»   » 'ದಿ ವಿಲನ್' ನಲ್ಲಿ ಶಿವಣ್ಣ ಮತ್ತು ಸುದೀಪ್ ಲುಕ್ ಹೇಗಿರಲಿದೆ ಗೊತ್ತಾ?

'ದಿ ವಿಲನ್' ನಲ್ಲಿ ಶಿವಣ್ಣ ಮತ್ತು ಸುದೀಪ್ ಲುಕ್ ಹೇಗಿರಲಿದೆ ಗೊತ್ತಾ?

Posted By:
Subscribe to Filmibeat Kannada

'ಜೋಗಿ' ಪ್ರೇಮ್ ತಮ್ಮ 'ದಿ ವಿಲನ್' ಚಿತ್ರಕ್ಕಾಗಿ ಸುದೀಪ್ ಗಾಗಿ ಹೊಸ ಹೇರ್ ಸ್ಟೈಲ್ ಮಾಡಿಸಿ, ಶಿವಣ್ಣ ಅವರಿಗೆ ಡಿಫರೆಂಟ್ ಲುಕ್ ಕೊಟ್ಟು ಫೋಟೋಶೂಟ್ ಮಾಡಿಸಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆ ಆಗಲಿದೆ. ಆದರೆ ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬ ಪ್ರಶ್ನೆ ಸಿನಿ ಪ್ರೇಮಿಗಳಲ್ಲಿ ಹಲವು ದಿನಗಳಿಂದ ಕಾಡುತ್ತಲೇ ಇತ್ತು. ಆದರೆ ಈಗ ಫಸ್ಟ್ ಲುಕ್ ಬಿಡುಗಡೆಗೂ ಮುನ್ನ ಅವರ ಲುಕ್ ಮತ್ತು ಚಿತ್ರದ ಫಸ್ಟ್ ಲುಕ್ ವಿಶೇಷತೆಗಳು ರಿವೀಲ್ ಆಗಿವೆ.[ಇದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ ಸಾಕು.!]

ಹೌದು, 'ದಿ ವಿಲನ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅವರ ಲುಕ್ ಹೇಗಿರಲಿದೆ ಮತ್ತು ಫಸ್ಟ್ ಲುಕ್ ಕುರಿತ ಕುತೂಹಲಕಾರಿ ಮಾಹಿತಿ ಬಹಿರಂಗ ಗೊಂಡಿದೆ. ಈ ವಿಶೇಷ ಮಾಹಿತಿ ತಿಳಿಯೋ ಕ್ಯೂರಿಯಾಸಿಟಿ ನಿಮಗೂ ಇದ್ರೆ ಇಲ್ಲಿ ನೋಡಿ..

ಈ ರೀತಿ ನೀವು ನೋಡಿರಲು ಸಾಧ್ಯವೇ ಇಲ್ಲ...

ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರನ್ನು 'ಜೋಗಿ' ಪ್ರೇಮ್ ಯಾರು ಸಹ ಇದುವರೆಗೂ ನೋಡಿರಲು ಸಾಧ್ಯವೇ ಇಲ್ಲದಂತ ಲುಕ್ ನಲ್ಲಿ ತೋರಿಸುತ್ತಿದ್ದಾರಂತೆ. ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಆದ್ದರಿಂದ ಪ್ರೇಮ್ ಸ್ವತಃ ತಾವು ಡಿಸೈನ್ ಕಾನ್ಸೆಪ್ಟ್ ಗಳಲ್ಲಿ ತೊಡಗಿಕೊಂಡು ಇಬ್ಬರ ಫಸ್ಟ್ ಲುಕ್ ರೆಡಿ ಮಾಡಿದ್ದಾರಂತೆ.

ಶಿವರಾಜ್ ಕುಮಾರ್ ಫಸ್ಟ್ ಲುಕ್

ಅಂದಹಾಗೆ ಶಿವರಾಜ್ ಕುಮಾರ್ ಅವರ 'ದಿ ವಿಲನ್' ಲುಕ್ ಅನ್ನು ಪ್ರೇಮ್ ಅವರೇ ಡಿಸೈನ್ ಮಾಡಿದ್ದು, ಮುಂಬೈ ನಿಂದ ವಿಶೇಷ ವಿಗ್ ತರಿಸಿ ಹಾಕಿಸಿದ್ದಾರಂತೆ. ಈ ವಿಗ್ ಅನ್ನು ಅಲೆಕ್ಸ್ ಮತ್ತು ರಾಜ್ ಎಂಬುವವರು ತಯಾರಿಸಿದ್ದಾರಂತೆ.

ಮೂರು ಗೆಟಪ್ ಗಳಲ್ಲಿ ಸುದೀಪ್

'ದಿ ವಿಲನ್' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಮೂರು ವಿಶೇಷ ಗೆಟಪ್ ಗಳನ್ನು ತೊಡಲಿದ್ದಾರಂತೆ. ಇವರ ಹೇರ್ ಸ್ಟೈಲ್ ಅನ್ನು ಅಲೆಕ್ಸ್ ಎಂಬುವವರೇ ವಿನ್ಯಾಸಗೊಳಿಸಿದ್ದಾರಂತೆ. ಈ ಹೇರ್ ಸ್ಟೈಲ್ ನಿಂದ ಅವರು ಮುಕ್ತಿ ಪಡೆಯಲು ಮಿನಿಮಮ್ 8 ತಿಂಗಳು ಕಾಲಾವಕಾಶ ಬೇಕಂತೆ.

ಯಂಗ್ ಅಂಡ್ ಯಂಗ್

ಸುದೀಪ್ ಮತ್ತು ಶಿವಣ್ಣ ಇಬ್ಬರಲ್ಲಿ 'ದಿ ವಿಲನ್' ಚಿತ್ರದಲ್ಲಿ ಯಾರು ವಿಲನ್ ಆಗುತ್ತಾರೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಇಬ್ಬರು ಸಹ ಯಂಗ್ ಅಂಡ್ ಯಂಗ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

ಕಣ್ಣು ಕುಕ್ಕುವ ಕಾಸ್ಟ್ಯೂಮ್

'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಕಾಣಿಸಿಕೊಳ್ಳಲಿರುವ ಎಲ್ಲಾ ಕಾಸ್ಟ್ಯೂಮ್ ಗಳು ಸಿನಿ ಪ್ರಿಯರ ಕಣ್ಣು ಕುಕ್ಕುವಂತಿರಲಿವೆಯಂತೆ. ಶಿವರಾಜ್ ಕುಮಾರ್ ಗೆ ಸಾನಿಯಾ ಸರ್ದಾರಿಯಾ ಎಂಬುವವರು ಮತ್ತು ಸುದೀಪ್ ಗೆ ಅರ್ಚನಾ ಎಂಬುವವರು ವಸ್ತ್ರ ವಿನ್ಯಾಸ ಸಿದ್ಧಪಡಿಸುತ್ತಿದ್ದಾರಂತೆ.

ಹಾಲಿವುಡ್ ರೇಂಜ್ ನಲ್ಲಿ ಪೋಸ್ಟರ್

ಅಂದಹಾಗೆ ಪ್ರೇಮ್ ರೆಡಿ ಮಾಡಿರುವ 'ದಿ ವಿಲನ್' ಚಿತ್ರದ ಪೋಸ್ಟರ್ ಹಾಲಿವುಡ್ ರೇಂಜ್ ನಲ್ಲಿ ಇದ್ದು, ಇಬ್ಬರು ಸ್ಟಾರ್ ಅಭಿಮಾನಿಗಳ ಕ್ರೇಜ್ ಹೆಚ್ಚಿಸಲಿದೆ.

English summary
Kannada Actor Shiva Rajkumar and Sudeep starrer 'The Villain' first look to release today (April 1st). Here is First look specialities of Shiva Rajkumar and Sudeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada