For Quick Alerts
  ALLOW NOTIFICATIONS  
  For Daily Alerts

  ರೊಚ್ಚಿಗೆದ್ದ ಶಿವಣ್ಣನ ಅಭಿಮಾನಿಗಳು: 'ಜೋಗಿ' ಪ್ರೇಮ್ ಗೆ ಮಾರಿಹಬ್ಬ ಶುರು!

  By Harshitha
  |
  TheVillain :ದಿ ವಿಲನ್ ಸಿನಿಮಾ ನೋಡಲ್ಲ ಅಂತ ಪಟ್ಟು ಹಿಡಿದು ಕೂತ ಶಿವಣ್ಣನ ಅಭಿಮಾನಿಗಳು..!!

  ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಂಡಲ್ ವುಡ್ ಇದೀಗ ಮತ್ತೆ ಗದ್ದಲದ ಗೂಡಾಗುವ ಸಾಧ್ಯತೆ ಇದೆ. ಗಾಂಧಿನಗರದಲ್ಲಿ ಅಭಿಮಾನಿಗಳ ಯುದ್ಧ ನಡೆಯುವ ಮುನ್ಸೂಚನೆ ಸಿಕ್ಕಿದೆ. ಯಾಕಂದ್ರೆ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

  ನಿರ್ದೇಶಕ ಪ್ರೇಮ್ ವಿರುದ್ಧ ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಇಷ್ಟು ದಿನ ತಣ್ಣಗೆ ಇದ್ದ ಸೆಂಚುರಿ ಸ್ಟಾರ್ ಫ್ಯಾನ್ಸ್ 'ದಿ ವಿಲನ್' ಸಿನಿಮಾದ ಟೀಸರ್ ರಿಲೀಸ್ ಆದ್ಮೇಲೆ ಕೋಪಿಸಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣನ ಅಭಿಮಾನಿಗಳು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. #BoycottTheVillain ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿರುವ ಶಿವಣ್ಣನ ಫ್ಯಾನ್ಸ್ 'ದಿ ವಿಲನ್' ಸಿನಿಮಾ ನೋಡದೇ ಇರಲು ನಿರ್ಧರಿಸಿದ್ದಾರೆ. ಬೇಕಾದ್ರೆ, ಕೆಲ ಟ್ವೀಟ್ ಗಳನ್ನ ನೀವೇ ನೋಡಿರಿ...

  ನಾಲ್ಕನೇ ಸ್ಥಾನ ಕೊಟ್ಟಿದ್ದಕ್ಕೆ ಕೋಪ

  ನಾಲ್ಕನೇ ಸ್ಥಾನ ಕೊಟ್ಟಿದ್ದಕ್ಕೆ ಕೋಪ

  'ದಿ ವಿಲನ್' ಚಿತ್ರದ ಟೀಸರ್ ಹಾಗೂ ಕಾಲರ್ ಟ್ಯೂನ್ ಗಳ ಬಗ್ಗೆ ಆನಂದ್ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿತ್ತು. ಆ ಪೋಸ್ಟ್ ನಲ್ಲಿ ಕಿಚ್ಚ ಸುದೀಪ್ ಹ್ಯಾಶ್ ಟ್ಯಾಗ್ ಗೆ ಮೊದಲ ಸ್ಥಾನ ಕೊಟ್ಟು, ಶಿವರಾಜ್ ಕುಮಾರ್ ಹ್ಯಾಶ್ ಟ್ಯಾಗ್ ಗೆ ನಾಲ್ಕನೇ ಸ್ಥಾನ ನೀಡಿತ್ತು. ಇದು ಶಿವ'ಭಕ್ತ'ರ ಕೆಂಗಣ್ಣಿಗೆ ಕಾರಣವಾಗಿದೆ.

  'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?

  'ಅನ್ ಫಾಲೋ' ಅಭಿಯಾನ ಶುರು

  'ಅನ್ ಫಾಲೋ' ಅಭಿಯಾನ ಶುರು

  ಶಿವಣ್ಣನಿಗೆ ಗೌರವ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆನಂದ್ ಆಡಿಯೋ ಪೇಜ್ ನ ಅನ್ ಫಾಲೋ ಮಾಡಲು 'ಶಿವ ಸೈನ್ಯ' ತೀರ್ಮಾನಿಸಿದೆ.

  ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್

  ಶಿವಣ್ಣನಿಗೆ ಗೌರವ ಕೊಡದ ಜಾಗದಲ್ಲಿ...

  ಶಿವಣ್ಣನಿಗೆ ಗೌರವ ಕೊಡದ ಜಾಗದಲ್ಲಿ...

  ''ಎಲ್ಲಿ ನಮ್ಮ ಬಾಸ್ ಡಾ.ಶಿವಣ್ಣಗೆ ಮರ್ಯಾದೆ ಇರುವುದಿಲ್ವೋ, ಅಲ್ಲಿ ನಮ್ಮಂತಹ ಅಭಿಮಾನಿಗಳ ಸ್ಲಿಪ್ಪರ್ ಕೂಡ ಇರಲ್ಲ'' ಎಂದು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

  ಶಿವಣ್ಣನ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆದ್ರಾ ರಿಷಬ್ ಶೆಟ್ಟಿ ?ಶಿವಣ್ಣನ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆದ್ರಾ ರಿಷಬ್ ಶೆಟ್ಟಿ ?

  ಟ್ರೆಂಡಿಂಗ್ ಆಗಿದೆ #BoycottTheVillain ಹ್ಯಾಶ್ ಟ್ಯಾಗ್

  ಟ್ರೆಂಡಿಂಗ್ ಆಗಿದೆ #BoycottTheVillain ಹ್ಯಾಶ್ ಟ್ಯಾಗ್

  ''ದಿ ವಿಲನ್' ಚಿತ್ರದ ನಿಜವಾದ ವಿಲನ್ ಪ್ರೇಮ್. ಹೀಗಾಗಿ, ನಾವು 'ದಿ ವಿಲನ್' ನೋಡುವುದಿಲ್ಲ'' ಎನ್ನುತ್ತಾ #BoycottTheVillain ಎಂಬ ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ ಶಿವಣ್ಣನ ಫ್ಯಾನ್ಸ್.

  ಸಾಲು ಸಾಲು ಟ್ವೀಟ್ ಗಳು

  ಸಾಲು ಸಾಲು ಟ್ವೀಟ್ ಗಳು

  ಶಿವಣ್ಣನ ಫ್ಯಾನ್ಸ್ ಎಷ್ಟು ಸಿಟ್ಟಾಗಿದ್ದಾರೆ ಅನ್ನೋದಕ್ಕೆ ಈ ಟ್ವೀಟ್ ಗಳೇ ಸಾಕ್ಷಿ.

  ಪ್ರೇಮ್ ಬಗ್ಗೆ ಲೇವಡಿ

  ಪ್ರೇಮ್ ಬಗ್ಗೆ ಲೇವಡಿ

  #BoycottTheVillain ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿ ಪ್ರೇಮ್ ಗೆ 'ಹಾಲಿವುಡ್ ಡೈರೆಕ್ಟರ್' ಎಂದು ಕರೆದು ಶಿವಣ್ಣನ ಫ್ಯಾನ್ಸ್ ಲೇವಡಿ ಮಾಡಿದ್ದಾರೆ.

  ಪ್ರೇಮ್ ಗೆ ಬೆಂಡೆತ್ತುತ್ತಿದ್ದಾರೆ ಫ್ಯಾನ್ಸ್

  ಪ್ರೇಮ್ ಗೆ ಬೆಂಡೆತ್ತುತ್ತಿದ್ದಾರೆ ಫ್ಯಾನ್ಸ್

  ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಫ್ಯಾನ್ಸ್ ಹೇಗೆಲ್ಲ ಬೆಂಡೆತ್ತುತ್ತಿದ್ದಾರೆ ಅಂತ ನೀವೇ ನೋಡಿ...

  ಈಗ ಇದೆ ಮಾರಿ ಹಬ್ಬ.!

  ಈಗ ಇದೆ ಮಾರಿ ಹಬ್ಬ.!

  'ಜೋಗಯ್ಯ' ಟೈಮ್ ನಲ್ಲಿ ಜಸ್ಟ್ ಮಿಸ್ ಆಗಿದ್ದ ಪ್ರೇಮ್ ಗೆ ಈಗ ಮಾರಿ ಹಬ್ಬ ಇದ್ಯಂತೆ.

  English summary
  Kannada Actor Shiva Rajkumar fans are trending #BoycottTheVillain on Twitter against Director Prem and Anand Audio

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X