For Quick Alerts
  ALLOW NOTIFICATIONS  
  For Daily Alerts

  ಅಶ್ವಥ್ ಮನೆಗೆ ನಂದ ದೀಪವಾದ ದರ್ಶನ್ ತೂಗುದೀಪ

  By Pavithra
  |
  ದರ್ಶನ್ ಸ್ನೇಹ ಜೀವಿ ಅನ್ನೋದು ಮತ್ತೊಮ್ಮೆ ಸಾಬೀತಾಯಿತು..! | FIlmibeat Kannada

  ಕನ್ನಡ ನಟ ದರ್ಶನ್ ಸ್ನೇಹಜೀವಿ. ಕಷ್ಟದಲ್ಲಿರುವವರನ್ನು ಕಂಡರೆ ಮರುಗುತ್ತಾರೆ. ತಮ್ಮ ಸುತ್ತ ಮತ್ತ ಇರುವವರ ಕೈ ಹಿಡಿದು ನಡೆಸುವ ನಟ. ಈ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿರುವಂತದ್ದು. ದರ್ಶನ್ ವ್ಯಕ್ತಿತ್ವವೇ ಹಾಗೆ.

  ದರ್ಶನ್.. ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವಕಾಶಗಳಿಲ್ಲದೆ ಕ್ಯಾಬ್ ಡ್ರೈವರ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದಂತೆ ತಮ್ಮ ಚಿತ್ರದಲ್ಲಿ ಪಾತ್ರವೊಂದು ನೀಡುವಂತೆ ಚಿತ್ರತಂಡಕ್ಕೆ ತಿಳಿಸಿದ್ದರು. ಅದರಂತೆಯೇ 'ಯಜಮಾನ' ಚಿತ್ರದಲ್ಲಿಯೂ ಶಂಕರ್ ಅಶ್ವಥ್ ಅಭಿನಯಿಸುತ್ತಿದ್ದಾರೆ.

  ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ದರ್ಶನ್ ಕೊಟ್ಟ ಕಾಣಿಕೆಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ದರ್ಶನ್ ಕೊಟ್ಟ ಕಾಣಿಕೆ

  ಚಾಲೆಂಜಿಂಗ್ ಸ್ಟಾರ್, ಅಶ್ವಥ್ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಸಾಕಷ್ಟು ಭಾರಿ ಸಹಾಯ ಮಾಡಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆಯನ್ನು ಶಂಕರ್ ಅಶ್ವಥ್ ಅವರೇ ತಿಳಿಸಿದ್ದಾರೆ. ಡಿ ಬಾಸ್ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ತೂಗುದೀಪ ಶ್ರೀನಿವಾಸ್ ಹಾಗೂ ಅಶ್ವಥ್ ಸ್ನೇಹಿತರು

  ತೂಗುದೀಪ ಶ್ರೀನಿವಾಸ್ ಹಾಗೂ ಅಶ್ವಥ್ ಸ್ನೇಹಿತರು

  "ಅಶ್ವಥ್- ಚಾಮಯ್ಯ ನನ್ನ ತಂದೆ ಹಾಗು ತೂಗುದೀಪ ಶ್ರೀನಿವಾಸ್ ರವರು ಸಾಕಷ್ಟು ಹತ್ತಿರವಾಗಿದ್ದರು. ಒಂದು ಮೈಸೂರಿನವರು ಇನ್ನೊಂದು ಅಣ್ಣಾ ಅವರ ಕಂಪನಿಯಲ್ಲಿ ಸುಮಾರು ಚಿತ್ರಗಳಲ್ಲಿ ನಟಿಸುವ ಅವಕಾಶ. ತೂಗುದೀಪ ಅವರ ಆರೋಗ್ಯ ಕೆಟ್ಟಾಗ ಅನೇಕ ಬಾರಿ ಅವರನ್ನು ನೋಡಲು ಹೋಗುತ್ತಿದ್ದರು".

  ದರ್ಶನ್ ಒಳ್ಳೆ ಮನಸ್ಸಿನ ಗುಣಗಾನ

  ದರ್ಶನ್ ಒಳ್ಳೆ ಮನಸ್ಸಿನ ಗುಣಗಾನ

  "ಅದೇ ನನ್ನ ತಂದೆ ತೀರಿಕೊಂಡಾಗ ಬೆಂಗಳೂರಿನಿಂದ ಬಂದು ಅಂತಿಮ ದರ್ಶನವನ್ನು ದರ್ಶನ್ರವರು ಪಡೆದರು. ಸಂತೋಷ ಸಮಾರಂಭಗಳು ಮದುವೆ,ಹುಟ್ಟಿದ ಹಬ್ಬ ಇತ್ಯಾದಿಗಳಿಗೆ ಹೋದಾಗ ಎಲ್ಲಾ ಮುಯ್ಯಿ ಕೊಡುತ್ತಾರೆ, ಅದೇ ಸಾವಿಗೆ ಹೋದಾಗ ಅಬ್ಬಬಾ ಅಂದರೆ ಕಣ್ಣೀರು ಹಾಕುತ್ತಾರೆ. ಹಿರಿಯರು ಮನೆಯಲ್ಲಿ ತೀರಿಕೊಂಡಾಗ ತಕ್ಷಣವೇ ಕೈಕಾಲುಗಳು ಓಡಾಡುವುದಿಲ್ಲ.ಅದಕ್ಕೆ ಅನೇಕ ಕಾರಣಗಳು ಸಮಸ್ಯೆಗಳು ಇರುತ್ತವೆ.ಅದರಲ್ಲಿ ಎಷ್ಟೋ ಬಡವರ ಮನೆಯಲ್ಲಿ ಹಣದ ಮುಗ್ಗಟ್ಟು ಬಹಳವಾಗಿ ಇರುತ್ತದೆ.ಅದರ ಬಗ್ಗೆ ಹೆಚ್ಚು ಗಮನ ಯಾರೂ ಕೊಡುವುದಿಲ್ಲ. ಆದರೆ ಯಾರಿಗೂ ಗೊತ್ತಾಗಾದ ಹಾಗೆ ಕಿಸೆಯಿಂದ ಹಣವನ್ನು ತೆಗೆದು ಕೊಟ್ಟು ಸದ್ದಿಲ್ಲದೆ ನಿರ್ಗಮಿಸಿದರು".

  ಆತ್ಮೀಯರ ಜೀವನ ಬೆಳಗಿಸುತ್ತಿರುವ ದರ್ಶನ್

  ಆತ್ಮೀಯರ ಜೀವನ ಬೆಳಗಿಸುತ್ತಿರುವ ದರ್ಶನ್

  "ವ್ಯಕ್ತಿ ಬರೀ ತನ್ನ ಮನೆಯ ತೂಗುದೀಪವನ್ನು ಬೆಳಗಿಸದೆ ಇಡೀ ನಾಡಿನ ದೀಪವನ್ನು ಬೆಳಗಿಸುತ್ತಿರುವ ದರ್ಶನ ತೂಗುದೀಪ. ಗಲಾಟೆಯ ಮಧ್ಯೆ ಇದ್ದ ನಮಗೆ ಇದರ ಅರಿವು ಬಂದದ್ದು ನಾವು ನಂತರ ದಿನಗಳಲ್ಲಿ ವಿಡಿಯೋ ನೋಡಿದಾಗ ಅದೃಷ್ಟವಶಾತ್ ಗೊತ್ತಾಯ್ತು.ಇದರ ಬಗ್ಗೆ ಸಂದರ್ಶನದಲ್ಲಿ ಕೇಳಿದಾಗ ಉತ್ತರ ಕೊಡಲು ಹಿಂಜರಿದರು".

  ದೇವರಂಥ ಮನುಷ್ಯ ದರ್ಶನ್

  ದೇವರಂಥ ಮನುಷ್ಯ ದರ್ಶನ್

  "ಆಮೇಲೆ ನನ್ನ ಬಲವಂತಕ್ಕೆ ಹೇಳಿದ್ದು- ನನ್ನ ತಂದೆಯ ಕಡೆದಿನಗಳಲ್ಲಿ ನೋಡಲು ಹೆಚ್ಚು ಬಂದದ್ದು ಅಶ್ವಥ್ ಅಂಕಲ್, ಆ ಋಣಕ್ಕಾದರೂ.... ಇದು ತೆರೆಯ ಮೇಲೆ ಬಂದ ಪಾತ್ರವಲ್ಲ, ನೈಜಿಕತೆಯ ಒಂದು ನಡುವಳಿಕೆ. ಇಂತಹದ್ದನ್ನು ಯಾರೇ ಮಾಡಿದರು ಅಂತಹ ವ್ಯಕ್ತಿಯನ್ನು ದೊಡ್ಡ ವ್ಯಕ್ತಿ ಎನ್ನುತ್ತೇವೆ. ನಾವು ಇನ್ನೊಬ್ಬರ ನೋವನ್ನು ಅರಿಯುವ ಸಂಸ್ಕಾರ ಉಳ್ಳ ಸಹೃದಯಿಯನ್ನು "ದೇವರಂಥ ಮನುಷ್ಯ"" ಎಂದು ಕರೆಯಬಹುದಲ್ಲವೆ" ಶಂಕರ್ ಅಶ್ವಥ್.

  English summary
  Kannada actor Shankar Ashwath has written about Darshan on Facebook He also commented on Darshan's help.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X