twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ವೇದಿಕೆಯಲ್ಲಿ ಶಾರೂಖ್, ರಜನಿ, ಶಿವಣ್ಣ, ಸುದೀಪ್

    |

    ದಕ್ಷಿಣಭಾರತ ಮತ್ತು ಶೇಷ ಭಾರತದ ಕಲಾವಿದರು ಒಂದೇ ವೇದಿಕೆಯಲ್ಲಿ ಸಮಾಗಮವಾಗುವ ವೇದಿಕೆಗೆ ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಭಾರತೀಯ ಸಿನಿಮಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣಭಾರತದ ಮತ್ತು ಬಾಲಿವುಡ್ ಕಲಾವಿದರು ಭಾಗವಹಿಸಲಿದ್ದಾರೆ.

    ಸೆಪ್ಟಂಬರ್ ಒಂದರಿಂದ ಮೂರರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದಶಾ ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್, ಕಮಲಹಾಸನ್, ಮೋಹನ್ ಲಾಲ್ ಮತ್ತು ಕನ್ನಡ ಚಿತ್ರರಂಗದ ಕಲಾವಿದರು ಭಾಗವಹಿಸಲಿದ್ದಾರೆ.

    ಇಷ್ಟೇ ಅಲ್ಲದೆ, ಹಾಲಿವುಡ್ ನಟ ಸ್ಟೀಫನ್ ಸ್ಪೈಬರ್ಗ್, ಜಾಕಿ ಚಾನ್ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಕಳುಹಿಸಲಾಗಿದೆ. ಶಾರೂಖ್ ಖಾನ್ ಮತ್ತು ರಜನೀಕಾಂತ್ ಜೊತೆ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡಲಿದ್ದಾರೆ ಎನ್ನುವುದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ.

    ಈ ಕಾರ್ಯಕ್ರಮಕ್ಕಾಗಿಯೇ ವಿಶೇಷ ಹಾಡು ತಯಾರಿಸಲು ನಿರ್ಧರಿಸಲಾಗಿದ್ದು, ಎ ಆರ್ ರೆಹಮಾನ್ ಅಥವಾ ಇಳಯರಾಜ ಹಾಡಿಗೆ ಸಂಗೀತ ಸಂಯೋಜಿಸಲಿದ್ದಾರೆ.

    ಕಾರ್ಯಕ್ರಮದ ಬಗ್ಗೆ ಇನ್ನಷ್ಟು..

    ಎ ಆರ್ ರೆಹಮಾನ್ ಅಥವಾ ಇಳಯರಾಜ

    ಎ ಆರ್ ರೆಹಮಾನ್ ಅಥವಾ ಇಳಯರಾಜ

    ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದ ದಕ್ಷಿಣಭಾರತ ಫಿಲಂ ಚೇಂಬರ್ ಕಾರ್ಯದರ್ಶಿ ರವಿ ಕೊಟ್ಟಾರಕರ, ಇಳಯರಾಜ ಮತ್ತು ರೆಹಮಾನ್ ಅವರಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಹಾಡು ರೂಪಿಸಲು ಕೇಳಿಕೊಳ್ಳಲಾಗಿದೆ. ವೇದಿಕೆಯಲ್ಲಿ ದಕ್ಷಿಣ ಮತ್ತು ಬಾಲಿವುಡ್ ದಿಗ್ಗಜರ ನೃತ್ಯ ಪ್ರದರ್ಶನವಿರುತ್ತದೆ.

    ಅತಿರಥ ಮಹಾರಥಿಗಳು ಕಾರ್ಯಕ್ರಮದಲ್ಲಿ

    ಅತಿರಥ ಮಹಾರಥಿಗಳು ಕಾರ್ಯಕ್ರಮದಲ್ಲಿ

    ಈ ಅಪರೂಪದ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಕಮಲಹಾಸನ್, ರಜನೀಕಾಂತ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಉಪೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.

    ಶತಮಾನೋತ್ಸವದ ಕಟ್ಟಡ

    ಶತಮಾನೋತ್ಸವದ ಕಟ್ಟಡ

    ನೂರರ ಸಂಭ್ರಮದ ಸ್ಮರಣಾರ್ಥ ಚೆನ್ನೈನಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕಟ್ಟಡದಲ್ಲಿ ಪ್ರಿವ್ಯೂ ಹಾಲ್ ಜೊತೆ ಇತರ ಮೇಲ್ದರ್ಜೆ ಸೌಲಭ್ಯವಿರಲಿದೆ ಎಂದು ಚೇಂಬರ್ ಕಾರ್ಯದರ್ಶಿ ರವಿ ಕೊಟ್ಟಾರಕರ ಹೇಳಿದ್ದಾರೆ.

    ಫೋಟೋಗ್ರಾಫಿ ಪ್ರದರ್ಶನ

    ಫೋಟೋಗ್ರಾಫಿ ಪ್ರದರ್ಶನ

    ಈ ಮೂರು ದಿನದ ಕಾರ್ಯಕ್ರಮದಲ್ಲಿ ದಕ್ಷಿಣಭಾರತದ ಚಿತ್ರಗಳಾದ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗ ಬೆಳೆದು ಬಂದ ಬಗ್ಗೆ ಮತ್ತು ಜನಪ್ರಿಯಗೊಂಡಿದ್ದ ಚಿತ್ರಗಳ ಬಗ್ಗೆ ಫೋಟೋಗ್ರಾಫಿ ಪ್ರದರ್ಶನವಿರಲಿದೆ.

    ಕಾರ್ಯಕ್ರಮಕ್ಕೆ ಚೆನ್ನೈ ಆಯ್ಕೆ

    ಕಾರ್ಯಕ್ರಮಕ್ಕೆ ಚೆನ್ನೈ ಆಯ್ಕೆ

    ಈ ಕಾರ್ಯಕ್ರಮಕ್ಕೆ ಚೆನ್ನೈ ನಗರವನ್ನು ಆಯ್ಕೆ ಮಾಡಿರುವ ಉದ್ದೇಶ, ದಕ್ಷಿಣಭಾರತದ ಚಿತ್ರಗಳಿಗೆ ಚೆನ್ನೈ ರಾಜಧಾನಿ ಇದ್ದಂತೆ. ಕಾರ್ಯಕ್ರಮದಲ್ಲಿ ಎಲ್ಲಾ ನಾಲ್ಕು ಭಾಷೆಯ ಸುಮಾರು ಐವತ್ತು ತಾಂತ್ರಿಕ ವರ್ಗದವರಿಗೆ ಸನ್ಮಾನ ಮಾಡಲಾಗುವುದು ಎಂದು ಚೇಂಬರ್ ಅಧ್ಯಕ್ಷ ಸಿ ಕಲ್ಯಾಣ್ ಹೇಳಿದ್ದಾರೆ.

    ರಾಜ್ ಕುಟುಂಬಕ್ಕೆ ವಿಶೇಷ ಆಹ್ವಾನ

    ರಾಜ್ ಕುಟುಂಬಕ್ಕೆ ವಿಶೇಷ ಆಹ್ವಾನ

    ಕನ್ನಡದ ವರನಟ ಡಾ. ರಾಜಕುಮಾರ್ ಕುಟುಂಬಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸುವಂತೆ ಪಾರ್ವತಮ್ಮ ರಾಜಕುಮಾರ್ ಅವರಲ್ಲಿ ಕೇಳಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿಗಳು ಹೇಳಿದ್ದಾರೆ.

    ನಾಲ್ಕೂ ರಾಜ್ಯದ ಸಿಎಂ

    ನಾಲ್ಕೂ ರಾಜ್ಯದ ಸಿಎಂ

    ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ನಾಲ್ಕೂ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    English summary
    The South Indian film industries - Kannada, Malayalam, Telugu and Tamil - will be coming together to celebrate the 100 years of Indian cinema.
    Tuesday, July 16, 2013, 10:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X