»   » ಕಾಯುವಿಕೆ ಆಯ್ತು ಸಾರ್ಥಕ, 'ಐ' ಟ್ರೇಲರ್ ಅದ್ಭುತ

ಕಾಯುವಿಕೆ ಆಯ್ತು ಸಾರ್ಥಕ, 'ಐ' ಟ್ರೇಲರ್ ಅದ್ಭುತ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮಿಳಿನ ಅತ್ಯಂತ ಯಶಸ್ವಿ ನಿರ್ದೇಶಕ ಶಂಕರ್ ಅವರ ಹೊಚ್ಚ ಹೊಸ ಚಿತ್ರ 'ಐ' ಆಡಿಯೋ ಬಿಡುಗಡೆ ಕಾರ್ಯಕ್ರಮ ಆದ್ದೂರಿಯಾಗಿ ನೆರವೇರಿದ್ದು ನಿಮಗೆಲ್ಲ ನೆನಪಿರಬಹುದು.

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಹಾಲಿವುಡ್ ನ ಅರ್ನಾಲ್ಡ್ ಶೆಜ್ನೆಗರ್ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಅಲ್ಲಿ ನೆರದಿತ್ತು. ಅಂದು ಬಿಡುಗಡೆಯಾದ ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರ ಮನಸೂರೆ ಮಾಡಿತ್ತು.['ಐ' ಅದ್ದೂರಿ ಆಡಿಯೋ ಬಿಡುಗಡೆ]

ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿತ್ತು. ಅಮಿ ಜಾಕ್ಸನ್ ನಾಯಕಿಯಾಗಿರುವ ಈ ಚಿತ್ರ ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗುತ್ತಿದ್ದರೂ ಎಲ್ಲಾ ಭಾಷೆಯ ಚಿತ್ರರಸಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಎ.ಆರ್.ರೆಹಮಾನ್ ಅವರ ಸಂಗೀತ, ಪಿ.ಸಿ. ಶ್ರೀರಾಮ್ ಅವರ ಛಾಯಾಗ್ರಹಣ ಚಿತ್ರವಿರುವ ಐ ಚಿತ್ರದ ಬಜೆಟ್ ನೂರ ಎಂಬತ್ತೈದು ಕೋಟಿ. ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟ್ ನ ಚಿತ್ರ ಎನ್ನಲಾಗಿದೆ. ವೇಣು ರವಿಚಂದ್ರನ್ ಹಾಗೂ ಡಿ ರಮೇಶ್ ಬಾಬು ನಿರ್ಮಿಸುತ್ತಿರುವ ಚಿತ್ರದ ಟ್ರೇಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

I Trailer Review: Worth The Wait

ಟ್ರೇಲರ್ ರಿಲೀಸ್ ಮಾಡಿ ಒಂದು ದಿನ ಕಳೆಯುವುದರೊಳಗೆ 897,702 ಹಿಟ್ಸ್, 27,377 ಲೈಕ್ಸ್, 1165 ಡಿಸ್ ಲೈಕ್ಸ್ ಪಡೆದುಕೊಂಡಿದೆ.

ಟ್ರೇಲರ್ ನಲ್ಲಿ ಏನಿದೆ?: ಏಮಿ ಜಾಕ್ಸನ್ ಹಾಗೂ ವಿಕ್ರಮ್ ತಮ್ಮ ಭವಿಷ್ಯದ ಬದುಕಿನ ಬಗ್ಗೆ ಕನಸು ಕಾಣುತ್ತಾ ಪ್ರಪಂಚದ ಸುಂದರ ತಾಣಗಳಲ್ಲಿ ವಿಹರಿಸುವ ದೃಶ್ಯ ಕಣ್ಮುಂದೆ ಬರುತ್ತದೆ. ಈ ಸಂದರ್ಭದಲ್ಲೇ ದೈತ್ಯ ದೇಹಿ ಗೂನು ಬೆನ್ನಿನ ಪಾತ್ರ ಎಂಟ್ರಿ ಪಡೆದುಕೊಳ್ಳುತ್ತದೆ.[ಚಿತ್ರದ ಟೀಸರ್ ಸೂಪರ್ ಡೂಪರ್ ಹಿಟ್]

ಏಮಿ ಕಂಡ ಕನಸು ನಾಶಪಡಿಸುವ ಉದ್ದೇಶ ಈ ಪಾತ್ರಕ್ಕಿದೆ ಎಂಬುದು ತಿಳಿಯುತ್ತದೆ. 2 ನಿಮಿಷದ ಟ್ರೇಲರ್ ನಲ್ಲಿ ವಿಕ್ರಮ್ ಅವರ ನಾಲ್ಕು ವಿಭಿನ್ನ ಪಾತ್ರಗಳನ್ನು ಹಿಡಿದಿಡುವ ಸಾಹಸ ಮಾಡಲಾಗಿದೆ. ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಪೇನ್ ಪಟೇಲ್ ಝಲಕ್ ಕೂಡಾ ಸಿಗುತ್ತದೆ.

ಎ.ಆರ್ ರೆಹಮಾನ್ ಸಂಗೀತ ಈಗಾಗಲೇ ಮೆಚ್ಚುಗೆ ಪಡೆದುಕೊಂಡಿದ್ದರೂ ಟ್ರೇಲರ್ ನ ಹಿನ್ನಲೆ ಸಂಗೀತ ಕೇಳುತ್ತಿದ್ದರೆ ಫಾಸ್ಟ್ ಅಂಡ್ ಫ್ಯೂರಿಯಸ್ 7 ಚಿತ್ರದ ಸಂಗೀತ ನೆನಪಾಗುತ್ತದೆ. ಅದರೆ, ಈ ರೀತಿ ಮ್ಯೂಸಿಕ್ ಬಿಟ್ ಗಳನ್ನು ಫಿಲ್ಲರ್ ಗಳಾಗಿ ಎಲ್ಲರೂ ಬಳಸುತ್ತಾರೆ ಇದೇನು ಕಾಪಿ ಮಾಡಿದ್ದಲ್ಲ ಎಂದು ತಜ್ಞರು ಹೇಳಿದ್ದಾರೆ.

ಒಟ್ಟಾರೆ ಐ ಚಿತ್ರ ಹುಟ್ಟು ಹಾಕಿರುವ ಕ್ರೇಜ್ ಗೆ ತಕ್ಕಂತೆ ಟ್ರೇಲರ್ ಮೂಡಿ ಬಂದಿದೆ. ಅದರೆ, ಇದೇ ಚಿತ್ರದಲ್ಲೂ ವಿಸ್ತಾರಗೊಳ್ಳುವುದೋ ಇಲ್ಲವೋ ಪೊಂಗಲ್ ತನಕ ಕಾದು ನೋಡಬೇಕಿದೆ.

English summary
But all that criticisms would pack their bags to go on for a vacation once his films hit theatres. Going by the trailer of I (AI) , looks like the painful wait of all movie lovers to catch Vikram's upcoming movie I on screen would vanish the moment it comes alive on screen.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada