Don't Miss!
- News
Padma Awards: ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೇ ಬರುತ್ತಿರಲಿಲ್ಲ; ಎಸ್.ಎಲ್. ಭೈರಪ್ಪ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಡವರಿಗೆ ಸಹಾಯ ಮಾಡುತ್ತಿರುವ ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್ ಶೆಟ್ಟಿ
ಕೊರೊನಾ ವಿರುದ್ಧ ಹೋರಾಟಕ್ಕೆ ಸಾಕಷ್ಟು ಮಂದಿ ದೇಣಿಗೆ ನೀಡುತ್ತಿದ್ದಾರೆ. ಚಿತ್ರರಂಗದ ಸಾಕಷ್ಟು ಗಣ್ಯರು ಕೋಟಿ ಕೋಟಿ ನೀಡುವ ಮೂಲಕ ಬಡವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಇದೀಗ ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಕೂಡ ಬಡವರು, ದಿನಗೂಲಿ ಕಾರ್ಮಿಕರ ನೆರವಿಗೆ ದಾವಿಸಿದ್ದಾರೆ.
Recommended Video
ಬಡವರ ಕಷ್ಟಕ್ಕೆ ಮಿಡಿದ ಶೈನ್ ತಿಂಗಳ ರೇಷನ್ ಮತ್ತು ಮನೆ ಬಾಡಿಗೆ ಕಟ್ಟಲು ಸಹಾಯ ಮಾಡುತ್ತಿದ್ದಾರೆ. ಇನ್ನು ಲಾಕ್ ಡೌನ್ ಹಿನ್ನಲೆ ಪೊಲೀಸರು ಹಗಲಿರುಳೆನ್ನದೆ ಕಾರ್ಯನಿರ್ವಹಿಸುವ ಜೊತೆಗೆ ಬಡವರ ಕಷ್ಟಕ್ಕು ನೆರವಾಗಿ ಊಟದ ವ್ಯವಸ್ತೆಯನ್ನು ಮಾಡುತ್ತಿದ್ದಾರೆ. ಅಂತಹ ಪೊಲೀಸರಿಗೆ ಶೈನ್ ದಿನಸಿ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಮುಂದೆ ಓದಿ..

ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್
ಲಾಕ್ ಡೌನ್ ಹಿನ್ನಲೆ ಸಾಕಷ್ಟು ಮಂದಿ ಊಟಕ್ಕು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಪೊಲೀಸರು ತಮ್ಮ ಕೆಲಸದ ಜೊತೆಗೆ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಅಂತಹ ಪೊಲೀಸರಿಗೆ ಶೈನ್ ಶೆಟ್ಟಿ ದಿನಸಿ ನೀಡುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲೆ ಅಡುಗೆ ಮಾಡಿ ಬಡವರ ಹೊಟ್ಟೆ ತುಂಬಿಸುತ್ತಿರುವ ಪೊಲೀಸರಿಗೆ ಶೈನ್ ಶೆಟ್ಟಿ ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ.

ಪೊಲೀಸರಿಗೆ ಧನ್ಯವಾದ ತಿಳಿಸಿದ ಶೈನ್
"ಹೋಟೆಗಳು ಬಂದ್ ಆಗಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳೆ ಆಹಾರ ತಯಾರಿಸಿ ಅಗತ್ಯವಿರುವ ಜನರಿಗೆ ನೀಡುತ್ತಿದ್ದಾರೆ. ಜನರಿಗೆ ಸಂಪರ್ಕದಲ್ಲಿರುವರು ಅಂದರೆ ಸದ್ಯ ಪೋಲೀಸರು. ಹಾಗಾಗಿ ಪೊಲೀಸರೆ ಅಡುಗೆ ಮಾಡಿ ಊಟವಿಲ್ಲದ ಜನರಿಗೆ ನೀಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ತುಂಬ ಧನ್ಯವಾದಗಳು" ಎಂದು ಶೈನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದಿನಗೂಲಿ ಕಾರ್ಮಿಕರಿಗೆ ಶೈನ್ ನೆರವು
ಬಡವರ ಹೊಟ್ಟೆ ತುಂಬಿಸುತ್ತಿರುವ ಪೊಲೀಸರಿಗೆ ನೆರವಾಗಿದ್ದಲ್ಲದೆ, ದಿನಗೂಲಿ ಕಾರ್ಮಿಕರ ಕಷ್ಟಕ್ಕು ಸ್ಪಂದಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಇಸ್ತ್ರಿ ಮಾಡುವವರು, ಗಾರೆ ಕೆಲಸ ಮಾಡುವರು ಸೇರಿದಂತೆ ಅನೇಕರ ಕಷ್ಟಕ್ಕೆ ನೆರವಾಗಿದ್ದಾರೆ. ಅವರಿಗೆ ತಿಂಗಳ ರೇಷನ್ ನೀಡುವುದಲ್ಲದೆ, ಅವರ ಮನೆ ಬಾಡಿಗೆ ಕಟ್ಟಲು ಶೈನ್ ಮುಂದಾಗಿದ್ದಾರೆ.
|
'ನಾನು ಕೂಡ ಬೀದಿ ಬದಿ ವ್ಯಾಪಾರಿ'
"ಬೀದಿ ಬದಿಯ ವ್ಯಾಪಾರಿ ನಾನು, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಫುಡ್‍ಟ್ರಕ್ ಇಟ್ಟುಕೊಂಡು ತಿಂಗಳು ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೆ. ನಟನಾಗಬೇಕೆಂದು ಕನಸು ಕಂಡಿದ್ದೆ. ನಡುವೆ ಬಿಗ್ ಬಾಸ್ ಗೆ ಹೋದೆ. ಬಿಗ್ ಬಾಸ್ ಇಲ್ಲದಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು? ಬಾಡಿಗೆ, ಊಟಕ್ಕೆ ಏನು ಮಾಡಬೇಕಿತ್ತು? ಎಷ್ಟು ಕಷ್ಟಗಳು ಎದುರಿಸಬೇಕಾಗಿತ್ತು? ನನ್ನ ಜೊತೆ ಕೆಲಸಗಾರರಿದ್ದಾರೆ, ಅವರಿಗೆ ಸಂಬಳ ಹೇಗೆ ಕೊಡುವುದು, ಅವರನ್ನು ಊರಿಗೆ ಕಳಿಸುವುದಕ್ಕೆ ಆಗಲ್ಲ? ಮುಂತಾದ ಪ್ರಶ್ನೆ ಮೂಡಿದಾಗ ನನಗೊಂದು ಯೋಚನೆ ಬಂತು". ಹಾಗಾಗಿ ಕಷ್ಟದಲ್ಲಿರುವವರಿಗೆ ತಂಡವನ್ನು ಕಟ್ಟಿಕೊಂಡು ಸಹಾಯ ಮಾಡಲು ಮುಂದಾಗಿರುವುದಾಗಿ ಶೈನ್ ಹೇಳಿದ್ದಾರೆ.