»   » ಶಿವಣ್ಣ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ

ಶಿವಣ್ಣ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ

Posted By: Naveen
Subscribe to Filmibeat Kannada

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಜೀವನದಲ್ಲಿ ಇಂದು(ಮೇ 19) ತುಂಬ ಪ್ರಮುಖವಾದ ದಿನ. ಶಿವಣ್ಣ ಬದುಕಿನ ಅನೇಕ ಮುಖ್ಯ ಘಟನೆಗಳು ನೆಡೆದಿರುವುದು ಇದೇ ದಿನ. ಅದರಲ್ಲಿ ಬಹು ಮುಖ್ಯವಾದದ್ದು ಶಿವಣ್ಣನ ವಿವಾಹ. ಇಂದು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ.

ಸ್ಯಾಂಡಲ್ ವುಡ್ ಯುವರಾಜನ ಮದುವೆಯಾಗಿ ಇಂದಿಗೆ ಸರಿಯಾಗಿ 31 ವರ್ಷಗಳಾಗಿದೆ. ಪ್ರತಿ ವರ್ಷ ಶಿವಣ್ಣ ಅಭಿಮಾನಿಗಳು ಈ ವಿಶೇಷ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದ್ದರು. ಆದರೆ, ಈ ವರ್ಷ ಪಾರ್ವತಮ್ಮ ರಾಜ್ ಕುಮಾರ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಲ್ಲ.

ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ವಿವಾಹ ವಾರ್ಷಿಕೋತ್ಸವದ ಈ ವಿಶೇಷ ಸಂಧರ್ಭದಲ್ಲಿ ಶಿವಣ್ಣ ಮದುವೆಯ ಬಗೆಗಿನ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಮುಂದಿದೆ ಓದಿ...

ಪಕ್ಕಾ ಅರೆಂಜ್ ಮ್ಯಾರೆಜ್

ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮದುವೆ ಪಕ್ಕಾ ಅರೆಂಜ್ ಮ್ಯಾರೆಜ್ ಅಂತೆ. ಮೊದಲು ಇಬ್ಬರ ಮನೆಗಳಲ್ಲಿ ಮಾತುಕತೆ ಮಾಡಿದ ಬಳಿಕ ಶಿವಣ್ಣನಿಗೆ ಹುಡುಗಿ ನೋಡಿರುವ ವಿಷಯವನ್ನು ತಿಳಿಸಿದರಂತೆ.

24 ವರ್ಷಕ್ಕೆ ಮದುವೆ

ಶಿವಣ್ಣ ಮದುವೆಯಾಗಿದ್ದು ಅವರ 24 ವರ್ಷಕ್ಕೆ. ಮದುವೆ ಆಗುವ ಸಮಯದಲ್ಲಿ ಆಗ ತಾನೆ ಮೊದಲ ಸಿನಿಮಾ 'ಆನಂದ್' ಬಂದಿತ್ತು. ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕಿಂಗ್ ಎಂಟ್ರಿ ಕೊಟ್ಟಿದ್ದರು.

ಬಂಗಾರಪ್ಪ ಇಷ್ಟ ಪಟ್ಟಿದ್ದರು

ಡಾ.ರಾಜ್ ಕುಮಾರ್ ಕುಟುಂಬದ ಮೇಲೆ ಬಂಗಾರಪ್ಪ ಅವರಿಗೆ ಪ್ರೀತಿ ಇತ್ತು. ಅಲ್ಲದೆ ರಾಜ್ ಕುಮಾರ್ ಅಂದ್ರೆ ಅಷ್ಟೆ ಅಪಾರ ಗೌರವ. ಅವರೇ ಮೊದಲು ತಮ್ಮ ಮಗಳನ್ನ 'ನಿಮ್ಮ ಮನೆ ಸೊಸೆ ಮಾಡುವ ಆಸೆ ಇದೆ' ಅಂತ ಡಾ.ರಾಜ್ ಬಳಿ ಹೇಳಿಕೊಂಡಿದ್ದರಂತೆ.

ರಾಜ್ ಕೂಡ ಖುಷಿ ಪಟ್ಟರು

ಬಂಗಾರಪ್ಪ ಅವರ ಮಾತನ್ನ ಕೇಳಿ ರಾಜ್ ಕುಮಾರ್ ಅವರಿಗೂ ಖುಷಿಯಾಗಿ ಅದನ್ನ ಕುಟುಂಬದ ಜೊತೆ ಚರ್ಚೆ ಮಾಡಿದರು. ಮನೆಯವರೆಲ್ಲರಿಗೂ ಈ ಸಂಬಂಧ ಇಷ್ಟ ಆಗಿ ಶಿವಣ್ಣ ಮದುವೆಗೆ ಮುಹೂರ್ತ ಫಿಕ್ಸ್ ಆಯಿತು.

ಯುವರಾಜನ ಮದುವೆ

ಶಿವಣ್ಣನ ಮದುವೆ ಯುವರಾಜನ ಮದುವೆಯ ರೀತಿಯೇ ಆಯಿತು. ಮದುವೆಯ ದಿನ ಅರಮನೆ ಮೈದಾನದ ತುಂಬ ಅಭಿಮಾನಿ ಸಾಗರವೇ ಹರಿದು ಬಂದಿತ್ತು. ಭಾರತ ಚಿತ್ರರಂಗದ ಅನೇಕ ಗಣ್ಯರು ಮದುವೆಗೆ ಆಗಮಿಸಿದ್ದರು.

ಅಣ್ಣಾವ್ರಿಗೆನೇ ಊಟ ಸಿಗಲಿಲ್ಲ

ಶಿವಣ್ಣನ ಮದುವೆಯಲ್ಲಿ ಯಾವ ಮಟ್ಟಿನ ಜನ ಇದ್ದರು ಅಂದರೆ ಸ್ವತಃ ರಾಜ್ ಕುಮಾರ್ ಅವರಿಗೆ ಊಟ ಸಿಗಲಿಲ್ಲವಂತೆ. ಮಗನ ಮದುವೆಗೆ ಬಂದಿರುವ ಅಷ್ಟೊಂದು ಜನರನ್ನ ನೋಡಿ ರಾಜ್ ಪಟ್ಟ ಖುಷಿ ಅಷ್ಟಿಷ್ಟಲ್ಲ.

ಅಪ್ಪ 'ಐ ಲವ್ ಯೂ ಪಾ'

ಶಿವಣ್ಣ ಮತ್ತು ಗೀತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಇಬ್ಬರಿಗೂ ಅಪ್ಪನನ್ನ ಕಂಡರೆ ಪ್ರೀತಿ ಜಾಸ್ತಿ. ಅಂದಹಾಗೆ, ಕಳೆದ ವರ್ಷ ಹಿರಿಯ ಮಗಳು ನಿವೇದಿತಾ ಮದುವೆಯನ್ನ ಅದ್ದೂರಿಯಾಗಿ ಶಿವಣ್ಣ ಮಾಡಿದರು.

ಬೆಸ್ಟ್ ಗಂಡ, ದಿ ಬೆಸ್ಟ್ ಅಪ್ಪ

ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಬಿಜಿ ಇರುವ ನಟ. ಆದರು ಸಹ ಅವರು ಫ್ಯಾಮಿಲಿಗೆ ಟೈಂ ಕೊಡುತ್ತಾರೆ. ತಮ್ಮ ಹೆಂಡತಿ ಮಕ್ಕಳ ಜೊತೆಗಿನ ಅಮೂಲ್ಯ ಸಮಯವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.

English summary
Actor 'Shiva Rajkumar and Geetha Shiva Rajkumar' 31th wedding anniversary

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada