»   » ಬಾಕ್ಸಾಫೀಸ್ : ರಜನಿ 'ಲಿಂಗಾ' ಮುಂದೆ ವಿಕ್ರಮ್ 'ಐ' ಹಿಂದೆ

ಬಾಕ್ಸಾಫೀಸ್ : ರಜನಿ 'ಲಿಂಗಾ' ಮುಂದೆ ವಿಕ್ರಮ್ 'ಐ' ಹಿಂದೆ

Posted By:
Subscribe to Filmibeat Kannada

ಶಂಕರ್ ನಿರ್ದೇಶನದ ವಿಕ್ರಮ್ ಅಭಿನಯದ ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ 'ಐ'. ರಿಲೀಸ್ ಗೂ ಮುನ್ನ ಎಲ್ಲರ ಕುತೂಹಲ ಕೆರಳಿಸಿದ್ದ 'ಐ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ಗಂಟೆಗೂ ಹೆಚ್ಚು ಅವಧಿಯಿರುವ 'ಐ' ಚಿತ್ರವನ್ನ ನೋಡಿ 'ತಲೆನೋವು ಬಂತು' ಅನ್ನುವ ಪ್ರೇಕ್ಷಕರೇ ಹೆಚ್ಚು.

ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿದ್ದ ಸೂಪರ್ ಸ್ಟಾರ್‌ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರಕ್ಕೂ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ ಬಿಡಿ. ''ರಜನಿ ಚಿತ್ರದಿಂದ ಕೋಟಿ ಕೋಟಿ ಲಾಸ್ ಆಗಿದೆ'' ಅಂತ ವಿತರಕರು ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ನಿಮಗೆ ಗೊತ್ತಿದೆ.

vikram i

ಹೀಗಿದ್ದರೂ, ರಜನಿಯ 'ಲಿಂಗಾ' ಚಿತ್ರವನ್ನ ವಿಕ್ರಮ್ ಅಭಿನಯದ 'ಐ' ಹಿಂದಕ್ಕೆ ತಳ್ಳಿಲ್ಲ. ದಾಖಲೆ ಮಟ್ಟದ ಕಲೆಕ್ಷನ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಇನ್ನೂ ಮುಂದಿದ್ದಾರೆ. ಮೊದಲ ದಿನ ತಲೈವಾ ರಜನಿ ನಟನೆಯಲ್ಲಿ ಮೂಡಿಬಂದಿರುವ 'ಲಿಂಗಾ' 22 ಕೋಟಿ ಬಾಚಿತ್ತು. ಆದ್ರೆ, ವಿಕ್ರಮ್ 'ಐ' ಕಲೆಕ್ಟ್ ಮಾಡಿರುವುದು ಬರೀ 20.8 ಕೋಟಿ. [ಶಂಕರ್ 'ಐ' ವಿಮರ್ಶೆ: ತೆರೆಯ ಮೇಲೆ ಹೊಸ ವಿಕ್ರಮ]

ಇದು ಇಡೀ ಭಾರತದ ಒಟ್ಟು ಮೊತ್ತವಾಗಿದ್ದರೆ, ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲೂ 'ಐ' ಕಮಾಲ್ ಮಾಡಿಲ್ಲ. ಮೊದಲ ದಿನ ಕರ್ನಾಟಕದಲ್ಲಿ 'ಲಿಂಗಾ' 2.1 ಕೋಟಿ ಕಮಾಯಿ ಮಾಡಿತ್ತು. ಆದ್ರೆ 'ಐ' ಗಳಿಸಿರುವುದು ಕೇವಲ 1.9 ಕೋಟಿ. [ಶಂಕರ್ -ವಿಕ್ರಮ್ 'ಐ' ವಿಮರ್ಶಕರ ಮಿಶ್ರ ಪ್ರತಿಕ್ರಿಯೆ]

lingaa

ಇಡೀ ವಿಶ್ವದಾದ್ಯಂತ ಲೆಕ್ಕ ತೆಗೆದುಕೊಂಡರೆ, ಶಂಕರ್ ನಿರ್ದೇಶನದ 'ಐ' ಬರೋಬ್ಬರಿ 34 ಕೋಟಿ ಕಲೆಕ್ಷನ್ ಮಾಡಿದೆ. ಇದರಿಂದ, 'ಐ' ಚಿತ್ರ ಬಾಕ್ಸಾಫೀಸ್ ದಾಖಲೆಗಳನ್ನ ಪೀಸ್ ಪೀಸ್ ಮಾಡಲಿದೆ ಅನ್ನುವ ಅತಿಯಾದ ನಿರೀಕ್ಷೆ ಹುಸಿಯಾಗಿದೆ. ಲಾಸ್...ಲಾಸ್...ಅಂತ ಬಾಯಿಬಾಯಿ ಬಡಿದುಕೊಂಡರೂ, ಲೆಕ್ಕದ ವಿಚಾರದಲ್ಲಿ ರಜನಿ ಈಗಲೂ ಅನ್ ಬೀಟಬಲ್ ಅನ್ನುವುದಕ್ಕೆ ಇದು ತಾಜಾ ಉದಾಹರಣೆ. (ಏಜೆನ್ಸೀಸ್)

English summary
Vikram-Shankar's 'I' has taken excellent openings at the worldwide box office. But the film has failed to beat first day 'Lingaa' collections in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada