For Quick Alerts
  ALLOW NOTIFICATIONS  
  For Daily Alerts

  ಅನೇಕ ವರ್ಷಗಳ ಬಳಿಕ ಮತ್ತೆ ನಟನೆಯತ್ತ ಮುಖ ಮಾಡಿದ ಹಿರಿಯ ನಟ ರಾಜೇಶ್

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ರಾಜೇಶ್ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸಿನಿಮಾರಂಗದಿಂದ ದೂರ ಸರಿದಿದ್ದ ರಾಜೇಶ್ ದಶಕಗಳ ಬಳಿಕ ಚಿತ್ರಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ.

  ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮತ್ತು ಉದಯ್ ಕುಮಾರ್ ಅಂಥ ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸಿರುವ ರಾಜೇಶ್ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳದೆ ಅನೇಕ ವರ್ಷಗಳೇ ಆಗಿತ್ತು. ಆದರೀಗ ರಾಜೇಶ್ ಅವರನ್ನು ಮತ್ತೆ ಬಣ್ಣದ ಲೋಕಕ್ಕೆ ಕರೆತಂದಿದ್ದಾರೆ ನಟ ಮತ್ತು ನಿರ್ದೇಶಕ ಎಂ.ಜಿ ಶ್ರೀನಿವಾಸ್.

  ಶ್ರೀನಿವಾಸ್ ಅವರ ಓಲ್ಡ್ ಮಂಕ್ ಸಿನಿಮಾದ ಕಥೆ ಕೇಳಿ ಬಣ್ಣ ಹಚ್ಚಲು ಗ್ರೀನ್ ಸಿಗ್ನಲ್ ನೀಡಿರುವ 88 ವರ್ಷದ ರಾಜೇಶ್, ಈ ವಯಸ್ಸಿನಲ್ಲೂ ಉತ್ಸಾಹದಿಂದ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಎಂ.ಜಿ ಶ್ರೀನಿವಾಸ್ ನಟಿಸಿ, ನಿರ್ದೇಶನ ಮಾಡುತ್ತಿರುವ ಓಲ್ಡ್ ಮಂಕ್ ಸಿನಿಮಾದಲ್ಲಿ ರಾಜೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.

  ಅಂದಹಾಗೆ ರಾಜೇಶ್ ಅವರ ಭಾಗದ ಚಿತ್ರೀಕರಣ ಜನವರಿ 15ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಓಲ್ಡ್ ಮಂಕ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದಷ್ಟು ಮಾತಿನ ಭಾಗದ ಚಿತ್ರೀಕರಣ ಮತ್ತು ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆಯಂತೆ. ಟೈಟಲ್ ಮೂಲಕವೇ ಕುತೂಹಲ ಮೂಡಿಸಿರುವ ಓಲ್ಡ್ ಮಂಕ್ ಸಿನಿಮಾದಲ್ಲಿ ಸಿಹಿ ಕಹಿ ಚಂದ್ರು, ಆರ್ ಟಿ ರಮಾ, ಡಿಂಗ್ರಿ ನಾಗರಾಜ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಇದೆ.

  ಸುದೀಪ್ ಈ ರೇಂಜ್ ಗೆ ಕೋಪ ಮಾಡ್ಕೊಂಡಿದ್ದು ಇದೆ ಮೊದಲು | Sudeep angry reply to Vishnu Sir statue issue

  ಇನ್ನು ಚಿತ್ರದಲ್ಲಿ ಹಿರಿಯ ನಿರ್ದೇಶಕ ಮತ್ತು ನಟ ಎಸ್ ನಾರಾಯಣ್ ಕೂಡ ನಟಿಸುತ್ತಿರುವುದು ವಿಶೇಷ. ಎಸ್ ನಾರಾಯಣ್ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಓಲ್ಡ್ ಮಂಕ್, ನಟ ಶ್ರೀನಿವಾಸ್ ಮತ್ತು ಅದಿತಿ ಕಾಂಬಿನೇಶನ್ ಎರಡನೇ ಸಿನಿಮಾವಿದು. ಈಗಾಗಲೇ ರಂಗನಾಯಕಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಎರಡನೇ ಬಾರಿಗೆ ಓಲ್ಡ್ ಮಂಕ್ ಮೂಲಕ ಮೋಡಿ ಮಾಡಲು ಬರ್ತಿದ್ದಾರೆ.

  English summary
  Veteran Actor Actor Rajesh playing important role in MG Srinivas Old Monk.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X