»   » ಎಲ್ಲಾ ಬರೀ ರೂಮರ್ರು, ಪುಸ್ತಕದ ಬದನೇಕಾಯಿ ಎಂದ ಉಪೇಂದ್ರ.!

ಎಲ್ಲಾ ಬರೀ ರೂಮರ್ರು, ಪುಸ್ತಕದ ಬದನೇಕಾಯಿ ಎಂದ ಉಪೇಂದ್ರ.!

Posted By:
Subscribe to Filmibeat Kannada

ಗಾಂಧಿನಗರದ ಗಲ್ಲಿಗಳನ್ನ ಒಂದ್ ರೌಂಡ್ ಹಾಕೊಂಡ್ ಬಂದ್ರೆ ಮಿನಿಮಂ ಒಂದು ಡಜನ್ ಡಿಸೈನ್ ಡಿಸೈನ್ ಸುದ್ದಿಗಳು ಸಿಗ್ತವೆ. (ಅವುಗಳ ಸತ್ಯಾಸತ್ಯತೆ, ಪರಾಮರ್ಶೆ, ವಿಮರ್ಶೆ, ಚರ್ಚೆ ಆಮೇಲೆ.) ಹಾಗೇ, ರಿಯಲ್ ಸ್ಟಾರ್...ಸೂಪರ್ ಸ್ಟಾರ್ ಉಪೇಂದ್ರ ಬಗ್ಗೆ ಅಂತೆ-ಕಂತೆಗಳ ಒಂದು ಕಂತೆ ಸುದ್ದಿಗಳು ಓಡಾಡ್ತಿವೆ.

'ಉಪೇಂದ್ರ' ಸೀಕ್ವೆಲ್ 'ಉಪ್ಪಿ-2' ಮಾಡಿದ್ಹಾಗೆ, 'ಶ್-2' ಹಾಗೂ 'ಓಂ-2' ಚಿತ್ರಗಳನ್ನೂ ಉಪೇಂದ್ರ ನಿರ್ದೇಶಿಸುತ್ತಾರಂತೆ ಅಂತ ಯಾರೋ ಹಬ್ಬಿಸಿದ್ದಾರೆ. ಈ ಸುದ್ದಿ ಊರೆಲ್ಲ ರೌಂಡ್ ಹಾಕಿ, ಕೊನೆಗೆ ಉಪ್ಪಿ ಕಿವಿಗೂ ಬಿದ್ದು ತುಟಿ ಎರಡು ಮಾಡುವ ಹಾಗಾಗಿದೆ.!

ಎಲ್ಲ ರೂಮರ್ಸ್ ಎಂದ ಉಪೇಂದ್ರ.!

ರಿಯಲ್ ಸ್ಟಾರ್ ಉಪೇಂದ್ರ 'ಶ್-2' ಹಾಗೂ 'ಓಂ-2' ಚಿತ್ರಗಳಿಗೆ ಆಕ್ಷನ್ ಕಟ್ ಹೇಳುವ ಸುದ್ದಿ ಬರೀ ಗಾಳಿಸುದ್ದಿ. ಹಾಗಂತ ಸ್ವತಃ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಪವನ್ ಜೊತೆಗೆ ನಟಿಸುವುದು ಕೂಡ ಸುಳ್ಳು

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ನಟಿಸುವ ಸುದ್ದಿ ಕೂಡ ಸುಳ್ಳು ಎಂದಿದ್ದಾರೆ ಉಪೇಂದ್ರ.

ಟ್ವೀಟ್ ಮೂಲಕ ಸ್ಪಷ್ಟನೆ

''ಪವನ್ ಕಲ್ಯಾಣ್ ಜೊತೆ ತೆಲುಗು ಚಿತ್ರ, ಶ್-2, ಓಂ-2.. ಎಕ್ಸೆಟ್ರಾ, ಎಕ್ಸೆಟ್ರಾ...ಹ್ಹ...ಹ್ಹ...ಹ್ಹ... ಎಲ್ಲವೂ ರೂಮರ್ಸ್'' ಅಂತ ಟ್ವೀಟ್ ಮಾಡಿದ್ದಾರೆ ಉಪೇಂದ್ರ.

ಉಪೇಂದ್ರ ಫುಲ್ ಬಿಜಿ

ಸದ್ಯ ಉಪ್ಪಿ ಕೈಯಲ್ಲಿ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ', 'ಕಣ್ಣೇಶ್ವರ', 'ಉಪ್ಪಿ ರುಪೀ' ಚಿತ್ರಗಳಿವೆ. ಅದೆಲ್ಲ ಮುಗಿದ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಡ್ತಾರಾ, ಕಾದು ನೋಡ್ಬೇಕು.

English summary
Real Star Upendra has taken his Twitter Account to clarify that he is not working with Power Star Pawan Kalyan and not Directing 'Shh-2', 'Om-2'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X