Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರು ಅಪಘಾತ ಪ್ರಕರಣ: ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್
ಲಾಕ್‌ಡೌನ್ ಸಮಯದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಇನ್ನಿತರ ಗೆಳೆಯರು ಇದ್ದ ಕಾರು ಅಪಘಾತವಾಗಿದ್ದ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ ನೀಡಲಾಗಿದೆ.
Recommended Video
ಏಪ್ರಿಲ್ 4 ರ ಮುಂಜಾನೆ 3:45 ಸಮಯದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಇನ್ನಿತರರು ಇದ್ದ ಐಶಾರಾಮಿ ಕಾರು ವಸಂತನಗದ ಮೌಂಟ್ ಕಾರ್ಮೆಲ್ ಕಾಲೇಜು ಮುಂಭಾಗದ ಅಂಡರ್‌ಪಾಸ್‌ನಲ್ಲಿ ಅಪಘಾತಕ್ಕೆ ಈಡಾಗಿತ್ತು. ಶರ್ಮಿಳಾ ಮಾಂಡ್ರೆ ಸೇರಿ ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದವು.
ಆ
ರಾತ್ರಿ
ವಾಸ್ತವವಾಗಿ
ನಡೆದಿದ್ದು
ಏನು?
ನಟಿ
ಶರ್ಮಿಳಾ
ಮಾಂಡ್ರೆ
ಹೇಳಿದ
ಸಂಗತಿ...
ಗಾಯಗೊಂಡವರೆಲ್ಲರೂ ಸ್ಥಳದಿಂದ ಪರಾರಿಯಾಗಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಸುಳ್ಳು ಘಟನೆ ನಮೂದಿಸಿ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ಮತ್ತೆ ಶರ್ಮಿಳಾ ಮಾಂಡ್ರೆ ಬೇರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು.

ಔಷಧ ತೆಗೆದುಕೊಂಡು ಬರಲು ಹೋಗಿದ್ದಾಗಿ ಹೇಳಿಕೆ
'ತಾವು ಅಗತ್ಯ ಔಷಧ ತೆಗೆದುಕೊಂಡು ಬರಲು ಹೊರಗೆ ಹೋಗಿದ್ದೆವು, ಕಾರನ್ನು ನಾನು ಚಾಲನೆ ಮಾಡುತ್ತಿರಲಿಲ್ಲ' ಎಂದು ಶರ್ಮಿಳಾ ಮಾಂಡ್ರೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆಯೇ ಇದೀಗ ಈ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ ನೀಡಲಾಗಿದೆ.

ಸೆಶನ್ಸ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸೆಶನ್ಸ್ ನ್ಯಾಯಾಲಯಕ್ಕೆ 33 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಕಾರನ್ನು ಚಲಾಯಿಸಿದ್ದ ಡಾನ್ ಥಾಮಸ್ ಅನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ಲಾಕ್‌ಡೌನ್
ಉಲ್ಲಂಘಿಸಿ
ಸ್ನೇಹಿತರ
ಜತೆ
ಜಾಲಿರೈಡ್:
ನಟಿ
ಶರ್ಮಿಳಾ
ಮಾಂಡ್ರೆ
ಕಾರು
ಅಪಘಾತ

ಅತಿ ವೇಗದ ಚಾಲನೆ ಮಾಡಿದ್ದಕ್ಕೆ ಅಪಘಾತ
ಕಾರು ಚಾಲನೆ ಪೂರ್ಣವಾಗಿ ಗೊತ್ತಿಲ್ಲದಿದ್ದರೂ ಅತಿ ವೇಗದಿಂದ ಕಾರನ್ನು ಚಲಾಯಿಸಿದ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಶರ್ಮಿಳಾ ಮಾಂಡ್ರೆ ಸೇರಿ ಇತರರ ಹೆಸರನ್ನು ಆರೋಪ ಪಟ್ಟಿಯಿಂದ ಕೈ ಬಿಡಲಾಗಿದೆ.

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ
ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಲಾಕ್‌ಡೌನ್ ಸಮಯದಲ್ಲಿ ಪಾಸ್ ಇಟ್ಟುಕೊಂಡು ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರು ರಾತ್ರಿ 3 ಗಂಟೆ ಸಮಯದಲ್ಲಿ ಹೊರಗೆ ಹೋಗಿದ್ದು ಏಕೆ? ಅಪಘಾತವಾದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು ಏಕೆ? ಕಾರು ಯಾರದ್ದು? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಿದ್ದವು.
ಅಪಘಾತಕ್ಕೀಡಾದ
ಶರ್ಮಿಳಾ
ಮಾಂಡ್ರೆ
ಕಾರ್ನಲ್ಲಿ
ಈ
ಪಾಸ್
ಹೇಗೆ
ಬಂತು?:
ಹೆಚ್ಚಿದ
ಅನುಮಾನ