For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಪ್ರತಿಮೆಗೆ ಅಪಮಾನ ಆರೋಪ: ಶಾಸಕ ಹ್ಯಾರೀಸ್ ಸ್ಪಷ್ಟನೆ

  |

  ಕನ್ನಡದ ಕಂಠೀರವ, ವರನಟ ಡಾ ರಾಜ್ ಕುಮಾರ್ ಅವರ ಪ್ರತಿಮೆ ವಿಚಾರದಲ್ಲಿ ಶಾಂತಿ ನಗರ ಶಾಸಕ ಎನ್‌ಎ ಹ್ಯಾರೀಸ್ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ದೊಮ್ಮಲೂರಲ್ಲಿ ಅಣ್ಣಾವ್ರು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಆ ಪ್ರತಿಮೆ ಬಳಿ ಪರಿಶೀಲನೆಗೆಂದು ಹೋಗಿದ್ದ ಶಾಸಕರು ರಾಜ್ ಕುಮಾರ್ ಬಗ್ಗೆ ನಾಲಿಗೆ ಹರಿಬಿಟ್ಟು ಮಾತನಾಡಿದ್ದರು ಎಂದು ಅಭಿಮಾನಿಗಳು ದೂರಿದ್ದರು.

  ಬಿಬಿಎಂಪಿ ಗುತ್ತಿಗೆದಾರರ ಜೊತೆ ಸ್ಥಳಕ್ಕೆ ಹೋಗಿದ್ದ ಶಾಸಕ ಹ್ಯಾರೀಸ್ ಅಣ್ಣಾವ್ರ ಪ್ರತಿಮೆ ವಿಚಾರದಲ್ಲಿ ಅಗೌರವದಿಂದ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ರಾಜ್ ಅಭಿಮಾನಿಗಳು ಶಾಸಕ ಹ್ಯಾರೀಸ್ ವಿರುದ್ಧ ಮುಗಿಬಿದ್ದಿದ್ದರು. ಆ ಬಳಿಕ ಶಾಂತಿನಗರ ಶಾಸಕ ಹ್ಯಾರೀಸ್ ಅವರೇ ಖುದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಏನಿದು ವಿವಾದ? ಮುಂದೆ ಓದಿ...

  ಪ್ರತಿಮೆ ಇಡುವುದೇ ದೊಡ್ಡ ಕತೆ....

  ಪ್ರತಿಮೆ ಇಡುವುದೇ ದೊಡ್ಡ ಕತೆ....

  ''ಪ್ರತಿಮೆ ಇಡುವುದೇ ದೊಡ್ಡ ಕತೆ, ಆಫೀಸ್‌ ಬೇರೆ ಮಾಡಿಕೊಡೋಕೆ ಆಗುತ್ತಾ? ಅವರ್ಯಾರೋ ರಾಜ್ ಕುಮಾರ್‌ಗೆಂದು ಮಾಡಿದ್ದಾರೆ. ಅದನ್ನು ತೆಗೆಯಿರಿ, ಸ್ಟ್ಯಾಚ್ಯುಗೆಲ್ಲ ಕವರ್ ಮಾಡಿ ಏಕೆ ಇಡ್ತಾರೆ, ರಸ್ತೆಯಲ್ಲಿ ಏಕೆ ಇಡ್ತಾರೆ, ಮನೆಯಲ್ಲಿ ಇಡಬಹುದಿತ್ತು ಅಲ್ವೇ?....'' ಎಂದು ಶಾಸಕ ಹ್ಯಾರೀಸ್ ಹಗುರವಾಗಿ ಮಾತನಾಡಿದ್ದಾರೆ ಎಂದು ಅಣ್ಣಾವ್ರ ಅಭಿಮಾನಿಗಳು ಕಿಡಿ ಕಾರಿದ್ದರು.

  ರಾಜ್ ಕುಮಾರ್‌ 'ಡಾಕ್ಟರೇಟ್' ಗೌರವಕ್ಕೆ 45 ವರ್ಷ: ಹೇಗಿತ್ತು ಅಂದಿನ ಸನ್ನಿವೇಶ?

  ನಾನು ರಾಜ್ ಅವರ ದೊಡ್ಡ ಅಭಿಮಾನಿ

  ನಾನು ರಾಜ್ ಅವರ ದೊಡ್ಡ ಅಭಿಮಾನಿ

  ''ದೊಮ್ಮಲೂರು ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಮಾಡುತ್ತಿದ್ದೇವೆ, ಅದರ ಸ್ಥಳ ಪರಿಶೀಲನೆಗೆಂದು ಹೋಗಿದ್ದೆ. ಆ ವೃತ್ತದಲ್ಲಿ ಅದಾಗಲೇ ರಾಜ್ ಕುಮಾರ್ ಪ್ರತಿಮೆ ಇದೆ, ಕೆಂಪೇಗೌಡರ ಪ್ರತಿಮೆಯೂ ಇದೆ. ರಾಜ್ ಕುಮಾರ್ ಪ್ರತಿಮೆ ಪಕ್ಕ ಒಂದು ಬೋರ್ಡ್ ಹಾಕಬೇಕು ಅಂದ್ರು ಸರಿ ಹಾಕಿ ಎಂದು ಹೇಳಿ ಬಂದಿದ್ದೇನೆ ಅಷ್ಟೇ. ನಾನು ಅಣ್ಣಾವ್ರ ದೊಡ್ಡ ಅಭಿಮಾನಿ. ಇಂಟರ್‌ನ್ಯಾಷನಲ್ ಅಣ್ಣಾವ್ರು ಅಂದ್ರೆ ರಾಜ್ ಕುಮಾರ್. ಅವರ ಬಗ್ಗೆ ಯಾರಾದರೂ ಮಾತಾಡೋಕೆ ಆಗುತ್ತಾ, ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಕಟ್ ಅಂಡ್ ಪೇಸ್ಟ್ ಮಾಡಿ ಹಾಕ್ತಿದ್ದಾರೆ'' ಎಂದು ಹ್ಯಾರೀಸ್ ಸ್ಪಷ್ಟನೆ ನೀಡಿದ್ದಾರೆ.

  ಪ್ರತಿಮೆ ಮುಚ್ಚಿಡಬಾರದು ಎಂದು ಹೇಳಿದ್ದೆ

  ಪ್ರತಿಮೆ ಮುಚ್ಚಿಡಬಾರದು ಎಂದು ಹೇಳಿದ್ದೆ

  ''ಸಹೋದರರೇ ದಯವಿಟ್ಟು ಇದೆಲ್ಲ ಮಾಡಬೇಡಿ. ಡಾ ರಾಜ್ ಕುಮಾರ್ ಅವರ ಪರವಾಗಿ ಏನು ಬೇಕಾದರೂ ಮಾಡಲು ನಾನು ತಯಾರಿದ್ದೇನೆ. ಆ ಪ್ರತಿಮೆಯನ್ನು ಕವರ್ ಮಾಡಲಾಗಿದೆ, ಪ್ರತಿಮೆ ನಿರ್ಮಿಸಿದ ಮೇಲೆ ಅದನ್ನು ಪ್ರತಿಮೆ ಮುಚ್ಚಿಡುವುದೇನಿದೆ, ಅದನ್ನು ತೆಗೆಯಿರಿ'' ಎಂದು ಸೂಚಿಸಿದೆ ಎಂದು ಹ್ಯಾರೀಸ್ ಉತ್ತರಿಸಿದ್ದಾರೆ.

  ಅಣ್ಣಾವ್ರ ಬಿಡುಗಡೆಗೆ ಸರಕಾರ ಕೊಟ್ಟ ದುಡ್ಡಿನ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ತಮಿಳು ಪತ್ರಕರ್ತ

  ರಾಜ್ ಪ್ರತಿಮೆ ಸ್ಥಾಪಿಸಲು ನಾನು ಸಹ ಕಾರಣ

  ''ಆ ಸ್ಥಳದಲ್ಲಿ ರಾಜ್ ಕುಮಾರ್ ಅವರ ಪ್ರತಿಮೆ ಬರಲು ನಾನು ಒಬ್ಬ ಕಾರಣ ಎಂದು ಹೇಳಲು ಬಯಸುತ್ತೇನೆ. ಸುಮ್ಮನೆ ಏಕೆ ಈ ರೀತಿ ನನ್ನ ವಿರುದ್ಧ ಅಪಪ್ರಚಾರ ಮಾಡ್ತಿದ್ದೀರಾ. ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿದವನು ನಾನು, ಅವರ ಆದರ್ಶಗಳನ್ನು ರೂಢಿಸಿಕೊಂಡಿದ್ದೇವೆ. ದಯವಿಟ್ಟು ಈ ರೀತಿ ಮಾಡಬೇಡಿ, ನಿಮಗೆ ಈ ವಿಚಾರದಲ್ಲಿ ನೋವು ಉಂಟಾಗಿದ್ದರೆ ಕ್ಷಮೆ ಕೋರುತ್ತೇನೆ'' ಎಂದು ಹ್ಯಾರೀಸ್ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

  English summary
  Shanti Nagar MLA Harris clarified about Dr Rajkumar statue controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X