»   » ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್

ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್

Posted By:
Subscribe to Filmibeat Kannada

ಫೇಮಸ್ ಡೈರೆಕ್ಟರ್ ಎ.ಹರ್ಷ 'ವಜ್ರಕಾಯ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೆ ಹಿಂತಿರುಗಿದ್ದಾರೆ. ಈ ಮೊದಲು 'ಮಾರುತಿ 800' ಚಿತ್ರಕ್ಕೆ ಹರ್ಷ ಆಕ್ಷನ್-ಕಟ್ ಹೆಳುತ್ತಾರಂತೆ ಅಂತಿದ್ದ ಗಾಸಿಪ್ ಗಳಿಗೆ ಇದೀಗ ಹರ್ಷ ಫುಲ್ ಸ್ಟಾಫ್ ಇಟ್ಟಿದ್ದಾರೆ.

ಹೌದು ಹರ್ಷ ನಿರ್ದೆಶಿಸುತ್ತಿರುವ ಮುಂದಿನ ಚಿತ್ರ 'ಮಾರುತಿ 800'. ಹರ್ಷ ನಿರ್ದೇಶನ ಅಂದರೆ ಸುಮ್ಮನೇನಾ? ಇವರ ಗಾಳಕ್ಕೆ ಯಾವುದೋ ದೊಡ್ಡ ಮೀನೇ ಬಿದ್ದಿರಬೇಕು ಅಂತಾ ಯೋಚಿಸಿರಬೇಕಲ್ಲಾ ನೀವು.

Sharan And Sruthi Hariharan In Harsha's 'Maruthi 800'!

ನಿಮ್ಮ ಯೋಚನೆ ಸರಿಯಾಗಿಯೇ ಇದೆ, ಈ ಚಿತ್ರಕ್ಕೆ ನಾಯಕ ಯಾರಪ್ಪ ಅಂದ್ರೆ ಇತ್ತೀಚೆಗೆ ಬೇಡಿಕೆಯ ನಟರ ಸಾಲಿಗೆ ಸೇರುವ ಕಾಮಿಡಿ ಸ್ಟಾರ್ ಶರಣ್ ಎ.ಹರ್ಷ ಜೊತೆ ಮುಂದಿನ ಪ್ರಾಜೆಕ್ಟ್ ರೆಡಿ ಮಾಡುತ್ತಿದ್ದಾರೆ. ಇವರಿಗೆ ಜೊತೆಯಾಗಿ 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳಲಿದ್ದಾರೆ.

ಇದೇ ಮೊದಲ ಬಾರಿಗೆ ಹರ್ಷ ಶರಣ್ ಕಾಂಬಿನೇಷನ್ ಚಿತ್ರ ಬರುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಸಹಜವಾಗಿಯೇ ಇರುತ್ತೆ ಬಿಡಿ. ಇನ್ನೂ ನಮ್ ಶರಣ್ ಕಾಮಿಡಿ ಪಂಚ್ ಜೊತೆ 'ಲೂಸಿಯಾ ರಾಣಿ' ಗ್ಲಾಮರ್ ಬೆರೆತರೆ ಚಿತ್ರ ಸೂಪರೋ ಸೂಪರ್.

ಹರ್ಷ ಅವರ 'ಮಾರುತಿ 800' ಕಾರು ಕಾಮಿಡಿನೋ, ಆಕ್ಷನ್ನೋ, ಅಥವಾ ರೋಮ್ಯಾಂಟಿಕ್ ಚಿತ್ರನೋ ಅಂತ ಸದ್ಯದಲ್ಲೇ ತಿಳಿಸುತ್ತಾರಂತೆ. ಅದೇನೆ ಇರಲಿ ಸದ್ಯಕ್ಕೆ ಶರಣ್ ತಮ್ಮ 'ಬುಲೆಟ್ ಬಸ್ಯಾ' ನ ಆಗಮನಕ್ಕೆ ಕಾಯುತ್ತಿದ್ದು. ಗ್ಲಾಮರ್ ಬೊಂಬೆ ಶ್ರುತಿ ಹರಹರನ್, ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ 'ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

'ಮಾರುತಿ 800' ಚಿತ್ರದ ಹೆಚ್ಚಿನ ಸುದ್ದಿಗಾಗಿ ಫಿಲ್ಮಿಬೀಟ್ ನೋಡುತ್ತಿರಿ

English summary
Harsha's next movie has been titled as the name of 'Maruthi 800' actor-comedian Sharan and Lucia girl Sruthi Hariharan are pairing up for the first time in Harsha's film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada