»   » ಲೈಂಗಿಕ ಕಿರುಕುಳದ ಬಗ್ಗೆ ಖಾರವಾಗಿ ಮಾತನಾಡಿದ ಕಿಂಗ್ ಖಾನ್

ಲೈಂಗಿಕ ಕಿರುಕುಳದ ಬಗ್ಗೆ ಖಾರವಾಗಿ ಮಾತನಾಡಿದ ಕಿಂಗ್ ಖಾನ್

Posted By:
Subscribe to Filmibeat Kannada

ಕಲಾವಿದರ ಮೇಲೆ ಲೈಂಗಿಕ ಕಿರುಕುಳ ಆಗುತ್ತಿದೆ ಎನ್ನುವ ವಿಚಾರ ಸದ್ಯ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಎಲ್ಲೆಡೆ ಈ ವಿಚಾರ ಚರ್ಚೆ ಆಗುತ್ತಿದೆ. ಒಂದಾದ ನಂತರ ಮತ್ತೊಂದರಂತೆ ನಟಿಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಲೇ ಇದೆ. ನಟಿಯರು ಕೂಡ ಯಾವುದೇ ಅಂಜಿಕೆ ಇಲ್ಲದೆ ಕಾಮುಕರನ್ನ ಮಟ್ಟ ಹಾಕುವ ಕೆಲಸವನ್ನ ಮಾಡುತ್ತಿದ್ದಾರೆ.

ಬಾಲಿವುಡ್ ಅಂಗಳದಲ್ಲಿಯೂ ಸದ್ಯ ಈ ವಿವಾರದ ಬಗ್ಗೆ ಚರ್ಚೆ ಆಗುತ್ತಿದ್ದು ಕಿಂಗ್ ಖಾನ್ ಶಾರುಖ್ ಲೈಂಗಿಕ ಕಿರುಕುಳದ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಎನ್ನುವುದಕ್ಕಿಂತಲೂ "ನಾನು ಅಭಿನಯಿಸುವ ಸಿನಿಮಾ ಸೆಟ್ ಹಾಗೂ ನಮ್ಮ ನಿರ್ಮಾಣದ ಚಿತ್ರಗಳ ಸೆಟ್ ನಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲು ಯಾರೊಬ್ಬರಿಗೂ ಧೈರ್ಯವಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ರೈಲಿನಲ್ಲೇ ಬುದ್ದಿ ಕಲಿಸಿದ ನಟಿ

ದಾವೋಸ್ನಲ್ಲಿ ಕ್ರಿಸ್ಟಲ್ ಅವಾರ್ಡ್ ಪಡೆದುಕೊಂಡ ನಂತರ ಮಾಧ್ಯಮಗಳ ಮುಂದೆ ಶಾರುಖ್ ಖಾನ್. "ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಮತ್ತು ಕೆಲಸದಲ್ಲಿ ಅವರನ್ನೂ ಸಮಾನತೆಯಿಂದ ನೋಡುತ್ತೇನೆ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ನಿರ್ಮಾಣದ ಸಂಸ್ಥೆಯಲ್ಲಿ ತೆರೆಗೆ ಬರುವ ಸಿನಿಮಾದಲ್ಲಿ ನಾಯಕನಿಗೂ ಮುಂಚೆ ನಾಯಕಿಯ ಹೆಸರನ್ನ ಹಾಕಲಾಗುತ್ತದೆ". ಎಂದಿದ್ದಾರೆ.

Shahrukh Khan speaks of sexual harassment

ಇವೆಲ್ಲವೂ ಚಿಕ್ಕ ಪುಟ್ಟ ವಿಚಾರ ಎನ್ನಿಸಬಹುದು ಆದರೆ ಸಮಾನತೆ ಎಲ್ಲಾ ವಿಚಾರದಲ್ಲೂ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ. ಸದ್ಯ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

English summary
Bollywood actor Shahrukh Khan speaks of sexual harassment. Shah Rukh said Sexual Misconduct In Bollywood but Nobody Dared Misbehave With A Woman On My Set.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X