For Quick Alerts
  ALLOW NOTIFICATIONS  
  For Daily Alerts

  ಪ್ರಣಿತಾ ಮದುವೆಗೆ ಶುಭಕೋರಿದ ಬಿಟೌನ್ ಸುಂದರಿ ಶಿಲ್ಪಾ ಶೆಟ್ಟಿ

  |

  'ಪೊರ್ಕಿ' ಖ್ಯಾತಿ ನಟಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜ್ ಜೊತೆ ತೀರಾ ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ವಿವಾಹವಾದರು. ಕೋವಿಡ್ ಕಾರಣದಿಂದ ಹೆಚ್ಚು ಮಂದಿಗೆ ಆಹ್ವಾನ ಇರಲಿಲ್ಲ. ಕೇವಲ ಕುಟುಂಬಸ್ಥರು ಮಾತ್ರ ಈ ವಿವಾಹದಲ್ಲಿ ಭಾಗಿಯಾಗಿದ್ದರು ಎಂದು ತಿಳಿದಿದೆ.

  ಪ್ರಣಿತಾ ಮದುವೆ ವಿಚಾರ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಕೆಲ ಕ್ಷಣ ಅಚ್ಚರಿಯಾದರು. ಏನಾಯಿತು? ಸುಳಿವು ಸಹ ಕೊಡದೆ ಪ್ರಣಿತಾ ವೈವಾಹಿಕ ಬದುಕಿಗೆ ಕಾಲಿಟ್ಟರು ಎಂದು ಚರ್ಚಿಸಿದರು. ಕೋವಿಡ್ ಕಾರಣ ಎಂದು ತಿಳಿದ ಬಳಿಕ ಒಳ್ಳೆಯದಾಗಲಿ ಎಂದು ಶುಭಕೋರಿದರು.

  ಗುಟ್ಟಾಗಿ ಮದುವೆಯಾದ ನಟಿ ಪ್ರಣಿತಾ ಸುಭಾಷ್ಗುಟ್ಟಾಗಿ ಮದುವೆಯಾದ ನಟಿ ಪ್ರಣಿತಾ ಸುಭಾಷ್

  ಇದೀಗ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್ ವುಡ್ ನಟಿ ಪ್ರಣಿತಾ ಮದುವೆಗೆ ಶುಭಕೋರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪ್ರಣಿತಾ-ನಿತಿನ್ ರಾಜ್ ಫೋಟೋ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

  ಶಿಲ್ಪಾ ಶೆಟ್ಟಿ ಜೊತೆ ನಟನೆ

  ಶಿಲ್ಪಾ ಶೆಟ್ಟಿ ಜೊತೆ ನಟನೆ

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೂ ಕನ್ನಡ ನಟಿ ಪ್ರಣಿತಾಗು ಎಲ್ಲಿಂದ ಪರಿಚಯ ಎಂದು ಚಿಂತಿಸಬೇಡಿ. ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ದಾರೆ. 'ಹಂಗಾಮ-2' ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಪ್ರಣಿತಾ ಅಭಿನಯಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

  ಪರೇಶ್ ರಾವಲ್-ಶಿಲ್ಪಾ ಶೆಟ್ಟಿ

  ಪರೇಶ್ ರಾವಲ್-ಶಿಲ್ಪಾ ಶೆಟ್ಟಿ

  ಪ್ರಿಯದರ್ಶನ್ ನಿರ್ದೇಶಿಸಿರುವ 'ಹಂಗಾಮ-2' ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ಮೀಜಾನ್ ಜಾಫ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪರೇಶ್ ರಾವಲ್‌ಗೆ ಜೋಡಿಯಾಗಿ ಶಿಲ್ಪಾ ಶೆಟ್ಟಿ ಹಾಗು ಮೀಜಾನ್‌ಗೆ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ದಾರೆ. ಹೀಗಾಗಿ, ಪ್ರಣಿತಾ ಮತ್ತು ಶಿಲ್ಪಾ ಶೆಟ್ಟಿ ನಡುವೆ ಸ್ನೇಹ ಇದೆ.

  ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ಪ್ರಣಿತಾ

  ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ಪ್ರಣಿತಾ

  ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲೂ ಪ್ರಣಿತಾ ನಟಿಸಿದ್ದಾರೆ. ಸಂಜಯ್ ದತ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರವೂ ಇನ್ನು ತೆರೆಕಂಡಿಲ್ಲ.

  Recommended Video

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada
  ನಿತಿನ್ ರಾಜ್ ಯಾರು?

  ನಿತಿನ್ ರಾಜ್ ಯಾರು?

  ಪ್ರಣಿತಾ ಮದುವೆಯಾಗಿರುವ ನಿತಿನ್ ರಾಜ್ ವೃತ್ತಿಯಲ್ಲಿ ಉದ್ಯಮಿ. ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ್ದು, ಬೆಂಗಳೂರಿನ ಜಯನಗರದಲ್ಲಿ ಪ್ರತಿಷ್ಠಿತ ಮಾಲ್‌ವೊಂದರ ಮಾಲೀಕ. ಕೆಲವು ಖಾಸಗಿ ಕಂಪನಿಗಳಲ್ಲಿ ಸಹಭಾಗಿತ್ವ ಹೊಂದಿದ್ದಾರೆ ಎಂಬ ಮಾಹಿತಿ ಇದೆ.

  English summary
  Bollywood Actress Shilpa Shetty wishes to Kannada actress Pranitha marriage.
  Wednesday, June 2, 2021, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X