»   » ಸಂತೋಷ್ ಚಿತ್ರಮಂದಿರದಲ್ಲಿ ಶಿವಣ್ಣ-ಧ್ರುವ ಭೇಟಿ ಆದ್ಮೇಲೆ ಏನಾಯ್ತು?

ಸಂತೋಷ್ ಚಿತ್ರಮಂದಿರದಲ್ಲಿ ಶಿವಣ್ಣ-ಧ್ರುವ ಭೇಟಿ ಆದ್ಮೇಲೆ ಏನಾಯ್ತು?

Posted By:
Subscribe to Filmibeat Kannada
ಶಿವಣ್ಣನನ್ನ ಸಂತೋಷ್ ಥಿಯೇಟರ್ ನಲ್ಲಿ ಅಚಾನಕ್ಕಾಗಿ ಭೇಟಿ ಮಾಡಿದ ಧ್ರುವ ಸರ್ಜಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ಶ್ರೀಮುರಳಿ ಅಭಿನಯದ 'ಮಫ್ತಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಮಫ್ತಿ' ಚಿತ್ರ ಪ್ರದರ್ಶನವಾಗುತ್ತಿರುವ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದರು. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಕೂತು ಸಿನಿಮಾ ನೋಡಿದರು. ಈ ವೇಳೆ ನಟ ಧ್ರುವ ಸರ್ಜಾ ಆಗಮಿಸಿ ಸರ್ಪ್ರೈಸ್ ಕೊಟ್ಟರು.

ಶಿವಣ್ಣ ಮತ್ತು ಧ್ರುವ ಒಟ್ಟಿಗೆ ಕಾಣಿಸಿಕೊಂಡಿದ್ದು ಮಾತ್ರ ಗಾಂಧಿನಗರದಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಹಾಗಿದ್ರೆ, ಶಿವಣ್ಣನ ಬಗ್ಗೆ ಧ್ರುವ ಏನಂದ್ರು? 'ಭರ್ಜರಿ' ಹುಡುಗನ ಬಗ್ಗೆ ಸೆಂಚುರಿ ಸ್ಟಾರ್ ಏನಂದ್ರು ಅಂತ ಮುಂದೆ ಓದಿ.......

'ಹ್ಯಾಟ್ರಿಕ್ ಹೀರೋ' ಫೈಟ್ ನೆನಪಿದ್ಯಾ?

ಈ ಹಿಂದೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಯಶಸ್ಸು ಕಂಡ ನಂತರ ಅವರ ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಎಂದು ಕರೆದರು. ಇದು ಶಿವಣ್ಣನ ಅಭಿಮಾನಿಗಳನ್ನ ಸಹಜವಾಗಿ ಕೆರಳಿಸಿತ್ತು. ನಂತರ 'ಹ್ಯಾಟ್ರಿಕ್ ಹೀರೋ' ಎಂಬುದು ಶಿವಣ್ಣ ಮಾತ್ರ ಎಂದು ಧ್ರುವ ಹೇಳಿ ಸೆಂಚುರಿ ಸ್ಟಾರ್ ಅಭಿಮಾನಿಗಳ ಮನಗೆದ್ದಿದರು.

ಅಭಿಮಾನಿಗಳು ಮಾತ್ರ ಹಾಗೆ, ನಾವಲ್ಲ

''ಅಭಿಮಾನಿಗಳಲ್ಲಿ ಸ್ವಲ್ಪ ಅದು, ಇದು ಅಂತ ಇರುತ್ತೆ. ಆದ್ರೆ, ನಮ್ಮಲ್ಲಿ ಹಾಗೆ ಇಲ್ಲ. ಕನ್ನಡಕ್ಕೆ ಹೊಸ ಹೊಸ ಹೀರೋಗಳು ಬರ್ತಿರುವುದು ಖುಷಿ ಕೊಡುತ್ತೆ. ಧ್ರುವ ಅವರ ಮೊದಲನೇ ಸಿನಿಮಾ, ಎರಡನೇ ಸಿನಿಮಾ ಕೂಡ ನೋಡಿದ್ದೀನಿ. ಅಪ್ಪು ಹೇಗೋ ಧ್ರುವನೂ ನನಗೆ ಹಾಗೆ'' ಎಂದು ಶಿವಣ್ಣ ಮೆಚ್ಚಿಕೊಂಡರು.

ಅದೇ ಅಭಿಮಾನ ಮುಂದುವರೆಸಿದ ಧ್ರುವ

''ನಾನು ಶಿವಣ್ಣನ ಅಭಿಮಾನಿ. ಹ್ಯಾಟ್ರಿಕ್ ಹೀರೋ ಎನ್ನುವುದು ಕರ್ನಾಟಕಕ್ಕೆ ಒಬ್ಬರೇ ಅದು ಶಿವರಾಜ್ ಕುಮಾರ್ ಮಾತ್ರ. ಯಾರೂ ಏನಂದ್ರು ತಲೆಕೆಡಿಸಿಕೊಳ್ಳಬೇಕಿಲ್ಲ.'' ಎಂದು ನಟ ಧ್ರುವ ಮತ್ತೆ ಅದೇ ಅಭಿಮಾನವನ್ನ ವ್ಯಕ್ತಪಡಿಸಿದರು.

100ನೇ ದಿನದತ್ತ 'ಭರ್ಜರಿ'

ಸಂತೋಷ್ ಚಿತ್ರಮಂದಿರದಲ್ಲಿ 'ಮಫ್ತಿ' ಸಿನಿಮಾ ಬಿಡುಗಡೆಯಾಗಿದ್ರೆ, ನರ್ತಕಿ ಚಿತ್ರಮಂದಿರದಲ್ಲಿ 'ಭರ್ಜರಿ' ಸಿನಿಮಾ 75 ದಿನಗಳನ್ನ ಪೂರೈಸಿ, ಶತದಿನದತ್ತ ಮುನ್ನುಗ್ಗುತ್ತಿದೆ.

English summary
Hatrick Hero Shivarajkumar and Action Prince Dhruva Sarja Visit to Sathosh Theater on Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada