»   » 'ಬಾಟಲ್ ಮಣಿ' ಬರುತ್ತಿದ್ದಾನೆ ಪ್ರೇಕ್ಷಕರೇ ಎಚ್ಚೆತ್ತುಕೊಳ್ಳಿ!

'ಬಾಟಲ್ ಮಣಿ' ಬರುತ್ತಿದ್ದಾನೆ ಪ್ರೇಕ್ಷಕರೇ ಎಚ್ಚೆತ್ತುಕೊಳ್ಳಿ!

Posted By:
Subscribe to Filmibeat Kannada

ಅಧ್ಯಕ್ಷ ಚಿತ್ರದ ಬಳಿಕ ಶರಣ್ ಈಗ ಮತ್ತೊಂದು ಭರ್ಜರಿ ಚಿತ್ರದ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರು ರಾಜಗಾಂಭೀರ್ಯದಿಂದ 'ರಾಜ ರಾಜೇಂದ್ರ'ನಾಗಿ ತೆರೆಗೆ ಬರುತ್ತಿರುವುದು ವಿಶೇಷ.

ಈಗಾಗಲೆ ರಾಜ ರಾಜೇಂದ್ರ ಚಿತ್ರದ ಹಾಡುಗಳು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿವೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಇದೇ ಫೆಬ್ರವರಿ 6ರಂದು ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಅಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶರಣ್ ಅಭಿಮಾನಿಗಳಿಗೆ ಡಬಲ್ ಧಮಾಕಾ. ಉದಯ್ ಮೆಹ್ತಾ ನಿರ್ಮಿಸಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಪಿ. ಕುಮಾರ್. [ಟ್ವಿಟ್ಟರ್ ನಲ್ಲಿ 'ರಾಜ ರಾಜೇಂದ್ರ'ನ ದರ್ಬಾರ್]


ಈ ಹಿಂದೆ ಪಿ ಕುಮಾರ್ ಅವರು ಶರಣ್ ಮುಖ್ಯಭೂಮಿಕೆಯ ಜೈ ಲಲಿತಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ಎಂದು ಚಿತ್ರತಂಡ ಅಭಯಹಸ್ತ ನೀಡಿದೆ. ಪ್ರೇಕ್ಷಕರು ಭರ್ಜರಿ ಮನರಂಜನೆಯನ್ನು ನಿರೀಕ್ಷಿಸಬಹುದು.ಈ ಚಿತ್ರಕ್ಕಾಗಿ ಶರಣ್ ಒಂದು ಹಾಡನ್ನೂ ಹಾಡಿದ್ದಾರೆ. ಅವರು ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ ಜೊತೆಗೆ ಹಾಡಿರುವುದು ವಿಶೇಷ. ಯೋಗರಾಜ್ ಭಟ್ ಅವರ ಸಾಹಿತ್ಯ ಇರುವ ಈ ಹಾಡು ಜನಪ್ರಿಯತೆ ಗಳಿಸಿಕೊಂಡಿದೆ.


ಇನ್ನು ಶರಣ್ ಅವರಿಗೆ ಜೋಡಿಯಾಗುತ್ತಿರುವ ಬೆಡಗಿ ಇಷಿತಾ ದತ್ತ. ಬಾಲಿವುಡ್ ತಾರೆ ತನುಶ್ರೀ ದತ್ತ ಅವರ ಸಹೋದರಿ ಈಕೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟನಾಗಿ ಅಭಿನಯಿಸಿರುವ ಶರಣ್ ಪೂರ್ಣಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ ಐದನೇ ಚಿತ್ರವಿದು.


1939 ಹಾಗೂ 2014ರ ಕಾಲಘಟ್ಟಗಳ ಕಥೆ ಇದು. ಶರಣ್ ಅವರು ಎರಡು ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ಒಂದು ಬಾಟಲ್ ಮಣಿ ಹಾಗೂ ಇನ್ನೊಂದು ರಾಜೇಂದ್ರನಾಗಿ. ಉಳಿದ ಪಾತ್ರವರ್ಗದಲ್ಲಿ ತಬಲಾ ನಾಣಿ, ರವಿಶಂಕರ್, ಸಾಧು ಕೋಕಿಲ, ರೇಖಾ ಅರ್ಚನಾ ಮುಂತಾದವರಿದ್ದಾರೆ.


ಬೆಂಗಳೂರು, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಹಲವಾರು ರಮಣೀಯ ತಾಣಗಳಲ್ಲಿ ಚಿತ್ರವನ್ನು ಶೂಟಿಂಗ್ ಮಾಡಲಾಗಿದೆ. ನಾಗೇಂದ್ರ ಪ್ರಸಾದ್ ಹಾಗೂ ಯೋಗರಾಜ್ ಭಟ್ ಅವರ ಸಾಹಿತ್ಯ, ಮುರಳಿ ಅವರ ನೃತ್ಯ ಸಂಯೋಜನೆ, ಜೋನಿ ಹರ್ಷ ಅವರ ಸಂಕಲನ ಚಿತ್ರಕ್ಕಿದೆ. (ಫಿಲ್ಮಿಬೀಟ್ ಕನ್ನಡ)

English summary
After series of succesfull movies comedy star Sharan is coming in front of audience with another movie Raja Rajendra.The movie is getting released on 6th Feb which is also the birthday of Sharan. Sharan and Ishika datta are in lead role. The movie directed by P Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada