For Quick Alerts
  ALLOW NOTIFICATIONS  
  For Daily Alerts

  ತನ್ನ 1ನೇ ತರಗತಿ ಶಾಲಾ ಕೊಠಡಿಗೆ ವರ್ಷಗಳ ಬಳಿಕ ಹೋಗಿ ಆಶ್ಚರ್ಯಕ್ಕೊಳಗಾದ ಶರಣ್!

  |

  ಚಂದನವನಕ್ಕೆ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುವ ಮೂಲಕ ಕಾಲಿಟ್ಟು ನಂತರ ನಾಯಕ ನಟರಾಗಿ ಬಡ್ತಿ ಪಡೆದುಕೊಂಡು ಯಶಸ್ವಿಯಾದ ನಟರ ಸಾಲಿನಲ್ಲಿ ನಿಲ್ಲುವ ನಟ ಶರಣ್. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ ಶರಣ್ ನಂತರ ಹಾಸ್ಯ ಕಲಾವಿದನಾಗಿ ಜನಪ್ರಿಯತೆ ಗಳಿಸಿ ಇದೀಗ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

  ಇನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ಗುರು ಶಿಷ್ಯರು ಚಿತ್ರದಲ್ಲಿ ಶಾಲಾ ಶಿಕ್ಷಕನ ಪಾತ್ರ ನಿರ್ವಹಿಸಿದ್ದ ಶರಣ್ ಸದ್ಯ ತಮ್ಮ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹುಬ್ಬಳ್ಳಿಯ ಎಸ್ ಡಿ ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶರಣ್ ತಾವು ಒಂದನೇ ತರಗತಿಯಲ್ಲಿ ಪಾಠ ಕೇಳಿದ್ದ ತರಗತಿಗೆ ಈಗ ಭೇಟಿ ನೀಡಿದ್ದಾರೆ ಹಾಗೂ ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  ಹೌದು, ತಾವು ಒಂದನೇ ತರಗತಿಯಲ್ಲಿ ಕಲಿಯುವಾಗ ಕೊಠಡಿ ಹೇಗಿತ್ತೋ ಅದೇ ರೀತಿ ಈಗಲೂ ಸಹ ಇದೆ ಎಂಬುದನ್ನು ನಟ ಶರಣ್ ಬರೆದುಕೊಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯ ದಿನದ ಶಾಲೆಯೊಂದಿಗೆ ಭೇಟಿ ನೀಡಿದ್ದೆ... ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಗಾಳಿಯ ಸೊಬಗು, ನಾನು ಕೂತಿರುವ ನನ್ನ ಒಂದನೇ ತರಗತಿಯ ಕೊಠಡಿ,‌ ಎಲ್ಲಾ ಹಾಗೆಯೇ ಉಂಟು" ಎಂದು ಶರಣ್ ಬರೆದುಕೊಂಡಿದ್ದಾರೆ.

  ಇನ್ನು ಮೊದಲಿಗೆ ಆರ್ಕೆಸ್ಟ್ರಾಗಳಲ್ಲಿ ಹಾಡುಗಳನ್ನು ಹಾಡುತ್ತಾ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಶರಣ್ ನಂತರ ಹಲವು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಬಳಿಕ ಶರಣ್ ನಟನೆ ಕಂಡ ನಿರ್ದೇಶಕ ಸಿದ್ದಲಿಂಗಯ್ಯ ಪ್ರೇಮ ಪ್ರೇಮ ಪ್ರೇಮ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನೀಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವಂತೆ ಮಾಡುತ್ತಾರೆ. ಅಂದು ಶುರುವಾದ ಶರಣ್ ಸಿನಿಮಾ ಜರ್ನಿ ನಂತರ ಹಾಸ್ಯ ಕಲಾವಿದ, ನಾಯಕ ನಟ ಹಾಗೂ ಇದೀಗ ನಿರ್ಮಾಪಕನಾಗುವ ತನಕ ಸಾಗುತ್ತಾ ಬಂದಿದೆ.

  Read more about: sharan actor ಶರಣ್ ನಟ
  English summary
  Sharan revisits his primary school and shared photo on social media. Read on
  Tuesday, December 13, 2022, 19:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X