For Quick Alerts
  ALLOW NOTIFICATIONS  
  For Daily Alerts

  ಪರೋಕ್ಷವಾಗಿ ಅಶ್ವಥ್ ಕುಟುಂಬಕ್ಕೆ ನೆರವಾದರಾ ಡಿ ಬಾಸ್ ?

  By Pavithra
  |
  ಅಶ್ವಥ್ ಕುಟುಂಬಕ್ಕೆ ನೆರವಾದರಾ ದರ್ಶನ್ ? | FIlmibeat kannada

  ಕನ್ನಡ ಸಿನಿಮರಂಗದಲ್ಲಿ ಚಾಮಯ್ಯ ಮೇಷ್ಟ್ರು ಅಂತಾನೇ ಪ್ರಖ್ಯಾತಿ ಗಳಿಸಿದ್ದ ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ಸಾಕಷ್ಟು ದಿನಗಳು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಶಂಕರ್ ಅವರು ಅವಕಾಶವಿಲ್ಲದೆ ಜೀವನಕ್ಕಾಗಿ ಡ್ರೈವರ್ ಕೆಲಸವನ್ನ ಆಯ್ಕೆ ಮಾಡಿಕೊಂಡಿದ್ದರು.

  ಸಿನಿಮಾರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿದ್ದ ಹಿರಿಯ ನಟನ ಮಗ ಹಾಗೂ ಅದ್ಬುತ ಕಲಾವಿದರಾಗಿದ್ದ ಶಂಕರ್ ಅವರಿಗೆ ಅವಕಾಶಗಳ ಕೊರೆತೆ ಇದೆ ಎನ್ನುವುದನ್ನ ತಿಳಿದು ಸಾಕಷ್ಟು ಕಲಾವಿದರು ಬೇಸರ ವ್ಯಕ್ತ ಪಡಿಸಿದ್ದರು.

  ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

  ಇನ್ನೂ ಅನೇಕ ಹಿರಿಯ ಕಲಾವಿದರು ಈಗಿನ ನಿರ್ದೇಶಕರುಗಳಿಗೆ ನಮ್ಮ ಅವಶ್ಯಕತೆ ಇಲ್ಲ ಆದ್ದರಿಂದ ನಾವು ಬೇರೆಯದ್ದೇ ಕೆಲಸಗಳನ್ನ ಹುಡಿಕಿಕೊಳ್ಳಬೇಕಾಗಿದೆ ಎನ್ನುವ ಮಾತುಗಳನ್ನ ಹೇಳಿದ್ದರು. ಇದನ್ನ ಅರಿತ ಡಿ ಬಾಸ್ ಪರೋಕ್ಷವಾಗಿ ಅಶ್ವಥ್ ಅವರ ಕುಟುಂಬಕ್ಕೆ ನೆರವಾಗಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ಓದಿ.

  ಶಂಕರ್ ಅಶ್ವಥ್ ಅವರಿಗೆ ನೆರವಾದ್ರ ಡಿ ಬಾಸ್

  ಶಂಕರ್ ಅಶ್ವಥ್ ಅವರಿಗೆ ನೆರವಾದ್ರ ಡಿ ಬಾಸ್

  ನಟ ಶಂಕರ್ ಅಶ್ವಥ್ ಅವರ ಕುಟುಂಬಕ್ಕೆ ಪರೋಕ್ಷವಾಗಿ ದರ್ಶನ್ ನೆರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶಂಕರ್ ಅಶ್ವಥ್ ದರ್ಶನ್ ಅವರ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.

  ದರ್ಶನ್ ಚಿತ್ರದಲ್ಲಿ ಅಭಿನಯ

  ದರ್ಶನ್ ಚಿತ್ರದಲ್ಲಿ ಅಭಿನಯ

  ಅವಕಾಶಗಳ ಕೊರತೆಯಿಂದಾಗಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಶಂಕರ್ ಅಶ್ವಥ್ ಅವರಿಗೆ ದರ್ಶನ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಆಕ್ಟ್ ಮಾಡಲು ಅವಕಾಶ ಸಿಕ್ಕಿದೆ. ಈ ವಿಚಾರವನ್ನ ಶಂಕರ್ ಅವರೇ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.

  ಶಾಲಾ ಸ್ನೇಹಿತರಿಂದ ಡಿ ಬಾಸ್ ಗೆ ದೊರೆತ ಅಪೂರ್ವ ಕಾಣಿಕೆ

  ಅವಕಾಶ ನೀಡಿದ ಚಾಲೆಂಜಿಂಗ್ ಸ್ಟಾರ್

  ಅವಕಾಶ ನೀಡಿದ ಚಾಲೆಂಜಿಂಗ್ ಸ್ಟಾರ್

  ಸಿನಿಮಾರಂಗದಿಂದ ದೂರ ಸರಿದಿದ್ದ ಶಂಕರ್ ಅಶ್ವಥ್ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವಂತೆ ಚಿತ್ರತಂಡಕ್ಕೆ ದರ್ಶನ್ ತಿಳಿಸಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಹಾಗೆ ಆಗಿದ್ದಲ್ಲಿ ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಗೆ.

  ಊಬರ್ ಭಾಗ್ಯದಿಂದ ಅನೇಕರ ಭೇಟಿ

  ಊಬರ್ ಭಾಗ್ಯದಿಂದ ಅನೇಕರ ಭೇಟಿ

  ಜೀವನ ಸಾಗಿಸಲು ಟ್ಯಾಕ್ಸಿ ಡ್ರೈವರ್ ಆಗಿರುವ ಶಂಕರ್ ಅಶ್ವಥ್ ಅವರಿಗೆ ನಿಧಾನವಾಗಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಅಷ್ಟೇ ಅಲ್ಲದೆ ಕಾರಿನಲ್ಲಿ ನೋಡಿ ಗುರುತಿಸುತ್ತಿರುವವರು ಮನೆಗೆ, ಸಮಾರಂಭಗಳಿಗೆ ಕರೆದುಕೊಂಡು ಹೋಗಿ ಸತ್ಕಾರ ಮಾಡುತ್ತಿದ್ದಾರಂತೆ.

  ಶಿವಣ್ಣನ 'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ

  English summary
  Kannada actor Shankar Ashwath is acting in Darshan's Yajamana Kannada film. The film directed by P Kumar, Shankar Ashwath is the son of senior actor Ashwath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X