ಶೈನ್ ಶೆಟ್ಟಿ- ಗಾಯಕಿ ಸಂಗೀತಾ ಕೊನೆಗೂ ಸರ್ಪ್ರೈಸ್ ಕೊಟ್ಟೆ ಬಿಟ್ಟರು!

ಕಳೆದ ಒಂದು ವಾರದಿಂದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ಗಾಯಕಿ ಸಂಗೀತಾ ರಾಜೀವ್ ಹೆಚ್ಚು ಸುದ್ದಿಯಲ್ಲಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಾವು ಹಾಕಿದ್ದ ಪೋಸ್ಟ್‌ಗಳಿಂದಲೇ ಭಾರಿ ಕುತೂಹಲ ಮೂಡಿಸಿದ್ದ ಈ ಜೋಡಿ ಕೊನೆಗೂ ಭಾನುವಾರ ಸರ್ಪ್ರೈಸ್ ಕೊಟ್ಟಿದ್ದಾರೆ.

ಶೈನ್ ಶೆಟ್ಟಿ ಮತ್ತು ಸಂಗೀತಾ ಇಬ್ಬರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಫೋಟೋಗಳು, ಅದಕ್ಕೆ ಅವರಿಬ್ಬರು ಹಾಕಿದ್ದ ಕ್ಯಾಪ್ಷನ್‌ಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದ ನೆಟ್ಟಿಗರು ಇವರಿಬ್ಬರು ಎಂಗೇಜ್ ಆಗಿದ್ದಾರೆ. ಬಹುಶಃ ಮದ್ವೆ ಬಗ್ಗೆ ಘೋಷಣೆ ಮಾಡುತ್ತಿದ್ದಾರೆ ಎಂದು ನಿರೀಕ್ಷಿಸಿದ್ದರು. ಆದ್ರೆ, ಊಹೆ ಮಾಡಿದ ವಿಚಾರಕ್ಕೆ ಟ್ವಿಸ್ಟ್ ಕೊಟ್ಟ ಜೋಡಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಮುಂದೆ ಓದಿ....

ನಿಶ್ಚಿತಾರ್ಥನೂ ಅಲ್ಲ, ಮದ್ವೆನೂ ಅಲ್ಲ

ನಿಶ್ಚಿತಾರ್ಥನೂ ಅಲ್ಲ, ಮದ್ವೆನೂ ಅಲ್ಲ

ಶೈನ್ ಶೆಟ್ಟಿ ಮತ್ತು ಸಂಗೀತಾ ರಾಜೀವ್ ವಿಚಾರದಲ್ಲಿ ಎಲ್ಲರೂ ಊಹಿಸಿದ್ದು ಸುಳ್ಳಾಗಿದೆ. ಸರ್ಪ್ರೈಸ್ ಎಂದು ಹೇಳಿದ್ದು ನಿಶ್ಚಿತಾರ್ಥನೂ ಇಲ್ಲ, ಮದ್ವೆ ಸುದ್ದಿನೂ ಅಲ್ಲ. ಅವರಿಬ್ಬರು ಒಟ್ಟಿಗೆ ಸೇರಿ ಮಾಡುತ್ತಿರುವ ಹೊಸ ಪ್ರಾಜೆಕ್ಟ್ ಕುರಿತು ಘೋಷಣೆ ಮಾಡಿದ್ದಾರೆ. 'ನೀನೇ ನೀನೇ' ಎಂಬ ಹೊಸ ಆಲ್ಬಮ್ ಸಾಂಗ್ ಮಾಡಿರುವ ಬಗ್ಗೆ ಸರ್ಪ್ರೈಸ್ ನೀಡಿದ್ದಾರೆ.

ಸಂಗೀತಾ ಕಂಪೋಸ್, ಶೈನ್ ನಟನೆ

ಸಂಗೀತಾ ಕಂಪೋಸ್, ಶೈನ್ ನಟನೆ

ಸಂಗೀತಾ ರಾಜೀವ್ ಕಂಪೋಸ್ ಮಾಡಿ ಹಾಡಿರುವ 'ನೀನೇ ನೀನೇ' ಹಾಡಿಗೆ ಶೈನ್ ಶೆಟ್ಟಿ ನಟನೆ ಮಾಡಿದ್ದಾರೆ. ವಿಶೇಷ ಅಂದ್ರೆ ಸಂಗೀತಾ ಜೊತೆ ಈ ಹಾಡಿಗೆ ಸೋನು ನಿಗಮ್ ಸಹ ಗಾಯಕರಾಗಿದ್ದಾರೆ. ಸಂಗೀತಾ ಮತ್ತು ಶ್ರೀನಾಥ್ ಎಂಬುವರು ಸಾಹಿತ್ಯ ರಚಿಸಿದ್ದು, ಸೆಪ್ಟೆಂಬರ್ 28ಕ್ಕೆ ಟೀಸರ್ ಬಿಡುಗಡೆಯಾಗಲಿದೆ.

ನಿರಾಸೆಯೂ ಕಂಡು ಬಂತು

ನಿರಾಸೆಯೂ ಕಂಡು ಬಂತು

ಶೈನ್ ಶೆಟ್ಟಿ ಮತ್ತು ಸಂಗೀತಾ ಇಬ್ಬರು ಭಾನುವಾರ ಸರ್ಪ್ರೈಸ್ ಕೊಡ್ತಾರೆ ಎಂದಾಗ, ಬಹುಶಃ ಎಂಗೇಜ್ ಆಗಿರುವುದನ್ನು ಬಹಿರಂಗಪಡಿಸಲಿದ್ದಾರೆ ಎಂದು ನಿರೀಕ್ಷಿಸಿದ್ದ ಕೆಲವರು, ಈ ಸುದ್ದಿಯಿಂದ ನಿರಾಸೆಯೂ ಆಗಿದ್ದಾರೆ. ಅದನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.

Recommended Video

ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
ನೀ ಹಿಂಗ ನೋಡಬ್ಯಾಡ...

ನೀ ಹಿಂಗ ನೋಡಬ್ಯಾಡ...

ಇದಕ್ಕೂ ಮುಂಚೆ 'ನೀ ಹಿಂಗ ನೋಡಬ್ಯಾಡ...' ಎಂಬ ಹಾಡನ್ನು ಸಂಗೀತಾ ಕಂಪೋಸ್ ಮಾಡಿದ್ದರು. ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಯೂಟ್ಯೂಬ್‌ನಲ್ಲಿ 28 ಲಕ್ಷಕ್ಕೂ ಅಧಿಕ ಬಾರಿ ಈ ಹಾಡು ವೀಕ್ಷಣೆ ಕಂಡಿದೆ.

More from Filmibeat

English summary
Bigg boss fame Shine shetty and singer Sangeetha Rajeev announced album song together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X