»   » ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ತಮಿಳು ನಟ ವಿಶಾಲ್

ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ತಮಿಳು ನಟ ವಿಶಾಲ್

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ತಮಿಳಿನ ಖ್ಯಾತ ನಟ ವಿಶಾಲ್ ಒಂದೇ ವೇದಿಕೆಯನ್ನ ಹಂಚಿಕೊಳ್ಳಲಿದ್ದಾರೆ. ಇದಕ್ಕೆ ಕಾರಣ 'ರಾಜಾಹುಲಿ' ಹರ್ಷ ಅಭಿನಯದ ಕನ್ನಡ ಚಿತ್ರ 'ರಘುವೀರ'.

ಹೌದು, 'ರಘುವೀರ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇಂದು (ಜೂನ್ 28) ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿದ್ದು, ಶಿವರಾಜ್ ಕುಮಾರ್ ಮತ್ತು ವಿಶಾಲ್ ಅತಿಥಿಗಳಾಗಿ ಆಗಮಿಸಿಲಿದ್ದಾರೆ. ಸಂಜೆ 5.30ಕ್ಕೆ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ಇಬ್ಬರು ಸೂಪರ್ ಸ್ಟಾರ್ ನಟರು 'ರಘುವೀರ' ಚಿತ್ರದ ಹಾಡುಗಳನ್ನ ರಿಲೀಸ್ ಮಾಡಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಮೇಯರ್ ಪದ್ಮಾವತಿ ಅವರು ಕೂಡ ಭಾಗವಹಿಸಿಲಿದ್ದಾರೆ.

Shiva Rajakumar and Vishal To Be Releasing Raghuveera Songs

ಅಂದ್ಹಾಗೆ, 'ರಘುವೀರ' ನೈಜಕಥೆಯಾಧರಿತ ಚಿತ್ರವಾಗಿದ್ದು, ಹರ್ಷ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹರ್ಷನ ಜೊತೆಯಲ್ಲಿ ಧೇನು ಅಚ್ಚಪ್ಪ ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ವಿಶೇಷ ಅಂದ್ರೆ, ನಾಯಕಿ ನಟಿ ಧೇನು ಅಚ್ಚಪ್ಪ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.

ಇನ್ನು ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ಸೂರ್ಯ ಸತೀಶ್ ನಿರ್ದೇಶನ ಮಾಡಿದ್ದಾರೆ. ಲಯಕೋಕಿಲಾ ಅವರು ಸಂಗೀತ ಒದಗಿಸಿದ್ದಾರೆ.

English summary
Hatric Hero Shiva Rajakumar and Tamil actor Vishal To be Releasing Audio of Kannada Movie 'Raghuveera' at Town Hall on Today (June 28th). The Movie Features Harsha, Dhenu Achappa and Directed by Surya Sathish.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada