»   » 'ಟಗರು' ಚಿತ್ರದ ಪ್ರದರ್ಶನ ವೇಳೆ 'ಡಮ್ಮಿ ಲಾಂಗ್' ಪ್ರದರ್ಶಿಸಿದ ಅಭಿಮಾನಿ.!

'ಟಗರು' ಚಿತ್ರದ ಪ್ರದರ್ಶನ ವೇಳೆ 'ಡಮ್ಮಿ ಲಾಂಗ್' ಪ್ರದರ್ಶಿಸಿದ ಅಭಿಮಾನಿ.!

Posted By:
Subscribe to Filmibeat Kannada

ತಮ್ಮ ಕೈಯಲ್ಲಿ ರೋಸ್ ಹಿಡಿದಿದ್ದಕ್ಕಿಂತ ಶಿವಣ್ಣ ಲಾಂಗ್ ಹಿಡಿದು ರುಂಡಗಳನ್ನ ಚೆಂಡಾಡಿದ್ದೇ ಹೆಚ್ಚು. ಲಾಂಗ್ ಹಿಡಿಯೋದ್ರಲ್ಲಿ ಶಿವಣ್ಣನನ್ನ ಮೀರಿಸುವವರು ಯಾರೂ ಇಲ್ಲ. ಸಿನಿಮಾದಲ್ಲಿ ಶಿವಣ್ಣ ಲಾಂಗ್ ಹಿಡಿದಿದ್ದಾರೆ ಅಂದ್ರೆ, 'ಶಿವ'ಭಕ್ತರಿಗೆ ಅದೇ ಖುಷಿ.

'ಟಗರು' ಸಿನಿಮಾ ಬಹು ನಿರೀಕ್ಷೆ ಹುಟ್ಟಿಸುವುದಕ್ಕೆ 'ಲಾಂಗ್' ಕೂಡ ಪ್ರಮುಖ ಕಾರಣವೇ. 'ಟಗರು' ಚಿತ್ರದಲ್ಲಿ ಶಿವಣ್ಣ ಪೊಲೀಸ್ ಆಫೀಸರ್ ಆಗಿದ್ದರೂ, ಲಾಂಗ್ ಹಿಡಿದಿದ್ದಾರೆ. ಶಿವಣ್ಣನ ಲಾಂಗ್ ಸ್ಟೈಲ್ ನೋಡೋಕೆ ಅಂತಲೇ, ಅಭಿಮಾನಿಗಳು ಥಿಯೇಟರ್ ಗೆ ಮುಗಿಬೀಳ್ತಿದ್ದಾರೆ.


ಶಿವಣ್ಣನನ್ನ ಕಣ್ತುಂಬಿಕೊಳ್ಳೋಕೆ ಥಿಯೇಟರ್ ಒಳಗೆ ಹೋದರೆ ಪರ್ವಾಗಿಲ್ಲ. ಆದ್ರೆ, ಇಲ್ಲೊಬ್ಬ ಅಭಿಮಾನಿ ಲಾಂಗ್ ಹಿಡಿದು ಥಿಯೇಟರ್ ಒಳಗೆ ನುಗಿದ್ದಾನೆ. ಅದು 'ಡಮ್ಮಿ' ಲಾಂಗ್ ಅನ್ನೋದು ಸಮಾಧಾನಕರ ಸಂಗತಿ.


Shiva Rajkumar fan gets long to watch 'Tagaru' in Santhosh Theatre

ಟಗರು ವಿಮರ್ಶೆ : ಸೂರಿಯ 'ಸುಕ್ಕ' ಕುಡಿದ ಟಗರು ತುಂಬಾ ಪೊಗರು!


ನಿನ್ನೆ ರಾಜ್ಯಾದ್ಯಂತ 'ಟಗರು' ಸಿನಿಮಾ ಬಿಡುಗಡೆ ಆಯ್ತು. 'ಟಗರು' ಚಿತ್ರವನ್ನ ನೋಡೋಕೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಯೊಬ್ಬರು ಲಾಂಗ್ ಹಿಡಿದು ಬಂದಿದ್ದರು.


ಅಭಿಮಾನಿಯ ಕೈಯಲ್ಲಿ ಲಾಂಗ್ ನೋಡಿ, ಗಾಬರಿಗೊಂಡಿದ್ದ ಅಕ್ಕ-ಪಕ್ಕದವರು ಅದು ಡಮ್ಮಿ ಲಾಂಗ್ ಅಂತ ಗೊತ್ತಾದ್ಮೇಲೆ ನಿಟ್ಟುಸಿರು ಬಿಟ್ಟರು.


''ಇಡೀ ಇಂಡಿಯಾದಲ್ಲಿ ಶಿವಣ್ಣ ತರಹ ಲಾಂಗ್ ಹಿಡಿಯೋಕೆ ಯಾರ ಕೈಯಿಂದಲೂ ಸಾಧ್ಯ ಇಲ್ಲ. ಈ ಬಾರಿ ಒಂದೇ ಬೆರಳಲ್ಲಿ ಲಾಂಗ್ ಹಿಡಿದಿದ್ದಾರೆ'' ಅಂತ ಹೇಳ್ತಾ ಆ ಅಭಿಮಾನಿ ಶಿವಣ್ಣನಿಗೆ ಜೈಕಾರ ಕೂಗುತ್ತಿದ್ದರು.


ಲಾಂಗ್ ಹಿಡಿದು ಇಡೀ ಸಿನಿಮಾ ವೀಕ್ಷಿಸಿದ ಆ ಅಭಿಮಾನಿಗೆ 'ಟಗರು' ಸಿಕ್ಕಾಪಟ್ಟೆ ಇಷ್ಟವಾಗ್ಬಿಟ್ಟಿದೆ. ಎಷ್ಟೇ ಆಗಲಿ, 'ಟಗರು'ದಲ್ಲಿ ಮಚ್ಚು, ಕೊಚ್ಚು ಜಾಸ್ತಿ ಅಲ್ವೇ.!

English summary
Kannada Actor Shiva Rajkumar fan gets long to watch 'Tagaru' in Santhosh Theatre.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada