»   » ಶಕೀಲಾ ಜೀವನಚರಿತ್ರೆ ಬಾಲಿವುಡ್ ಬೆಳ್ಳಿ ಪರದೆ ಮೇಲೆ.!

ಶಕೀಲಾ ಜೀವನಚರಿತ್ರೆ ಬಾಲಿವುಡ್ ಬೆಳ್ಳಿ ಪರದೆ ಮೇಲೆ.!

Posted By: ಹರಾ
Subscribe to Filmibeat Kannada

ಒಂದ್ಕಾಲದಲ್ಲಿ ಪಡ್ಡೆ ಹೈಕಳ ಶೃಂಗಾರ ಕನಸುಗಳಿಗೆ ಪ್ರತಿರೂಪವಾಗಿದ್ದ ರತಿದೇವತೆ ಶಕೀಲಾ ಅವರ ಜೀವನಚರಿತ್ರೆ ಈಗ ಸಿನಿಮಾ ಆಗುತ್ತಿದೆ. ಅದು ಬಾಲಿವುಡ್ ನಲ್ಲಿ. ಹಾಗೆ, ಬಾಲಿವುಡ್ ನಲ್ಲಿ ಶಕೀಲಾ ಆತ್ಮಕಥೆಯನ್ನ ಚಿತ್ರ ಮಾಡುವುದಕ್ಕೆ ಹೊರಟಿರುವುದು ಕನ್ನಡದ ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್.

ಇಂದ್ರಜಿತ್ ಲಂಕೇಶ್ ಗೆ ಬಾಲಿವುಡ್ ನಲ್ಲಿ ಸಿನಿಮಾ ಮಾಡಬೇಕು ಅನ್ನುವ ಆಸೆ ಇಂದು ನಿನ್ನೆಯದ್ದಲ್ಲ. ವರ್ಷಗಳಿಂದ ಬಿಟೌನ್ ಗೆ ಹಾರುವ ಬಗ್ಗೆ ತಯಾರಿ ನಡೆಸುತ್ತಿದ್ದ ಇಂದ್ರಜಿತ್ ಸೂಕ್ತ ಸ್ಕ್ರಿಪ್ಟ್ ಹುಡುಕಾಟದಲ್ಲಿದ್ದರು. ಅವರ ಕಣ್ಣು ಈಗ ಮಲಯಾಳಂ ಹಾಟ್ ಬಾಂಬ್ ಶಕೀಲಾ ಮೇಲೆ ಬಿದ್ದಿದೆ. [ಶಕೀಲಾ ಆತ್ಮಕಥೆಯ ಕೆಲವು ಕಣ್ಣೀರ ಪುಟಗಳು]

Shakeela's biopic in Bollywood to be directed by Indrajith Lankesh

ಕಳೆದ ವರ್ಷವಷ್ಟೇ ರಿಲೀಸ್ ಆಗಿದ್ದ ಶಕೀಲಾ ಅವರ ಆತ್ಮಕಥೆ ಪುಸ್ತಕದಿಂದ ಶಕೀಲಾ ಬೆಳೆದು ಬಂದ ದಾರಿ, ಅನುಭವಿಸಿದ ಯಾತನೆ ಬಗ್ಗೆ ಓದಿ ತಿಳಿದುಕೊಂಡಿರುವ ಇಂದ್ರಜಿತ್ ಲಂಕೇಶ್, ಅದನ್ನ ಬೆಳ್ಳಿಪರದೆ ಮೇಲೆ ತರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಶಕೀಲಾ ಜೊತೆ ಮಾತುಕತೆ ನಡೆಸಿ ಸಮ್ಮತಿ ಕೂಡ ಪಡೆದಿದ್ದಾರೆ ಇಂದ್ರಜಿತ್ ಲಂಕೇಶ್. [ಅತ್ಯಾಚಾರಕ್ಕೆ ಒಳಗಾದ ನೋವು ತೆರೆದಿಟ್ಟ ಶಕೀಲಾ]

Shakeela's biopic in Bollywood to be directed by Indrajith Lankesh

ಅಂದ್ಹಾಗೆ, ಬಾಲಿವುಡ್ ನಲ್ಲಿ ಶಕೀಲಾ ಪಾತ್ರವನ್ನ ನಿರ್ವಹಿಸಲು ಒಪ್ಪಿಕೊಂಡಿರುವ ಬೋಲ್ಡ್ ನಟಿ ಹುಮಾ ಖುರೇಷಿ. 'ಗ್ಯಾಂಗ್ಸ್ ಆಫ್ ವಸ್ಸೇಪುರ್', 'ಇಷ್ಕಿಯಾ-2' ಚಿತ್ರಗಳಲ್ಲಿ ನಟಿಸಿರುವ ಹುಮಾ ಖುರೇಶಿ, ಶಕೀಲಾ ಪಾತ್ರ ಪೋಷಿಸಬೇಕು ಅಂದಾಕ್ಷಣ ಹಿಂದು ಮುಂದು ನೋಡದೆ ಒಪ್ಪಿಕೊಂಡರಂತೆ. [ಶಕೀಲಾ ಸಂಪಾದನೆಯಲ್ಲಾ ಯಾರು ಲಪಟಾಯಿಸಿದರು?]

ಇಂದ್ರಜಿತ್ ಲಂಕೇಶ್ ಕನ್ನಡದವರೇ ಆದರೂ, ಶಕೀಲಾ ರವರ ಜೀವನಚರಿತ್ರೆ ಆಧರಿಸುವ ಸಿನಿಮಾನ ಹಿಂದಿಯಲ್ಲಿ ಮಾತ್ರ ರೆಡಿ ಮಾಡಲಿದ್ದಾರೆ.

English summary
Actress Shakeela's biopic will be made in Bollywood by Kannada Director Indrajith Lankesh. Bollywood Actress Huma Qhureshi has roped into play the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada