For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ 'ಜೇಮ್ಸ್' ಸಿನಿಮಾಗೆ ಎಂಟ್ರಿ ಕೊಟ್ಟ 'ಬಿಗ್ ಬಾಸ್' ವಿನ್ನರ್

  |

  ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಜೇಮ್ಸ್ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಲಾಕ್ ಡೌನ್ ಮುಗಿಸಿ ಮತ್ತೆ ಜುಲೈ 5ರಿಂದ ಪವ್ ಪುನೀತ್ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.

  ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಜೇಮ್ಸ್ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚಿಗಷ್ಟೆ ಜೇಮ್ಸ್ ಚಿತ್ರಕ್ಕೆ ಘಟೋತ್ಕಚ ಖ್ಯಾತಿಯ ನಟ ಕೇತನ್ ಕರಾಂಡೆ ಎಂಟ್ರಿ ಕೊಟ್ಟಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊರ್ವ ನಟನ ಎಂಟ್ರಿಯಾಗಿದೆ.

  ಪುನೀತ್ 'ಜೇಮ್ಸ್' ಸಿನಿಮಾದಲ್ಲಿ 'ಘಟೋತ್ಕಚ' ಖ್ಯಾತಿಯ ಕೇತನ್ಪುನೀತ್ 'ಜೇಮ್ಸ್' ಸಿನಿಮಾದಲ್ಲಿ 'ಘಟೋತ್ಕಚ' ಖ್ಯಾತಿಯ ಕೇತನ್

  ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಜೇಮ್ಸ್ ಸಿನಿಮಾತಂಡ ಸೇರಿದ್ದಾರೆ. ಇಂದಿನಿಂದ ನಡೆಯುವ ಚಿತ್ರೀಕರಣದಲ್ಲಿ ಶೈನ್ ಶೆಟ್ಟಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆ ಜೊತೆ ಮಾತನಾಡಿರುವ ಶೈನ್, ಸುಮಾರು ಒಂದು ದಶಕದಿಂದ ಚಿತ್ರರಂಗದಲ್ಲಿದ್ದರೂ ಪವರ್ ಸ್ಟಾರ್ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. ಅವರನ್ನು ತುಂಬಾ ಹತ್ತಿರದಿಂದ ನೋಡುವ ಬಯಕೆ ಹೊಂದಿದ್ದ ಶೈನ್ ಶೆಟ್ಟಿಗೆ ಜೇಮ್ಸ್ ಮೂಲಕ ಆಸೆ ಈಡೇರಿದೆ.

  ಜೇಮ್ಸ್ ಚಿತ್ರಕ್ಕೆ ಆಫರ್ ಬಂದಾಗ ತುಂಬಾ ಸಂತೋಷವಾಯಿತು ಎಂದು ಶೈನ್ ಹೇಳಿದ್ದಾರೆ. ಇನ್ನು ಅವಕಾಶ ನೀಡಿದ ನಿರ್ದೇಶಕ ಚೇತನ್ ಗೆ ಧನ್ಯವಾದ ತಿಳಿಸಿದ್ದಾರೆ.

  ಪಾತ್ರದ ಬಗ್ಗೆ ಬಹಿರಂಗ ಪಡಿಸಿದ ಶೈನ್, ಪವರ್ ಸ್ಟಾರ್ ತುಂಬಾ ಹತ್ತಿರದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹಿಂದೆದೂ ನೋಡಿರದ ಪಾತ್ರದಲ್ಲಿ ಶೈನ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಶೈನ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಉತ್ಸುಕದಲ್ಲಿದ್ದಾರೆ.

  ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ ಶೈನ್ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದರು. ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳದ ಶೈನ್ ಇದೀಗ ಜೇಮ್ಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಜೇಮ್ಸ್ ಸದ್ಯ ಟಾಕಿ ಭಾಗ, ಹಾಡು, ಆಕ್ಷನ್ ಸೇರಿದಂತೆ 30ರಷ್ಟು ಚಿತ್ರೀಕರಣ ಬಾಕಿ ಉಳಿದಿದೆ. ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್ ಹಾಗೂ ಆದಿತ್ಯ ಮೆನನ್, ಅನು ಪ್ರಭಾಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

  Recommended Video

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

  ನಟ ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಮುಗಿಸಿ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ದ್ವಿತ್ವ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

  English summary
  Bigg Boss winner Shine Shetty joins the cast of Puneeth Rajkumar's James movie.
  Saturday, July 17, 2021, 13:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X