For Quick Alerts
  ALLOW NOTIFICATIONS  
  For Daily Alerts

  ವರ್ಷದ ಬಳಿಕ ಶೈನ್ ಶೆಟ್ಟಿಗೆ ಸಿಕ್ತು 'ಬಿಗ್ ಬಾಸ್-7'ನಿಂದ ಗೆದ್ದ ಕಾರು

  |

  ಬಿಗ್ ಬಾಸ್ ಕನ್ನಡ ಸೀಸನ್ 7 ಮುಗಿದು ಒಂದು ವರ್ಷ ಕಳೆದಿದೆ. ಬಿಗ್ ಬಾಸ್-7 ವಿನ್ನರ್ ಆಗಿ ನಟ ಶೈನ್ ಶೆಟ್ಟಿ ಹೊರಹೊಮ್ಮಿದ್ದರು. ಬಿಗ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

  Recommended Video

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada

  ಶೈನ್ ಶೆಟ್ಟಿ ಬಿಗ್ ಬಾಸ್-7 ವಿನ್ನರ್ ಪಟ್ಟದ ಜೊತೆಗೆ ಲಕ್ಷ ಲಕ್ಷ ಬಹುಮಾನವನ್ನು ಪಡೆದಿದ್ದರು. ಕಳೆದೆಲ್ಲ ಸೀಸನ್ ಗಿಂತ ಬಿಗ್ ಬಾಸ್-7 ವಿನ್ನರ್ ಗೆ ಭರ್ಜರಿ ಗಿಫ್ಟ್ ಸಿಕ್ಕಿತ್ತು. ಹೌದು, ಬಿಗ್ ಬಾಸ್ ವಿನ್ನರ್ ಗೆ ಸಿಗುವ 50 ಲಕ್ಷ ಹಣದ ಜೊತೆಗೆ ಇನ್ನು ಹೆಚ್ಚಿನ ಹಣ ಪಡೆದುಕೊಂಡಿದ್ದರು. ಜೊತೆಗೆ ಒಂದು ಕಾರನ್ನು ಗಿಫ್ಟಾಗಿ ಪಡೆದಿದ್ದರು. ಆದರೆ ಶೈನ್ ಶೆಟ್ಟಿ ಗೆದ್ದ ಕಾರು ಇನ್ನೂ ಶೈನ್ ಮನೆ ತಲುಪಿರಲಿಲ್ಲ.

  ಶೈನ್ ಶೆಟ್ಟಿ- ಗಾಯಕಿ ಸಂಗೀತಾ ಕೊನೆಗೂ ಸರ್ಪ್ರೈಸ್ ಕೊಟ್ಟೆ ಬಿಟ್ಟರು!ಶೈನ್ ಶೆಟ್ಟಿ- ಗಾಯಕಿ ಸಂಗೀತಾ ಕೊನೆಗೂ ಸರ್ಪ್ರೈಸ್ ಕೊಟ್ಟೆ ಬಿಟ್ಟರು!

  ಇದೀಗ ವರ್ಷದ ಬಳಿಕ ಬಿಗ್ ಬಾಸ್ ಗಿಫ್ಟ್ ಕಾರು ಶೈನ್ ಶೆಟ್ಟಿ ಮನೆಸೇರಿದೆ. ಟಾಟಾ ಆಲ್ಟ್ರೋಜ್ ಕಾರನ್ನು ಶೈನ್ ಬಹುಮಾನವಾಗಿ ಪಡೆದಿದ್ದಾರೆ. ಕಾರು ಮನೆಸೇರಿದ ಸಂತಸವನ್ನು ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  Shine Shetty receives the car which he had won in Bigg Boss kannada season-7

  ತಾಯಿಯ ಜೊತೆ ಹೋಗಿ ಗಿಫ್ಟ್ ಕಾರನ್ನು ಪಡೆದಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, 'ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ' ಎಂದು ಹೇಳಿದ್ದಾರೆ.

  English summary
  Actor Shine Shetty receives the car which he had won in Bigg Boss kannada season-7.
  Thursday, November 5, 2020, 9:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X