For Quick Alerts
  ALLOW NOTIFICATIONS  
  For Daily Alerts

  ತರುಣ್ ಸುಧೀರ್ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಿದ ಶರಣ್

  |

  'ಅವತಾರ್ ಪುರುಷ' ಎಂಬ ಸಿನಿಮಾ ಮಾಡುತ್ತಿರುವ ನಟ ಶರಣ್ ಇತ್ತೀಚಿಗಷ್ಟೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಸುದ್ದಿಯಾಗಿದ್ದರು. ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶರಣ್ ವಿಡಿಯೋವೊಂದು ಹಂಚಿಕೊಂಡು ಕುತೂಹಲ ಹುಟ್ಟುಹಾಕಿದ್ದರು.

  ಯಾರೇ ಏನೇ ಕೇಳಿದರು, ಯಾರ ಬಳಿಯೂ ಮಾತನಾಡಿದರು ವಿಸಿಲ್ ಮೂಲಕವೇ ಸಂವಹನ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಶರಣ್ ಏಕೆ ಹೀಗೆ ಮಾಡ್ತಿದ್ದಾರೆ ಎಂದು ತಿಳಿಯಬೇಕಾದರೆ ಅಕ್ಟೋಬರ್ 9ಕ್ಕೆ ಕಾಯಿರಿ ಎಂಬ ಪ್ರೋಮೋ ನಿರೀಕ್ಷೆ ಹೆಚ್ಚಿಸಿತ್ತು.

  ಶರಣ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆಶರಣ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

  ಇದೀಗ, ಶರಣ್ ಅವರ ವಿಸಿಲ್ ಹಿಂದಿನ ಸೀಕ್ರೆಟ್ ಬಯಲಾಗಿದೆ. ಹೌದು, ನಟ ಶರಣ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರೊಡಕ್ಷನ್ ನಂ 3 ಹೆಸರಿನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಶರಣ್, ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

  ಚಿತ್ರದ ಹೆಸರು ಏನು ಎಂಬುದು ಕುತೂಹಲ ಮೂಡಿಸಿದ್ದು, ಪೋಸ್ಟರ್ ಮೇಲೆ ವಿಸಿಲ್ ಇದೆ. ಇನ್ನು ಈ ಚಿತ್ರವನ್ನು ಜಗದೀಶ್ ಹಂಪಿ ನಿರ್ದೇಶನ ಮಾಡಲಿದ್ದು, ಶರಣ್ ಬಂಡವಾಳ ಹಾಕಲಿದ್ದಾರೆ. ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

  ಹುಡುಗಿ ಪಾತ್ರ ಮಾಡಿದ ರಾಘವೇಂದ್ರನ ಜೀವನ ಎಷ್ಟು ಕಷ್ಟ ಆಗಿದೆ ಗೊತ್ತಾ | Filmibeat Kannada

  ಇನ್ನುಳಿದಂತೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಕಲಾವಿದರು, ಶೂಟಿಂಗ್ ಬಗ್ಗೆ ತಿಳಿಯಬೇಕಿದೆ.

  English summary
  Kannada actor Sharan announce new film on Tharun sudhir Birthday. production no-3 poster has released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X