»   » ಸೆನ್ಸಾರ್ ಪರೀಕ್ಷೆಯಲ್ಲಿ 'ಜೈ ಲಲಿತಾ' ಗೆ ತಡೆ

ಸೆನ್ಸಾರ್ ಪರೀಕ್ಷೆಯಲ್ಲಿ 'ಜೈ ಲಲಿತಾ' ಗೆ ತಡೆ

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಸ್ಯ ನಟ ಶರಣ್ ಅವರ ವಿಭಿನ್ನ ಚಿತ್ರ 'ಜೈಲಲಿತಾ' ಚಿತ್ರಕ್ಕೆ ಮತ್ತೆ ಕಟಂಕ ಆರಂಭವಾದ ಹಾಗೆ ತೋರುತ್ತದೆ. ಲೇಡಿ ಗೆಟಪ್ ಅಂತೂ ಎಲ್ಲರ ಕುತೂಹಲ ಮೂಡಿಸಿದ್ದು, ಅಧ್ಯಕ್ಷ ಚಿತ್ರವೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆದರೆ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರ ಪರೀಕ್ಷೆಯಲ್ಲಿ ಜೈ ಲಲಿತಾಗೆ ತಡೆ ಒಡ್ಡಲಾಗಿದೆ. ಸೆನ್ಸಾರ್ ಮಂಡಳಿ ನಿಯಮ ಮೀರಿದ್ದಕ್ಕಾಗಿ ಭಾರಿ ದಂಡ ತೆರಬೇಕಾಗಾದ ಪ್ರಸಂಗ ಜೈ ಲಲಿತಾ ನಿರ್ಮಾಪಕರಿಗೆ ಒದಗಿದೆ.

ಗಾಂಧಿನಗರದ ಗಲ್ಲಿಗಳಿಂದ ಬಂದಿರುವ ಸುದ್ದಿ ಪ್ರಕಾರ, ಜೈ ಲಲಿತಾ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೆ ಸತಾಯಿಸುತ್ತಿದೆಯಂತೆ. ನಾವು ಹೇಳಿದಂತೆ ನೀವು ನಡೆದುಕೊಂಡಿಲ್ಲ, ಹಾಗಾಗಿ ಸದ್ಯಕ್ಕೆ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ ಎಂದಿದ್ದಾರಂತೆ.

Sharan Jai Lalitha film censor certification withheld,
 

ಸೆನ್ಸಾರ್ ಅನುಮತಿ ಪಡೆಯದೆ ಇತ್ತೀಚೆಗೆ ಜೈ ಲಲಿತಾ ಚಿತ್ರದ ಹಾಡೊಂದು ಟಿವಿ ಚಾನೆಲ್ ನಲ್ಲಿ ಕಾಣಿಸಿಕೊಂಡ ಮೇಲೆ ಈ ಎಲ್ಲಾ ತೊಂದರೆಗಳು ಶುರುವಾಗಿದೆ. ಸೆನ್ಸಾರ್ ಸರ್ಟಿಫಿಕೇಟ್ ಪಡೆಯದೆ ಅಥವಾ ಸೆನ್ಸಾರ್ ಮಂಡಳಿಗೆ ಹೇಳದೆ ಹಾಡು ರಿಲೀಸ್ ಮಾಡಿ ಈಗ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತ್ತಿದ್ದಾರೆ ನಿರ್ಮಾಪಕರು.

ಹಾಡಾಗಲಿ, ಟ್ರೇಲರ್ ಆಗಲಿ, ಪ್ರೊಮೋ ಆಗಲಿ ಸೆನ್ಸಾರ್ ಮಂಡಳಿ ನಿಯಮದಂತೆ ಸರ್ಟಿಫಿಕೇಟ್ ಪಡೆಯದೆ ಪ್ರಚಾರಕ್ಕೆ ಬಳಸುವಂತಿಲ್ಲ. ಆದ್ರೆ ಜೈ ಲಲಿತಾ ಚಿತ್ರ ತಂಡ ಈ ನಿಯಮ ಮುರಿದು ಕಷ್ಟಕ್ಕೆ ಸಿಲುಕಿದೆ. ಮುಂದೇನು ಮಾಡುತ್ತಾರೋ ಕಾದು ನೋಡಬೇಕಿದೆ. ಜೈ ಲಲಿತಾ, ಅಧ್ಯಕ್ಷ ಮತ್ತೊಂದು ಚಿತ್ರ ಎಂದು ಮುನ್ನುಗ್ಗುತ್ತಿರುವ ಶರಣ್ ಗೆ ಇದು ಕೊಂಚ ಹಿನ್ನಡೆ ಎನ್ನಬಹುದು

ಅಂದ ಹಾಗೆ, ಮಲಯಾಳಂನ ಹಿಟ್ ಚಿತ್ರ 'ಮಾಯಾ ಮೋಹಿನಿ'ಯ ಸ್ಫೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದ ಹೀರೋ ಮಹಿಳೆಯ ಗೆಟಪ್ ನಲ್ಲಿರುವುದನ್ನು ಬಿಟ್ಟರೆ ಉಳಿದಂತೆ ಮೂಲ ಚಿತ್ರದ ಯಾವುದೇ ಸಾಮ್ಯತೆಗಳೂ ಇಲ್ಲ ಎನ್ನುತ್ತಾರೆ ಶರಣ್. ಶ್ರೀಮತಿ ಜಯಲಲಿತಾ ಚಿತ್ರ ಸಂಪೂರ್ಣ ಭಿನ್ನ ಎಂಬುದು ಅವರ ವಿವರಣೆ.

English summary
The Regional Board for Film Certification has withheld the censor certificate for Sharan starrer 'Jai Lalitha' as a penalty as the film team did not stick to the rules and regulations of the censor board.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada