»   » ಕಿರುತೆರೆ ನಟಿ ಮೇಘನಾ ಆರೋಪದ 'ಕಂಪ್ಲೀಟ್' ಕಥೆ

ಕಿರುತೆರೆ ನಟಿ ಮೇಘನಾ ಆರೋಪದ 'ಕಂಪ್ಲೀಟ್' ಕಥೆ

Written By:
Subscribe to Filmibeat Kannada

ಕನ್ನಡ ಕಿರುತೆರೆಯಲ್ಲೊಂದು ಹೊಸ ವಿವಾದ ಸೃಷ್ಠಿಯಾಗಿದೆ. 'ಅರಗಿಣಿ' ಧಾರವಾಹಿ ಖ್ಯಾತಿಯ ನಟಿ ಮೇಘನಾ, ತನ್ನ ಪ್ರಿಯಕರ ಹರೀಶ್ ಕುಟುಂಬದಿಂದ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯವಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

''ಹರೀಶ್ ಸಹೋದರ ನವೀನ್ ಸೇರಿದಂತೆ ಒಟ್ಟು ನಾಲ್ಕು ಜನರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ'' ಎಂದು ಆರೋಪಿಸಿ ನಟಿ ಮೇಘನಾ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನಾಪ್ಪ ಅಂದ್ರೆ, ಮೇಘನಾ ಆರೋಪ ಮಾಡಿರುವ ನಾಲ್ಕು ಜನರ ಪೈಕಿ ನವೀನ್ ಎಂಬುವರು, ಮೇಘನಾ ಪ್ರೀತಿಸುತ್ತಿದ್ದ ಕಿರುತೆರೆ ನಟ ಹರೀಶ್ ಅವರ ಸಹೋದರ ಎಂಬುದು. ಹೀಗಾಗಿ, ಈ ಪ್ರಕರಣ ಈಗ ಸಾಕಷ್ಟು ಗೊಂದಲ ಸೃಷ್ಠಿಸಿದೆ.

ನಿಜಕ್ಕೂ, ಮೇಘನಾ ಅವರ ಮೇಲೆ ನವೀನ್ ಹಲ್ಲೆ ಮಾಡಿದ್ದಾರಾ? ನಟಿ ಮೇಘನಾ ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವೇನು? ಈ ಘಟನೆ ನಡೆದಿದ್ದು ಯಾವಾಗ? ಎಂಬ ಸಂಪೂರ್ಣ ವರದಿ ಇಲ್ಲಿದೆ ನೋಡಿ...

ಕಿರುತೆರೆ ನಟ ಹರೀಶ್ ಸಹೋದರನ ಮೇಲೆ ಆರೋಪ

ಕಿರುತೆರೆ ನಟ ಹರೀಶ್ ಅವರ ಸಹೋದರ ನವೀನ್ ಹಾಗೂ ಆತನ ಸ್ನೇಹಿತರು ಸೇರಿ, ನಟಿ ಮೇಘನಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಮೇಘನಾ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

''ನವೀನ್ ಹಾಗೂ ಆತನ ಜೊತೆ ಸ್ನೇಹಿತರು, ರಾತ್ರಿ ಎರಡು ಗಂಟೆಗೆ ನಮ್ಮ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆ ಮಾಡಿ, ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನ ಕೊಂಡೊಯ್ದಿದ್ದಾರೆ. 1 ಲಕ್ಷ ರೂಪಾಯಿ ಹಣದ ಜೊತೆಗೆ, ಒಂದು ಬೈಕ್ ಮತ್ತು ಸ್ಕೋಡಾ ಕಾರನ್ನ ತೆಗೆದುಕೊಂಡು ಹೋಗಿದ್ದಾರೆ.'' ಎಂದು ದೂರಿನಲ್ಲಿ ಹೇಳಿದ್ದಾರೆ.

ಮೇಘನಾ ಆರೋಪದ ಬಗ್ಗೆ ನವೀನ್ ಹೇಳಿದ್ದೇನು,?

''ಮೇಘನಾ ಅವರ ಮನೆಗೆ ತೆರಳಿದ ಸಂದರ್ಭದಲ್ಲಿ ನಾವು ಯಾವುದೇ ಗಲಾಟೆ ಮಾಡಿರಲಿಲ್ಲ. ನಾವು ಅವರ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಮೇಘನಾ ಅವರೇ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ನಾವು ರಾತ್ರಿ ಸಮಯದಲ್ಲಿ ಅವ್ರ ಮನೆಗೆ ತೆರಳಿದ್ದು ನಿಜ. ಅವರು ತುಂಬ ಬ್ಯುಸಿ ಆಗಿದ್ದ ಕಾರಣ ನಮಗೆ ಸಿಗುತ್ತಿರಲಿಲ್ಲ. ಆದ್ದರಿಂದ ಆ ಸಮಯದಲ್ಲಿ ಮನೆ ಬಳಿ ತೆರಳಿದ್ವಿ''-ನವೀನ್

ಅಣ್ಣನ ವಸ್ತುಗಳನ್ನ ಪಡೆಯಲು ಹೋಗಿದ್ವಿ

''ಮೇಘನಾ ಅವರ ಮನೆಯಲ್ಲಿದ್ದ ಅಣ್ಣನಿಗೆ ಸೇರಿದ ವಸ್ತುಗಳನ್ನು ಮಾತ್ರ ನಾವು ಕೇಳಿದ್ದೇವು. ಅವರಿಂದ ಪಡೆಯಬೇಕಾದ ವಸ್ತುಗಳು, ಡಾಕ್ಯುಮೆಂಟ್ ಗಳನ್ನು ಪಡೆದುಕೊಂಡಿದ್ದೇವಷ್ಟೇ. ಅತ್ತಿಗೆ ಸಮಾನರೆಂದು ನಾನು ಅವರ ಮನೆಗೆ ತೆರಳಿದ್ದೆ. ಆದ್ರೆ, ಅವರು ಈ ವಿಷಯವನ್ನು ಏಕೆ ಇಷ್ಟರಮಟ್ಟಿಗೆ ದೊಡ್ಡದು ಮಾಡಿದ್ದಾರೋ ತಿಳಿಯುತ್ತಿಲ್ಲ'' ಎಂದಿದ್ದಾರೆ ನವೀನ್.

ಈ ಘಟನೆ ನಡೆದಿದ್ದು ಯಾವಾಗ,?

ಈ ಘಟನೆ ನಡೆದಿದ್ದು ಸೆಪ್ಟಂಬರ್ 25ರಂದು ರಾತ್ರಿ. ಮೇಘನಾ ಅವರು ದೂರು ದಾಖಲಿಸಿರುವುದು ಅಕ್ಟೋಬರ್ 19ರಂದು. ಈಗ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹರೀಶ್ ಜೊತೆ ವಾಸವಿದ್ದ ಮೇಘನಾ

'ಅರಗಿಣಿ' ಧಾರವಾಹಿಯಲ್ಲಿ ನಟ ಹರೀಶ್ ಹಾಗೂ ಮೇಘನಾ ಒಟ್ಟಿಗೆ ಅಭಿನಯಿಸುತ್ತಿದ್ದರು. ಈ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಕೂಡ ಆಗಿತ್ತು. ತದ ನಂತರ ಮದುವೆ ಆಗಲು ಕೂಡ ಇಬ್ಬರು ನಿರ್ಧರಿಸಿದ್ದರು. ಹೀಗಾಗಿ, ಕಳೆದ 8 ತಿಂಗಳಿಂದ 'ಬೆಮಲ್ ಲೇಔಟ್'ನಲ್ಲಿ ಮೇಘನಾ ಹಾಗೂ ಹರೀಶ್ 'ಲಿವಿಗ್ ರಿಲೆಶನ್ ಷಿಪ್'ನಲ್ಲಿ ವಾಸವಾಗಿದ್ದರು.

ಅಕಾಲಿಕ ಮರಣಕ್ಕೆ ತುತ್ತಾದ ನಟ ಹರೀಶ್

ಸೆಪ್ಟಂಬರ್ 7 ಕಿರುತೆರೆ ನಟ ಹರೀಶ್ ಅನಾರೋಗ್ಯದ ಕಾರಣದಿಂದ ಅಕಾಲಿಕ ಮರಣಕ್ಕೆ ತ್ತುತ್ತಾದರು. ಡೆಂಗ್ಯೂನಿಂದ ಬಳುತ್ತಿದ್ದ ಹರೀಶ್ ಬಹು ಅಂಗಾಗ ವೈಪಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಯಲ್ಲಿ ನಿಧನರಾಗಿದ್ದರು.

ಸಾವಿನ ನಂತರದ ಬೆಳವಣಿಗೆ

ಹೀಗೆ, ಹರೀಶ್ ನಿಧನದಿಂದ ಕುಗ್ಗಿ ಹೋಗಿದ್ದ ನಟಿ ಮೇಘನಾ ಒಂಟಿಯಾಗಿ ಅದೇ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಹರೀಶ್ ಅವರ ಸಹೋದರ ನವೀನ್, ಮೇಘನಾ ಅವರ ಮನೆಗೆ ಬಂದು ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಈಗ ಬೆಳಕಿಗೆ ಬಂದಿದೆ.

ಸತ್ಯಾಂಶವನ್ನ ಪೊಲೀಸರೇ ತನಿಖೆ ಮಾಡಬೇಕು

ನಟಿ ಮೇಘನಾ ದೂರನ್ನ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರದ ಪೊಲೀಸರು ನವೀನ್ ಅವರನ್ನ ಕರೆಸಿ ವಿಚಾರಣೆ ಮಾಡಿದ್ದಾರೆ. ಇಬ್ಬರ ಹೇಳಿಕೆಗಳನ್ನ ಪಡೆದುಕೊಂಡಿರುವ ಪೊಲೀಸರು ಈಗ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಒಟ್ನಲ್ಲಿ, ಈ ಪ್ರಕರಣದ ಸತ್ಯಾಂಶವೇನು ಎಂಬುದನ್ನ ತನಿಖೆಯಿಂದ ಮಾತ್ರ ತಿಳಿಯಬೇಕಿದೆ.

English summary
Kannada TV serial Actress Meghana, complaint against her dead boy friend' brother. Naveen and his friends attempting to molest her, after he allegedly tried to force her to handover some valuable and appliances in her house in Bengaluru. Actress Meghana says to police

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada