For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ದ್ವಿವೇದಿ ಜೊತೆಗೆ ಅಮೇರಿಕಾಕ್ಕೆ ಹಾರಿದ ಶರಣ್

  By Naveen
  |

  ನಟ ಶರಣ್ ಈಗ ಅಮೇರಿಕಾಗೆ ಹೋಗಿದ್ದಾರೆ. ಅದು ಕೂಡ ನಟಿ ರಾಗಿಣಿ ದ್ವಿವೇದಿ ಜೊತೆಗೆ. ಹೌದು, ಶರಣ್ ಹಾಗೂ ರಾಗಿಣಿ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಅಮೇರಿಕಾಗೆ ತೆರಳಿದ್ದಾರೆ.

  ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ

  ನಟಿ ರಾಗಿಣಿ ದ್ವಿವೇದಿ ಪ್ರಯಾಣದ ಮಧ್ಯೆ ಫೋಟೋ ತೆಗೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 9 ಗಂಟೆ ಪ್ರಯಾಣ ಮಾಡಿದ್ದು, ಇನ್ನೂ 10 ಗಂಟೆಗಳ ಪ್ರಯಾಣ ಬಾಕಿ ಇದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಾಗಿಣಿ ಹಾಗೂ ಶರಣ್ ಜೋಡಿ ಸಖತ್ ಕ್ಯೂಟ್ ಆಗಿ ಕಾಣುತ್ತಿದೆ.

  ಅಂದಹಾಗೆ, ಶರಣ್ ಹಾಗೂ ರಾಗಿಣಿ ಅವರ ಈ ಚಿತ್ರವನ್ನು ಯೋಗಾನಂದ್ ಮುದ್ದಾನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು 'ಮುಕುಂದ ಮುರಾರಿ' ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು. ಈ ಚಿತ್ರ ತೆಲುಗಿನ ಸಿನಿಮಾವೊಂದರ ರಿಮೇಕ್ ಎನ್ನಲಾಗಿದ್ದು, ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

  ಈ ಹಿಂದೆ 'ವಿಕ್ಟರಿ' ಸಿನಿಮಾದಲ್ಲಿ ಶರಣ್ ಜೊತೆಗೆ ಒಂದು ಹಾಡಿಗೆ ಹೆಜ್ಜೆ ಹಾಕಿದ್ದ ರಾಗಿಣಿ ಈಗ ಅವರ ಜೊತೆಗೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಗಿಣಿ ಹೊಸ ಹೇರ್ ಸ್ಟೈಲ್ ಮಾಡಿಸಿದ್ದು, ಸ್ಟೈಲಿಶ್ ಲುಕ್ ನಲ್ಲಿ ಮಿಂಚಲಿದ್ದಾರಂತೆ. ಸದ್ಯ 'Rambo 2' ಸಿನಿಮಾದ ಯಶಸ್ಸಿನ ನಂತರ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ಶರಣ್ ತೊಡಗಿದ್ದಾರೆ.

  English summary
  Kannada Actress Ragini Dwivedi and Sharan flys to America for new movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X