»   » ಬೆಳ್ಳಿತೆರೆ ಮೇಲೆ ಮತ್ತೆ 'ಶಂಕರ್ ನಾಗ್' ನೋಡುವ ಅವಕಾಶ!

ಬೆಳ್ಳಿತೆರೆ ಮೇಲೆ ಮತ್ತೆ 'ಶಂಕರ್ ನಾಗ್' ನೋಡುವ ಅವಕಾಶ!

Posted By:
Subscribe to Filmibeat Kannada

ಕರಾಟೆ ಕಿಂಗ್ ಶಂಕರ್ ನಾಗ್ ಅವರು ಮರೆಯಾದ ಮೇಲೆ, ಅವರ ಚಿತ್ರಗಳನ್ನ ಬರಿ ಟಿವಿಯಲ್ಲಿ ನೋಡಿ ಎಂಜಾಯ್ ಮಾಡಬೇಕಾಗಿದೆ. ಇನ್ನು ಕನ್ನಡದ ಕೆಲವು ನಟರು ತಮ್ಮ ಚಿತ್ರಗಳಲ್ಲಿ ಶಂಕರ್ ನಾಗ್ ಅವರ ಹಾಡುಗಳನ್ನ, ಡೈಲಾಗ್ ಗಳನ್ನ ಹಾಗೂ ಆಧುನಿಕ ತಂತ್ರಜ್ಞಾನವನ್ನ ಬಳಿಸಿ ಮತ್ತೆ ತೆರೆಮೇಲೆ ಶಂಕ್ರಣ್ಣನನ್ನ ತರುವ ಪ್ರಯತ್ನ ಮಾಡಿದ್ದಾರೆ.[ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.! ]

ಇದೀಗ, ಕನ್ನಡ ಚಿತ್ರ ಪ್ರೇಮಿಗಳಿಗೆ ಹಾಗೂ ಶಂಕರ್ ನಾಗ್ ಅವರ ಅಪ್ಪಟ ಅಭಿಮಾನಿಗಳಿಗೆ ಒಂದು ಸುವರ್ಣ ಅವಕಾಶ. ತುಂಬಾ ವರ್ಷದ ನಂತರ ಶಂಕರ್ ನಾಗ್ ಅವರನ್ನ ಮತ್ತೆ ಚಿತ್ರಮಂದಿರದಲ್ಲಿ ನೋಡಬಹುದಾಗಿದೆ.

ಮತ್ತೆ ಚಿತ್ರಮಂದಿರಕ್ಕೆ 'ತರ್ಕ'!

1989 ರಲ್ಲಿ ಬಿಡುಗಡೆಯಾಗಿದ್ದ 'ತರ್ಕ' ಮತ್ತೆ ರಿ-ರಿಲೀಸ್ ಆಗುತ್ತಿದೆ. ಫೆಬ್ರವರಿ 3 ರಂದು ಶಂಕರ್ ನಾಗ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.['ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು]

ಹೊಸ ರೂಪದಲ್ಲಿ 'ತರ್ಕ!

ನಿರೀಕ್ಷೆಯಂತೆ 'ತರ್ಕ' ಚಿತ್ರಕ್ಕೆ ಆಧುನಿಕ ತಂತ್ರಜ್ಞಾನವನ್ನ ಅಳವಡಿಸಿ, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಿಸಿ ಹೊಸ ರೂಪ ನೀಡಿ ಮರು ಬಿಡುಗಡೆ ಮಾಡಲಾಗುತ್ತಿದೆ.[ಅಪರೂಪದ ಚಿತ್ರಕರ್ಮಿ ಮಿ. ಪರ್ಫೆಕ್ಟ್ ಶಂಕರ್]

ಮತ್ತೆ ಬೆಳ್ಳಿತೆರೆ ಮೇಲೆ ಕರಾಟೆಕಿಂಗ್!

ಈ ಮೂಲಕ ಬೆಳ್ಳಿತೆರೆ ಮೇಲೆ ಮತ್ತೆ ಶಂಕರ್ ನಾಗ್ ಅವರನ್ನ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ. ದಾಖಲೆಗಳ ಪ್ರಕಾರ ಶಂಕರ್ ನಾಗ್ ಅಭಿನಯದ 'ಪ್ರಾಣ ಸ್ನೇಹಿತ' ಚಿತ್ರ 1993ರಲ್ಲಿ ಕೊನೆಯದಾಗಿ ಬಿಡುಗಡೆಯಾಗಿತ್ತು.[ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ...]

ಸುನೀಲ್ ಕುಮಾರ್ ದೇಸಾಯಿ ಚೊಚ್ಚಲ ಚಿತ್ರ!

'ತರ್ಕ' ಸಸ್ಪೆನ್ಸ್ ಥ್ರಿಲ್ಲಿಂಗ್ ಮರ್ಡರ್ ಮಿಸ್ಟರಿ ಸಿನಿಮಾ. ಕನ್ನಡದ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದ ಚೊಚ್ಚಲ ಚಿತ್ರ ಇದಾಗಿದೆ. ಶಂಕರ್ ನಾಗ್, ದೇವರಾಜ್, ಅವಿನಾಶ್, ವನಿತಾ ವಾಸು ಸೇರಿದಂತೆ ಹಲವರು ಅಭಿನಯಿಸಿದ್ದರು.[ಶಂಕರ್ ನಾಗ್ ಹುಟ್ಟೂರಿನ ಕಥೆ ಹೇಳುತ್ತಾ 'ನಾಗರಕಟ್ಟೆ'? ]

English summary
Shankar Nag, Devaraj, Avinash, Vanitha Vasu and others had acted 'Tarka' is all set to Be Released Once again with Surround Sound and Latest Technology. 'Tarka' was a Murder Mystery Written and Directed by Sunil Kumar Desai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada