For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗ: ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ, 3 ಸಾವಿರ ಜನರಿಗೆ ಬಾಡೂಟ

  By ಶಿವಮೊಗ್ಗ ಪ್ರತಿನಿಧಿ
  |

  ಶಿವಮೊಗ್ಗ ನಗರದಲ್ಲಿ ಅಭಿಮಾನಿಗಳಿಂದ ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಮೂರು ಸಾವಿರ ಜನರಿಗೆ ಬಾಡೂಟ ಬಡಿಸಿ, ಯುವಕರು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು.

  ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀ ವೀರಕೇಸರಿ ಯುವಕರ ಸಂಘದ ವತಿಯಿಂದ ನಟ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.

  ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ

  ಬಿ.ಹೆಚ್.ರಸ್ತೆ ಪಕ್ಕದಲ್ಲೇ ವಿದ್ಯಾನಗರದಲ್ಲಿ ವಿವಿಧ ಹೂವುಗಳಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಅದರಲ್ಲಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇರಿಸಿದ್ದರು, ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಯುಕವರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ತಮ್ಮ ನೆಚ್ಚಿನ ನಟನ ಸ್ಮರಣೆ ಮಾಡಿದರು.

  3 ಸಾವಿರ ಜನರಿಗೆ ಬಾಡೂಟ

  3 ಸಾವಿರ ಜನರಿಗೆ ಬಾಡೂಟ

  ಮೊದಲ ಪುಣ್ಯ ಸ್ಮರಣೆ ಅಂಗವಾಗಿ ಸುಮಾರು 3 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ಕುರಿ, 2 ಕ್ವಿಂಟಾಲ್ ಚಿಕನ್, ಮೊಟ್ಟೆ ಬಳಸಿ ಬಾಡೂಟ ತಯಾರಿಸಲಾಗಿತ್ತು. ವಿದ್ಯಾನಗರದ ಮನೆಗಳು, ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಊಟ ಬಡಿಸಿದರು. ನಟ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ವರ್ಷ ಇದೆ ರೀತಿ ಸ್ಮರಣೆ ಮಾಡಿಕೊಳ್ಳುತ್ತೇವೆ ಎಂದು ಶ್ರೀ ವೀರಕೇಸರಿ ಯುವಕರ ಸಂಘದ ಹರೀಶ್ ತಿಳಿಸಿದರು.

  ರಾಜ್ಯದಾದ್ಯಂತ ಫುಡ್‌ಫೆಸ್ಟ್

  ರಾಜ್ಯದಾದ್ಯಂತ ಫುಡ್‌ಫೆಸ್ಟ್

  ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ರಾಜ್ಯದಾದ್ಯಂತ ಫುಡ್‌ಫೆಸ್ಟ್ ಆಯೋಜಿಸಲಾಗಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಪುನೀತ್ ಫುಡ್ ಫೆಸ್ಟಿವಲ್ ಅನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಾಧ್ಯವೋ ಅಷ್ಟು ಹೊಟೇಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಇಷ್ಟು ಪಡುತ್ತಿದ್ದ ಆಹಾರವನ್ನು ಸಿದ್ಧಪಡಿಸಲಿದ್ದಾರೆ. ಈ ಮೆನ್ಯೂಗಳಿಗೆ 'ಫ್ಲೇವರ್ಸ್ ಆಫ್ ಗಂಧದ ಗುಡಿ' ಎಂದು ಹೆಸರಿಡಲಾಗಿದೆ. ಸಸ್ಯಾಹಾರಿ ಹೊಟೇಲ್‌ಗಳಲ್ಲಿ ವೆಬ್ ಮೆನ್ಯೂ ಹಾಗೂ ಮಾಂಸಹಾರಿ ಹೊಟೇಲ್‌ಗಳಲ್ಲಿ ನಾನ್ ವೆಜ್ ಇರುತ್ತೆ. ಈ ಆಹಾರವನ್ನು ಹಣ ನೀಡಿ ಜನರು ಸವಿಯಬಹುದು. ಫುಡ್‌ ಫೆಸ್ಟ್‌ ಅಕ್ಟೋಬರ್ 22, 23 ರಂದು ನಡೆಯಲಿದೆ.

  'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್‌

  'ಗಂಧದ ಗುಡಿ' ಪ್ರೀ-ರಿಲೀಸ್ ಇವೆಂಟ್‌

  'ಗಂಧದ ಗುಡಿ' ಡಾಕ್ಯುಸಿನಿಮಾ ಪ್ರೀ-ರಿಲೀಸ್ ಇವೆಂಟ್‌ಗೆ ಈಗಾಗಲೇ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಅಖಾಡಕ್ಕಿಳಿದಿದ್ದಾರೆ. ದಕ್ಷಿಣ ಭಾರತದ ದಿಗ್ಗಜರಾದ ರಜನಿಕಾಂತ್ ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಇನ್ನೊಂದು ಕಡೆ ಅಮಿತಾಭ್ ಬಚ್ಚನ್‌ಗೆ ಕೂಡ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಕರ್ನಾಟಕದ ಸಿಎಂ ಬಜವರಾಜ್ ಬೊಮ್ಮಾಯಿ ಅವರಿಗೂ ಇನ್ವಿಟೇಷನ್ ಕೊಡಲಾಗಿದೆ. 'ಗಂಧದ ಗುಡಿ' ಡಾಕ್ಯು ಸಿನಿಮಾ ಅಕ್ಟೋಬರ್ 28 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.

  'ಗಂಧದ ಗುಡಿ' ಡಾಕ್ಯು ಸಿನಿಮಾ

  'ಗಂಧದ ಗುಡಿ' ಡಾಕ್ಯು ಸಿನಿಮಾ

  'ಗಂಧದ ಗುಡಿ' ಡಾಕ್ಯು ಸಿನಿಮಾವು ಸಾಮಾನ್ಯ ಸಿನಿಮಾಗಳಂತಲ್ಲ. ಇದರಲ್ಲಿ ಪುನೀತ್ ರಾಜ್‌ಕುಮಾರ್ ಸ್ವತಃ ಪುನೀತ್ ರಾಜ್‌ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಸುಂದರ, ಪ್ರೇಕ್ಷಣೀಯ ಸ್ಥಗಳಿಗೆ ತೆರಳಿ ಚಿತ್ರೀಕರಿಸಿಕೊಂಡು ಬರಲಾಗಿದೆ. ಆಯಾ ಸ್ಥಳಗಳ ಬಗ್ಗೆ ಪುನೀತ್ ರಾಜ್‌ಕುಮಾರ್ ನೆನಪುಗಳನ್ನು ಸಹ ತೆರೆದಿಟ್ಟಿದ್ದಾರೆ. ಈ ಡಾಕ್ಯುಸಿನಿಮಾದ ಪಯಣದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಅಮೋಘವರ್ಷ ಸಹ ಜೊತೆಯಾಗಿದ್ದಾರೆ.

  English summary
  Shimoga fans served Non-vegetarian foods on Puneeth Rajkumar's remembrance. Puneeth Rajkumar's last movie Gandhada Gudi releasing on October 28.
  Wednesday, October 19, 2022, 19:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X