»   » 'ಸಪ್ತ ಮಾತ್ರಿಕ' ಧಾರಾವಾಹಿಯ ನಟ ಪ್ರದೀಪ್ ಆತ್ಮಹತ್ಯೆಗೆ ಶರಣು.!

'ಸಪ್ತ ಮಾತ್ರಿಕ' ಧಾರಾವಾಹಿಯ ನಟ ಪ್ರದೀಪ್ ಆತ್ಮಹತ್ಯೆಗೆ ಶರಣು.!

Posted By:
Subscribe to Filmibeat Kannada

ತೆಲುಗಿನ ಖ್ಯಾತ ಕಿರುತೆರೆ ನಟ ಪ್ರದೀಪ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 'ಸಪ್ತ ಮಾತ್ರಿಕ' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದ ಪ್ರದೀಪ್ ಕುಮಾರ್ ಇಂದು (ಬುಧವಾರ) ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.[ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!]

ಇತ್ತೀಚೆಗಷ್ಟೇ ಕಿರುತೆರೆ ನಟಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟಿದ್ದ ಪ್ರದೀಪ್ ಕುಮಾರ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಮುಂಜಾನೆ 4 ಗಂಟೆಗೆ ನೇಣಿಗೆ ಶರಣು

ಹೈದರಾಬಾದ್ ನ ಅಲ್ಕಾಪುರಿ ಕಾಲೋನಿಯಲ್ಲಿರುವ ಗ್ರೀನ್ ಹೋಮ್ ಅಪಾರ್ಟ್ಮೆಂಟ್ಸ್ ಫೇಸ್ 1 ನಲ್ಲಿ ಇರುವ ತಮ್ಮ ನಿವಾಸದಲ್ಲಿ ಮುಂಜಾನೆ 4 ಗಂಟೆಗೆ ಪ್ರದೀಪ್ ಕುಮಾರ್ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ಅಗಿದೆ.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಸೂಸೈಡ್ ನೋಟ್ ಇದ್ಯಾ.?

ಪ್ರದೀಪ್ ಕುಮಾರ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆ ಮೂಲಕ ಗೊತ್ತಾಗಬೇಕಿದೆ. ವರದಿಗಳ ಪ್ರಕಾರ, ಪ್ರದೀಪ್ ಕುಮಾರ್ ನಿವಾಸದಲ್ಲಿ ಸೂಸೈಡ್ ನೋಟ್ ಕೂಡ ಪತ್ತೆ ಆಗಿಲ್ಲ.

ಮನೆಯಲ್ಲಿ ಯಾರೂ ಇರಲಿಲ್ಲ

ಇಂದು ಮುಂಜಾನೆ ಮನೆಯಲ್ಲಿ ಪ್ರದೀಪ್ ಜೊತೆ ಯಾರೂ ಇರಲಿಲ್ಲ. ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಾಗ ಪತ್ನಿ ಪಾವನಿ ಕೂಡ ಮನೆಯಲ್ಲಿ ಇರಲಿಲ್ಲ ಎಂದು ವರದಿ ಆಗಿದೆ.

ಕೌಟುಂಬಿಕ ಕಾರಣ.?

ಮೇಲ್ನೋಟಕ್ಕೆ ಕೌಟುಂಬಿಕ ಕಾರಣಗಳಿಂದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆರ್ಥಿಕ ಸ್ಥಿತಿ ಹೇಗಿತ್ತು.?

ಪ್ರದೀಪ್ ಆತ್ಮಹತ್ಯೆಗೆ ಆರ್ಥಿಕ ಮುಗ್ಗಟ್ಟು ಕೂಡ ಕಾರಣ ಅಂತ ಕೆಲ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಮದುವೆ ಆಗಿದ್ದ ಪ್ರದೀಪ್

ಕಿರುತೆರೆ ನಟಿ ಪಾವನಿ ರೆಡ್ಡಿ ಜೊತೆ ಪ್ರದೀಪ್ ವಿವಾಹ ಕಳೆದ ವರ್ಷವಷ್ಟೇ ನೆರವೇರಿತ್ತು.

ಧಾರಾವಾಹಿ ನಟಿ ಪಾವನಿ

'ಅಗ್ನಿಪೂವುಲು' ಎಂಬ ಧಾರಾವಾಹಿಯಲ್ಲಿ ಪಾವನಿ ರೆಡ್ಡಿ ಅಭಿನಯಿಸುತ್ತಿದ್ದರು. ಇನ್ನೂ 'ಸಪ್ತ ಮಾತ್ರಿಕಾ' ಧಾರಾವಾಹಿಯಿಂದಲೇ ತೆಲುಗು ಕಿರುತೆರೆಯಲ್ಲಿ ಪ್ರದೀಪ್ ಖ್ಯಾತಿ ಗಳಿಸಿದ್ದರು. ತೆಲುಗು ಜೊತೆಗೆ ತಮಿಳಿನ ಕೆಲ ಧಾರಾವಾಹಿಗಳಲ್ಲೂ ಪ್ರದೀಪ್ ಅಭಿನಯಿಸಿದ್ದಾರೆ.

English summary
Telugu Serial Actor Pradeep has committed suicide at his house in Hyderabad at around 4 am today (May 3rd)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada