»   » ಬಾಕ್ಸ್ ಆಫೀಸ್ ನೂತನ 'ಅಧ್ಯಕ್ಷ'ರಾಗಿ ಶರಣ್ ಆಯ್ಕೆ!

ಬಾಕ್ಸ್ ಆಫೀಸ್ ನೂತನ 'ಅಧ್ಯಕ್ಷ'ರಾಗಿ ಶರಣ್ ಆಯ್ಕೆ!

Posted By:
Subscribe to Filmibeat Kannada

ಇದೇನಿದು ಹೊಸದಾಗಿ, ಬಾಕ್ಸ್ ಆಫೀಸ್ ಗೆ ಎಲ್ಲಾದರೂ ಅಧ್ಯಕ್ಷರು ಉಂಟೇ? ಎಂದು ಕೇಳಬೇಡಿ. ಬಾಕ್ಸ್ ಆಫೀಸ್ ನೂತನ ಅಧ್ಯಕ್ಷರಾಗಿ ಹಾಸ್ಯನಟ ಶರಣ್ ಆಯ್ಕೆಯಾಗಿದ್ದಾರೆ. ಅವರ 'ಅಧ್ಯಕ್ಷ' ಚಿತ್ರ ಒಂದೇ ದಿನಕ್ಕೆ ರು.1.5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಗೆ ನಾಂದಿಹಾಡಿದೆ.

ಬೆಂಗಳೂರು ಕೇಂದ್ರದಲ್ಲೇ ಅಧ್ಯಕ್ಷರ ಕಲೆಕ್ಷನ್ ರು.60 ಲಕ್ಷಗಳು. ಶರಣ್ ಅಭಿನಯದ ಚಿತ್ರಗಳಲ್ಲೇ ಇದೊಂದು ದಾಖಲೆಯ ಸಂಗ್ರಹ. ಸಮರ್ಥ ಪ್ರಸಾದ್ ಅವರು ವಿತರಣೆ ಹಕ್ಕುಗಳನ್ನು ಪಡೆದು ಈ ಚಿತ್ರವನ್ನು ಬಿಡುಗಡೆ ಮಾಡಿದ್ದರು. [ಅಧ್ಯಕ್ಷ ಚಿತ್ರ ವಿಮರ್ಶೆ]


ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಚಿತ್ರ ಒಂದೇ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವ ಎಲ್ಲಾ ಸೂಚನೆಗಳನ್ನು ಕೊಟ್ಟಿದೆ.

'ವಿಕ್ಟರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ನಿರ್ದೇಶನದ ಚಿತ್ರ ಇದು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಗೀತಪ್ರಿಯರ ಗಮನಸೆಳೆದಿವೆ. ಶರಣ್ ಜೊತೆ ಹೇಬಾ ಪಾಟೀಲ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಪಾತ್ರವರ್ಗದಲ್ಲಿ ರವಿಶಂಕರ್, ಮಾಳವಿಕಾ ಅವಿನಾಶ್, ಚಿಕ್ಕಣ್ಣ ಹಾಗೂ ರಮೇಶ್ ಭಟ್ ಸೇರಿದಂತೆ ಮುಂತಾದವರಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಅಧ್ಯಕ್ಷ ಚಿತ್ರ ರಾಜ್ಯಾದ್ಯಂತ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿ.ಕೆ.ಗಂಗಾಧರ್ ಮತ್ತು ಬಿ. ಬಸವರಾಜ್ ನಿರ್ಮಿಸಿರುವ ಚಿತ್ರವಿದು. (ಏಜೆನ್ಸೀಸ್)

English summary
Comedy actor Sharan new Kannada film Adyaksha grosses a whopping Rs 1.50 crore at the box office on the first day itselt.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada