»   » ಟಾಲಿವುಡ್ ಮತ್ತು ಬಾಲಿವುಡ್ಡಿಗೆ ಕನ್ನಡದ 'ವಿಕ್ಟರಿ'

ಟಾಲಿವುಡ್ ಮತ್ತು ಬಾಲಿವುಡ್ಡಿಗೆ ಕನ್ನಡದ 'ವಿಕ್ಟರಿ'

Posted By:
Subscribe to Filmibeat Kannada

ಕಾಮಿಡಿ ಖಿಲಾಡಿ ಶರಣ್ ಅಭಿನಯದ 'ವಿಕ್ಟರಿ' ಚಿತ್ರವನ್ನ ನೀವೆಲ್ಲರೂ ನೋಡಿ ಬಿದ್ದು ಬಿದ್ದು ನಕ್ಕಿರ್ತೀರಾ. ಎರಡು ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದಲ್ಲದೇ, ನಾಯಕ ನಟ ಶರಣ್ ಮತ್ತು ನಿರ್ದೇಶಕ ನಂದಕಿಶೋರ್ ಗೆ ದೊಡ್ಡ ಬ್ರೇಕ್ ನೀಡಿತ್ತು.

'ವಿಕ್ಟರಿ' ಚಿತ್ರದ ಬಗ್ಗೆ ನಾವೀಗ ಮಾತನಾಡುತ್ತಿರುವುದಕ್ಕೆ ಕಾರಣ ಪರಭಾಷೆಯಲ್ಲಿ 'ವಿಕ್ಟರಿ'ಗೆ ಲಭ್ಯವಾಗುತ್ತಿರುವ ಡಿಮ್ಯಾಂಡ್. ಶರಣ್ ಮತ್ತು ಅಸ್ಮಿತಾ ಸೂದ್ ಅಭಿನಯದ 'ವಿಕ್ಟರಿ' ರಿಲೀಸ್ ಆದ ಹಾಗೆ, ಪರಭಾಷೆಯಲ್ಲಿ ಅದರ ರೀಮೇಕ್ ರೈಟ್ಸ್ ಗಾಗಿ ಭಾರಿ ಡಿಮ್ಯಾಂಡ್ ಇತ್ತು.

Sharan starrer 'Victory' to be remade in Telugu and Hindi

ಈಗ 'ವಿಕ್ಟರಿ' ಸಿನಿಮಾ ಅಫೀಶಿಯಲ್ಲಾಗಿ ತೆಲುಗಿಗೆ ರೀಮೇಕ್ ಆಗುತ್ತಿದೆ. ತೆಲುಗಿನಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವುದು ಅಲ್ಲರಿ ನರೇಶ್. ವಿಶೇಷ ಅಂದ್ರೆ, 'ವಿಕ್ಟರಿ' ಚಿತ್ರವನ್ನ ನಿರ್ದೇಶಿಸಿದ್ದ ನಂದಕಿಶೋರ್ ಗೆ, ಟಾಲಿವುಡ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ. [ಶರಣ್ 'V' ಚಿತ್ರ ವಿಮರ್ಶೆ: ಫುಲ್ ಕ್ವಾಟ್ರು ಕಾಮಿಡಿ]

ಬರೀ ಟಾಲಿವುಡ್ ನಲ್ಲಿ ಮಾತ್ರ ಅಲ್ಲ, ಬಾಲಿವುಡ್ ನಲ್ಲೂ 'ವಿಕ್ಟರಿ' ರೀಮೇಕ್ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಿನ್ನೆಯಷ್ಟೇ ವರದಿ ಮಾಡಿದಂತೆ ಕನ್ನಡ ನಿರ್ದೇಶಕ ನಂದಕಿಶೋರ್ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. [ಬಾಲಿವುಡ್ಡಿಗೆ ಹಾರಲಿದ್ದಾರೆ 'ರನ್ನ'ನ ಚಿನ್ನದ ನಿರ್ದೇಶಕ]

'ವಿಕ್ಟರಿ' ರೀಮೇಕ್ ಮಾಡುವುದಕ್ಕೆ ಬಾಲಿವುಡ್ ನಿರ್ಮಾಪಕರು ನಿರ್ಧರಿಸಿದರೆ, ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ನಂದಕಿಶೋರ್ 'ವಿಕ್ಟರಿ' ಬಾರಿಸುವುದು ಗ್ಯಾರೆಂಟಿ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. (ಏಜೆನ್ಸೀಸ್)

English summary
According to the reports, Kannada Film 'Victory' is to be remade in Telugu with Allari Naresh as lead. Director Nandakishore has bagged an offer to direct this flick and as well as the same in Hindi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada