For Quick Alerts
  ALLOW NOTIFICATIONS  
  For Daily Alerts

  ಯಡಿಯೂರಪ್ಪ ಹೊಸ ಸಿನಿಮಾ ಹೆಸರೇನು ಗೊತ್ತಾ?

  By Rajendra
  |

  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಈಗವರು ರಾಜಕೀಯ ರಂಗದ ರೆಬೆಲ್ ಸ್ಟಾರ್. ಇನ್ನೇನಿದ್ದರೂ ಅವರ ಜೀವನ ಕರ್ನಾಟಕ ಜನತಾ ಪಕ್ಷಕ್ಕೆ (ಕೆಜೆಪಿ) ಮುಡಿಪು. ಇರಲಿ ವಿಷಯ ಇದಲ್ಲ. ಯಡಿಯೂರಪ್ಪ ಅವರ ಮೇಲೆ ಚಿತ್ರ ತೆಗೆಯಬೇಕೆಂದು ಹಲವಾರು ಜನ ಮುಂದೆ ಬಂದು ಅಷ್ಟೇ ವೇಗವಾಗಿ ಹಿಂದೆ ಸರಿದಿದ್ದರು.

  ಈ ಹಿಂದೆ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಶ್ರೀಮಾನ್ ಬಿ ಎಸ್ ಯಡಿಯೂರಪ್ಪ ಅವರೇ ತಮ್ಮ ಚಿತ್ರದ ಕಥಾನಾಯಕ ಎಂದಿದ್ದರು. ಆಕ್ಷನ್, ಕಟ್ ಹೇಳಲಿರುವವರು ಎಸ್ ವಿ ರಾಜೇಂದ್ರ ಸಿಂಗ್ ಬಾಬು.

  ಬಳಿಕ ಆ ಚಿತ್ರದ ಕಥೆ ಏನಾಯಿತೋ ಏನೋ ಗೊತ್ತಿಲ್ಲ. ರೇಣುಕಾಚಾರ್ಯ ಅವರು ಸೈಲೆಂಟ್ ಆದರು. ರಾಜೇಂದ್ರ ಸಿಂಗ್ ಬಾಬು ಬಾಯ್ಬಿಡಲಿಲ್ಲ. ಈಗ ಯಡಿಯೂರಪ್ಪ ಅವರ ಕುರಿತು ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ ಸೂರಪ್ಪ ಬಾಬು. ಚಿತ್ರದ ಶೀರ್ಷಿಕೆ 'ಶಿಕಾರಿಪುರ'.

  ಈಗಾಗಲೆ ಈ ಶೀರ್ಷಿಕೆಯನ್ನು ಫಿಲಂ ಚೇಂಬರ್ ನಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಯಡಿಯೂರಪ್ಪ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಖಚಿತವಾಗಿಲ್ಲದಿದ್ದರೂ, ಪರಭಾಷಾ ಚಿತ್ರಗಳಲ್ಲಿ ಹೆಸರು ಮಾಡಿರುವ ನಾಜಿರ್ ಪೋಷಿಸುವ ಸಾಧ್ಯತೆಗಳಿವೆ.

  ಚಿತ್ರದಲ್ಲಿಯಡಿಯೂರಪ್ಪ ಪಾತ್ರವನ್ನು ನಾಯಕನನ್ನಾಗಿ ಚಿತ್ರಿಸಲಾಗುತ್ತದೋ ಅಥವಾ ಖಳನಾಯಕನನ್ನಾಗಿಯೋ? ಚಿತ್ರದ ನಾಯಕಿ ಯಾರು? ಇಷ್ಟಕ್ಕೂ ಚಿತ್ರದಲ್ಲಿ ನಾಯಕಿ ಇರುತ್ತಾರಾ? ಎಂಬ ಮುಂತಾದ ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ಸಿಗಬೇಕು. (ಏಜೆನ್ಸೀಸ್)

  English summary
  A Kannada film on former chief minister BS Yeddyurappa titled as 'Shikaripura'. Producer Soorappa Babu registered the titled in Karnataka Film Chamber of Commerce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X