»   » 'ತಾಯಿಗೆ ತಕ್ಕ ಮಗ'ನಾಗಿ ಅಜೇಯ್ ರಾವ್

'ತಾಯಿಗೆ ತಕ್ಕ ಮಗ'ನಾಗಿ ಅಜೇಯ್ ರಾವ್

Posted By:
Subscribe to Filmibeat Kannada

ಅಜೇಯ್ ರಾವ್ ಗೆ 'ಕೃಷ್ಣ' ಅಂತ ನಾಮಕರಣ ಮಾಡಿ, 'ಕೃಷ್ಣನ್ ಲವ್ ಸ್ಟೋರಿ' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಶಶಾಂಕ್. ಈ ಇಬ್ಬರ ಕಾಂಬಿನೇಷನ್ ನಲ್ಲೇ ಇಂದು 'ಕೃಷ್ಣಲೀಲಾ' ಚಿತ್ರ ತೆರೆಗೆ ಬಂದಿದೆ.

'ಕೃಷ್ಣಲೀಲಾ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ನಿರ್ದೇಶಕ ಶಶಾಂಕ್ ತಮ್ಮ ಹೊಸ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಅದೇ 'ತಾಯಿಗೆ ತಕ್ಕ ಮಗ'.

'ತಾಯಿಗೆ ತಕ್ಕ ಮಗ'...ಡಾ.ರಾಜ್ ಕುಮಾರ್, ಪದ್ಮಪ್ರಿಯಾ, ಸಾಹುಕಾರ್ ಜಾನಕಿ ಅಭಿನಯದ ಈ ಚಿತ್ರ 1978ರಲ್ಲಿ ತೆರೆಕಂಡು ಅಭೂತ ಪೂರ್ವ ಯಶಸ್ವಿ ದಾಖಲಿಸಿತ್ತು.

shashank-ajai-rao-to-pair-up-again-for-thayige-thakka-maga

ಈಗ ಇದೇ ಹೆಸರನ್ನಿಟ್ಟುಕೊಂಡು ಶಶಾಂಕ್ ಹೊಸ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಹೆಸರು ಒಂದೇ ಆಗಿದ್ದರೂ, ಅಣ್ಣಾವ್ರ ಸಿನಿಮಾಗೂ, ಈ ಚಿತ್ರಕ್ಕೂ ಸಂಬಂಧವಿಲ್ಲ. ಆದ್ರೆ, ತಾಯಿ ಮಗನ ಸೆಂಟಿಮೆಂಟ್ ಚಿತ್ರ ಅನ್ನುತ್ತಾರೆ ನಿರ್ದೇಶಕ ಶಶಾಂಕ್. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]

ವಿಶೇಷ ಅಂದ್ರೆ, 'ತಾಯಿಗೆ ತಕ್ಕ ಮಗ' ಅಂತ ಅನಿಸಿಕೊಳ್ಳುವುದಕ್ಕೆ ಹೊರಟಿರುವುದು ಒನ್ಸ್ ಅಗೇನ್ 'ಕೃಷ್ಣ' ಅಜೇಯ್ ರಾವ್. ನಿಜಜೀವನದಲ್ಲೂ ಅಜೇಯ್ ರಾವ್, ತಾಯಿಗೆ ತಕ್ಕ ಮಗ. ಅಮ್ಮ ಹಾಕಿದ ಗೆರೆಯನ್ನ ಅಜೇಯ್ ಎಂದೂ ದಾಟೋಲ್ಲ.

ಇಬ್ಬರ ಸೆಂಟಿಮೆಂಟ್ ಕಹಾನಿನೇ 'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಸ್ಪೂರ್ತಿ ಅಂತ ಹೇಳುವ ಶಶಾಂಕ್, ಅದಾಗ್ಲೇ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಕೂಡ ಮಾಡಿಸಿದ್ದಾರೆ. ಸದ್ಯಕ್ಕೆ ಇನ್ನೂ ಪ್ಲಾನಿಂಗ್ ಹಂತದಲ್ಲಿರುವ ಈ ಚಿತ್ರ ಶಶಾಂಕ್ ರವರ 'ಮುಂಗಾರು ಮಳೆ-2' ಚಿತ್ರದ ನಂತರ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್)

English summary
Kannada Director Shashank is directing yet another film for Ajay Rao and the film has been titled as 'Thayige Thakka Maga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada