»   » 'ಒನ್ ಇಂಡಿಯಾ'ದೊಂದಿಗೆ ಬೇಸರ ಹಂಚಿಕೊಂಡ ಶಿವಣ್ಣ

'ಒನ್ ಇಂಡಿಯಾ'ದೊಂದಿಗೆ ಬೇಸರ ಹಂಚಿಕೊಂಡ ಶಿವಣ್ಣ

Posted By: Chethan
Subscribe to Filmibeat Kannada

ಭಾರತೀಯ ಚಿತ್ರರಂಗದ ಹಿರಿಯ ನಟ ಓಂ ಪುರಿ ನಿಧನಕ್ಕೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

'ಒನ್ ಇಂಡಿಯಾ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಓಂ ಪುರಿಯವರ ನಿಧನ ಇಡೀ ಭಾರತೀಯ ಚಿತ್ರೋದ್ಯಮಕ್ಕೇ ಆದ ನಷ್ಟ ಎಂದು ಬಣ್ಣಿಸಿದರು.

ಬೆಳಗ್ಗೆಯೇ ಅವರ ನಿಧನದ ಸುದ್ದಿ ಕೇಳಿ ತುಂಬಾ ಬೇಸರವಾಯಿತು ಎಂದ ಅವರು, ಓಂಪುರಿ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟರಲ್ಲೊಬ್ಬರು. ಒಳ್ಳೇ ಆರ್ಟಿಸ್ಟ್ ಅನ್ನುವುದಕ್ಕಿಂತ ಮೊದಲು ಅವರೊಬ್ಬ ಒಳ್ಳೆ ಹ್ಯೂಮನ್ ಬಿಯಿಂಗ್. ಮಾನವೀಯ ಮೌಲ್ಯಗಳನ್ನು ಹೊಂದಿದ್ದದ ಅವರಿಂದ ಕಲಿಯಬೇಕಿದ್ದು ಸಾಕಷ್ಟಿತ್ತು. ಅವರೊಟ್ಟಿಗೆ ನಟಿಸುವುದು ಮಾತ್ರವಲ್ಲ, ಅವರೊಂದಿಗಿನ ಒಡನಾಟ ತುಂಬಾ ಖುಷಿ ಕೊಡುತ್ತಿತ್ತು ಎಂದು ನೆನಪಿಸಿಕೊಂಡರು.[ಬಹುಭಾಷಾ ನಟ ಓಂ ಪುರಿ ವಿಧಿವಶ]

Senior actor Shivarajkumar's reaction on Om Puri's demise.

ಇನ್ನು, ಅವರ ಅಭಿನಯ ಚಾತುರ್ಯವನ್ನು ಕೊಂಡಾಡಿದ ಶಿವಣ್ಣ, ತೆರೆಯ ಮೇಲೆ ಅವರು ತಮ್ಮ ಪಾತ್ರವನ್ನು ಪರಿಣಾಮಕಾರಿಯಲ್ಲಿ ಮೂಡಿಸುವಲ್ಲಿ ಸಿದ್ಧಹಸ್ತರಾಗಿರುತ್ತಿದ್ದರು. ತೆರೆಯ ಮೇಲೆ ತುಂಬಾ ಕಡಿಮೆ ಮಾತನಾಡಿದರೂ ತಮ್ಮ ಕಣ್ಣಿನ ದೃಷ್ಟಿಯಿಂದಲೇ ಪಾತ್ರದ ಅಷ್ಟೂ ಭಾವವನ್ನು ಹೊರಹಾಕಬಲ್ಲ ಚಾತುರ್ಯತೆ ಅವರಲ್ಲಿತ್ತು. ಅವರ ಅಭಿನಯದಲ್ಲಿ ಅವರ ಧ್ವನಿ ಹಾಗೂ ಕಣ್ಣಿನ ಇಂಟೆನ್ಸಿಟಿಯೇ ಪ್ರಮುಖವಾದ ಅಂಶ.[ಗ್ಯಾಲರಿ : ವೈವಿಧ್ಯಮಯ ಚಿತ್ರಗಳಲ್ಲಿ ಓಂ ಪುರಿ]

Senior actor Shivarajkumar's reaction on Om Puri's demise.

ತುಂಬಾ ಬೇಸರವಾಗುವ ವಿಚಾರವೆಂದರೆ, ಇತ್ತೀಚೆಗೆ ತೆರೆ ಕಂಡ ನನ್ನ ಚಿತ್ರವಾದ ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಾನು ಅವರೊಂದಿಗೆ ನಟಿಸಬೇಕಿತ್ತು. ಎ.ಕೆ. 47 ಚಿತ್ರದ ನಂತರ ಅವರೊಟ್ಟಿಗೆ ನಟಿಸುವ ಬಗ್ಗೆ ನಾನೂ ತುಂಬಾ ಉತ್ಸುಕನಾಗಿದ್ದೆ. ಆದರೆ, ದುರಾದೃಷ್ಟವಶಾತ್ ನಾವು ಆ ಚಿತ್ರಕ್ಕೆ ಅವರನ್ನು ಪಡೆಯದಾದೆವು. ಇಂದು ಆ ವಿಚಾರ ನನ್ನನ್ನು ಬಹುಮಟ್ಟಿಗೆ ಕಾಡುತ್ತಿದೆ.

ಅವರೀಗ ತಮ್ಮ ತಮ್ಮ ಸಮೃದ್ಧವಾದ ನೆನಪುಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಹೋಗಿದ್ದಾರೆ ಎಂದು ಕೊರಗುವುದಕ್ಕಿಂತ ಅವರು ನಮ್ಮೊಟ್ಟಿಗೇ ಇದ್ದಾರೆ ಎಂಬ ಭಾವನೆಯಲ್ಲಿ ನಾವು ಬದುಕಬೇಕಿದೆ.

English summary
Kannada senior actor Shivarajkumar expressed deep condolence to veteran actor Om Puri's demise.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada