Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರಗ್ಸ್ ನಂಟು ಆರೋಪ: ಶರ್ಮಿಳಾ ಮಾಂಡ್ರೆ ಹೇಳಿದ್ದೇನು?
ಚಂದನವನದ ಕೆಲವರಿಗೆ ಮಾದಕ ವಸ್ತು ಮಾಫಿಯಾದೊಂದಿಗೆ ನಂಟು ಹೊಂದಿರುವ ಪ್ರಕರಣದ ತನಿಖೆ ಬಿರುಸಾಗಿ ನಡೆಯುತ್ತಿದ್ದು, ನಟಿ ರಾಗಿಣಿ ಇಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
Recommended Video
ನಟಿ ರಾಗಿಣಿ ಅಲ್ಲದೆ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಇನ್ನೂ ಕೆಲವು ನಟಿಯರ ಹೆಸರು ಮಾಧ್ಯಮಗಳಲ್ಲಿ ದೊಡ್ಡದಾಗಿ ಕೇಳಿಬರುತ್ತಿದೆ. ಅದರಲ್ಲಿ ಒಂದು ಶರ್ಮಿಳಾ ಮಾಂಡ್ರೆ ಹೆಸರು.
ಶರ್ಮಿಳಾ ಮಾಂಡ್ರೆ ಅವರಿಗೆ ಸಿಸಿಬಿಯಿಂದ ನೋಟೀಸ್ ಹೋಗಿರುವುದು ಅಧಿಕೃತವಾಗಿಲ್ಲವಾದರೂ, ಮಾಧ್ಯಮಗಳಲ್ಲಿ ಶರ್ಮಿಳಾ ಮಾಂಡ್ರೆ ಹೆಸರು ಕೇಳಿಬರುತ್ತಿದೆ. ಇಂದ್ರಜಿತ್ ಲಂಕೇಶ್ ಸಹ, 'ಜಾಗ್ವಾರ್ ರಾಣಿ' ಎಂದು ಪರೋಕ್ಷವಾಗಿ ಶರ್ಮಿಳಾ ಅವರ ಹೆಸರು ಎಳೆದಿದ್ದಾರೆ. ಈ ಆರೋಪಗಳಿಗೆ ಶರ್ಮಿಳಾ ಮಾಂಡ್ರೆ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

'ಮಾಧ್ಯಮಗಳು, ಕೆಲವು ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿವೆ'
'ನನ್ನ ವಿರುದ್ಧ ಕೆಲವು ಮಾಧ್ಯಮಗಳು ಹಾಗೂ ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕೆಲವು ಮಾಧ್ಯಮಗಳು ಹಾಗೂ ವ್ಯಕ್ತಿಗಳು ದುರುದ್ಧೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ ಶರ್ಮಿಳಾ.

ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಸುಳ್ಳು ಹೇಳಲಾಗುತ್ತಿದೆ: ಶರ್ಮಿಳಾ
'ಚಾನೆಲ್‌ನ ಟಿಆರ್‌ಪಿ ಹೆಚ್ಚಿಸಿಕೊಳ್ಳಲು, ತಾವು ಹಣ ಮಾಡಿಕೊಳ್ಳಲು, ವಾಕ್ ಸ್ವಾತಂತ್ರ್ಯವನ್ನು ಸುಳ್ಳು ಆರೋಪಗಳಿಗೆ, ಸಾಕ್ಷ್ಯರಹಿತ ಆರೋಪಗಳನ್ನು ಮಾಡಲು ಬಳಸಲಾಗುತ್ತಿದೆ. ನಾನು ಒಬ್ಬ ವ್ಯಕ್ತಿಯಾಗಿ ಹಲವು ವರ್ಷಗಳ ಶ್ರಮದಿಂದ ಸಂಪಾದಿಸಿದ ಗೌರವವನ್ನು ಮಣ್ಣುಪಾಲು ಮಾಡುವ ಯತ್ನ ಮಾಡಲಾಗುತ್ತಿದೆ' ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಶರ್ಮಿಳಾ.

ನನಗೆ ಅವರು ಯಾರೆಂಬುದು ಗೊತ್ತಿಲ್ಲ: ಶರ್ಮಿಳಾ ಮಾಂಡ್ರೆ
'ಡ್ರಗ್ಸ್ ಪ್ರಕರಣದ ಕೆಲವರೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ. ಆದರೆ ಆ ವ್ಯಕ್ತಿಗಳು ಯಾರೆಂಬದು ನನಗೆ ಗೊತ್ತಿಲ್ಲ. ಈ ವರೆಗೆ ನಾನು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲವೇಕೆಂದರೆ ಇವೆಲ್ಲವೂ ಸುಳ್ಳು ಸುದ್ದಿಗಳಾಗಿದ್ದರಿಂದ ಅವುಗಳ ಬಗ್ಗೆ ಪ್ರತಿಕ್ರಿಯಿಸುವ ಅವಶ್ಯಕತೆ ಕಾಣಲಿಲ್ಲ' ಎಂದಿದ್ದಾರೆ ಶರ್ಮಿಳಾ.

ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶರ್ಮಿಳಾ ಮಾಂಡ್ರೆ
ನನ್ನ ಮೌನವಾಗಿದ್ದಷ್ಟೂ ನನ್ನ ವಿರುದ್ಧ ಆರೋಪಗಳು ಹೆಚ್ಚಾಗುತ್ತಿವೆ. ಹಾಗಾಗಿ ನಾನು ಮೌನವಾಗಿ ಮುಂದುವರೆಯಲಾರೆ. ಇದು ಹೀಗೆ ಮುಂದುವರೆದರೆ, ಮಾನನಷ್ಟ ಮೊಕದ್ದಮೆ ಹೂಡಲು ಸಹ ಹಿಂದೆ ನೋಡುವುದಿಲ್ಲ' ಎಂದಿದ್ದಾರೆ ಶರ್ಮಿಳಾ. ಶರ್ಮಿಳಾ ಮತ್ತು ಕುಟುಂಬದವರಿಗೆ ಕೊರೊನಾ ಸೋಂಕಾಗಿರುವ ಕಾರಣ ಅವರು ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದಾರೆ.