For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಕಾರ್ಮಿಕರಿಗೆ ನೆರವು ಒದಗಿಸಿದ ಹಿರಿಯ ನಟಿ ಲೀಲಾವತಿ

  |

  ಹಿರಿಯ ನಟಿ ಲೀಲಾವತಿ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಸೇವೆಯಲ್ಲಿ ತೊಡಗಿದ್ದಾರೆ. ಕೋವಿಡ್‌ ಭಯ ತೊರೆದು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರು, ಸಹ ಕಲಾವಿದರ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ.

  ಚಿತ್ರೀಕರಣ ಇಲ್ಲದೇ ಇರುವ ಕಾರಣ ಹಲವಾರು ಮಂದಿ ಸಿನಿಮಾ ಕಾರ್ಮಿಕರು, ದಿನ ಭತ್ಯೆ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅಂಥಹಾ ದಿನ ಭತ್ಯೆ ಕಲಾವಿದರಿಗೆ ದಿನಸಿ ವಿತರಣೆ ಮಾಡಿದ್ದಾರೆ ಲೀಲಾವತಿ.

  ಚಿತ್ರರಂಗದಿಂದ ದೂರವಾಗಿ ನೆಲಮಂಗಲದ ಬಳಿಯ ಸಾಣೆಹಳ್ಳಿಯಲ್ಲಿ ಮಗ ವಿನೋದ್ ರಾಜ್‌ಕುಮಾರ್ ಜೊತೆಗೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲೀಲಾವತಿ ಅವರು ಇಂದು ಸಿನಿಮಾ ಕಲಾವಿದರಿಗೆ ಆಹಾರ ಧಾನ್ಯ ವಿತರಣೆ ಮಾಡಿದರು.

  ಈ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಲೀಲಾವತಿ ಅವರು, 'ದೇವರ ಅಪ್ಪಣೆಯಂತೆ ನಮ್ಮಿಂದ ಏನಾಗುತ್ತದೆಯೋ ಮಾಡಲು ಬಂದಿದ್ದೇವೆ. ನಾವು ಕೊಡುತ್ತಿರುವುದರಿಂದ ಯಾರಿಗೆ ಹೊಟ್ಟೆ ತುಂಬುತ್ತೊ ಗೊತ್ತಿಲ್ಲ ಆದರೆ ಮನಸ್ಸು ತುಂಬುತ್ತೆ. ಯಾರಿಗೂ ಇನ್ನೊಬ್ಬರ ಮುಂದೆ ಕೈಚಾಚುವ ಸ್ಥಿತಿ ಬರುವುದು ಬೇಡ' ಎಂದು ಲೀಲಾವತಿ ಹೇಳಿದ್ದಾರೆ.

  ಲೀಲಾವತಿ ಅವರೊಟ್ಟಿಗೆ ಮತ ವಿನೋದ್ ರಾಜ್ ಸಹ ಇದ್ದು ಆಹಾರ ಧಾನ್ಯ ವಿತರಣೆ ಮಾಡಿದ್ದರು. ಕಳೆದ ಬಾರಿ ಲಾಕ್‌ಡೌನ್ ಆದಾಗಲೂ ಲೀಲಾವತಿ ಹಾಗೂ ವಿನೋದ್ ರಾಜ್ ಅವರುಗಳು ಸಿನಿಮಾ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದರು.

  Recommended Video

  ಮಂಗಳಮುಖಿಯರಿಗೆ ದಿನಸಿ ಕಿಟ್ ಗಳನ್ನು ನೀಡಿದ ನಟಿ ರಾಧಿಕಾ ಕುಮಾರಸ್ವಾಮಿ | Filmibeat Kannada

  ಕನ್ನಡದ ಕೆಲವಾರು ನಟ-ನಟಿಯರು ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುತ್ತಿದ್ದಾರೆ. ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಪ್ರಣಿತಾ ಸುಭಾಷ್, ಗೀತರಚನೆಕಾರ ಕವಿರಾಜ್ ಇನ್ನೂ ಹಲವರು ಕೊರೊನಾ ಸಮಯದಲ್ಲಿ ಜನರ ಸಹಾಯಕ್ಕೆ ಧಾವಿಸಿದ್ದಾರೆ.

  English summary
  Senior actress Leelavathi helped movie workers daily wage actors. She distributed grocery kit for free.
  Tuesday, May 11, 2021, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X