»   » ಪ್ರೇಮ್ 'ಹಿಟ್ಲರ್'ಗೆ ಜತೆಯಾದ ಶರ್ಮಿಳಾ ಮಾಂಡ್ರೆ

ಪ್ರೇಮ್ 'ಹಿಟ್ಲರ್'ಗೆ ಜತೆಯಾದ ಶರ್ಮಿಳಾ ಮಾಂಡ್ರೆ

Posted By:
Subscribe to Filmibeat Kannada

ಜೋಗಿ ಪ್ರೇಮ್ ಅವರ ಮುಂದಿನ ಚಿತ್ರ 'ಹಿಟ್ಲರ್' ಅನೌನ್ಸ್ ಆಗಿದ್ದು ಆ ಬಳಿಕ ಟೈಟಲ್ ವಿವಾದಕ್ಕೆ ಸಿಲುಕಿದ್ದು ಗೊತ್ತೇ ಇದೆ. ಇದೀಗ 'ಹಿಟ್ಲರ್' ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಆಕೆ ಬೇರಾರು ಅಲ್ಲ ಮೋಹಕ ನಟಿ ಶರ್ಮಿಳಾ ಮಾಂಡ್ರೆ. ಈ ಹಿಂದೆ ಕೃತಿ ಕರಬಂಧ ನಾಯಕಿ ಎಂಬ ಸುದ್ದಿ ಇತ್ತು.

ಶರ್ಮಿಳಾ ಅಭಿನಯದ ಇತ್ತೀಚಿನ 'ಗೋವಾ' ಚಿತ್ರ ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗಿ ಮಠ ಸೇರಿದ್ದು ಆಯಿತು. ಧರ್ಮ ಕೀರ್ತಿರಾಜ್ ಜೊತೆಗಿನ 'ಮುಮ್ತಾಜ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ 'ಹಿಟ್ಲರ್' ಚಿತ್ರಕ್ಕೂ ಶರ್ಮಿಳಾ ಆಯ್ಕೆಯಾಗಿರುವುದು ವಿಶೇಷ. [ಸುದೀಪ್ Vs ಪ್ರೇಮ್ ಸ್ಯಾಂಡಲ್ ವುಡ್ 'ಹಿಟ್ಲರ್' ಯಾರು?]


Actress Sharmiela Mandre

ರಘು ಹಾಸನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ 'ಪ್ರೇಮ್ ಹಿಟ್ಲರ್' ಎಂದು ಶೀರ್ಷಿಕೆ ಇಡಲಾಗಿದೆ. ವೇದ ಮೂರ್ತಿ ನಿರ್ಮಿಸುತ್ತಿರುವ ಈ ಚಿತ್ರ ಬೇಸಿಗೆಯಲ್ಲಿ ಚಿತ್ರೀಕರಣ ಶುರು ಮಾಡಲಿದೆ. ಇಷ್ಟಕ್ಕೂ 'ಹಿಟ್ಲರ್' ಶೀರ್ಷಿಕೆ ವಿವಾದಕ್ಕೆ ಒಳಗಾಗಿದ್ದೇ ಒಂದು ಅಚ್ಚರಿ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೆ 'ಹಿಟ್ಲರ್' ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದರು ನಿರ್ದೇಶಕ ಕಮ್ ನಿರ್ಮಾಪಕರಾದ ಟೇಶಿ ವೆಂಕಟೇಶ್. ಆ ಶೀರ್ಷಿಕೆಯನ್ನು ಬೇರೆಯರಿಗೆ ಕೊಡಲ್ಲ ಎಂದು ಹೇಳಿದ್ದರು. ವಿಧಿಯಿಲ್ಲದೆ ತಮ್ಮ ಚಿತ್ರಕ್ಕೆ 'ಪ್ರೇಮ್ ಹಿಟ್ಲರ್' ಎಂದು ಹೆಸರಿಟ್ಟು ಪೋಸ್ಟರನ್ನು ಬಿಡುಗಡೆ ಮಾಡಿದ್ದರು ರಘು.


ಈ ಬಗ್ಗೆ ವೆಂಕಟೇಶ್ ಅವರು ಆಕ್ರೋಶ ವ್ಯಕ್ತಪಡಿಸಿ ಫಿಲಂ ಚೇಂಬರ್ ಮೆಟ್ಟಿಲೇರಿದ್ದರು. ಹಾಗಾಗಿ 'ಹಿಟ್ಲರ್' ಶೀರ್ಷಿಕೆ ವಿವಾದಲ್ಲಿ ಸಿಲುಕಿತ್ತು. ಈ ವಿವಾದ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ. ಅದ್ಯಾವಾಗ ಮತ್ತೆ ಹೊತ್ತಿ ಉರಿಯುತ್ತದೋ ಗೊತ್ತಿಲ್ಲ. ಸದ್ಯಕ್ಕಂತೂ ರಗ್ಗು ಹೊದ್ದಿಕೊಂಡು ಮಗಲಿದೆ. (ಏಜೆನ್ಸೀಸ್)

English summary
'Jogi' Prem found a heroine for his next project Hitler. Actress Sharmiela Mandre to romance with Prem in the film. The actress is busy in upcoming movie Mumtaaz.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada