ಚಿತ್ರದಲ್ಲಿ ದಿವ್ಯಾ, ಶ್ರೀನಾಥ್ ಇತರ ಭೂಮಿಕೆಯಲ್ಲಿದ್ದರು. ಚಿತ್ರವನ್ನು ದ್ವಾರಕೀಶ್ ನಿರ್ದೇಶಿಸಿದ್ದರು.

ಆಪ್ತಮಿತ್ರ

ಆರ್ಥಿಕ ಸಂಕಷ್ಟದಲ್ಲಿದ್ದ ದ್ವಾರಕೀಶಿಗೆ ಜೇಬು ತುಂಬಿಸಿದ ಚಿತ್ರ. ವಿಷ್ಣುವರ್ಧನ್, ರಮೇಶ್, ದ್ವಾರಕೀಶ್, ಸೌಂದರ್ಯ, ಪ್ರೇಮಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದರು.

ವಿಷ್ಣುವರ್ಧನ

ಡಾ. ವಿಷ್ಣುವರ್ಧನ್ ನಿಧನದ ನಂತರ ಬಿಡುಗಡೆಯಾದ ಚಿತ್ರ. ಶೀರ್ಷಿಕೆಯ ವಿಚಾರದಲ್ಲಿ ಗೊಂದಲ ಉಂಟಾಗಿದ್ದ ಈ ಚಿತ್ರದ ಪ್ರಮುಖ ತಾರಾಗಣ ಸುದೀಪ್, ಭಾವನಾ, ಪ್ರಿಯಾಮಣಿ, ಅರುಣ್ ಸಾಗರ್. ಚಿತ್ರವನ್ನು ಪಿ ಕುಮಾರ್ ನಿರ್ದೇಶಿಸಿದ್ದಾರೆ.

English summary
List of super hit movies given by Dwarakish owned Dwarakish Chitra banner. 
Please Wait while comments are loading...