twitter
    For Quick Alerts
    ALLOW NOTIFICATIONS  
    For Daily Alerts

    ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವಣ್ಣ ದಂಪತಿ: ಟ್ರಸ್ಟಿಗಳೊಟ್ಟಿಗೆ ಸಭೆ

    |

    ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ದಂಪತಿ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದರು.

    ಶಕ್ತಿಧಾಮದ ಟ್ರಸ್ಟಿಗಳ ಸಭೆಯನ್ನು ಇಂದು ನಡೆಸಲಾಯಿತು. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‌ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಟ್ರಸ್ಟ್ ಉಪಾಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಇತರೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು.

    ಶಕ್ತಿಧಾಮಕ್ಕೆ ಪುನೀತ್ ರಾಜ್‌ಕುಮಾರ್ ದೊಡ್ಡ ಬೆನ್ನೆಲುಬಾಗಿದ್ದರು, ಆದರೆ ಈಗ ಪುನೀತ್ ಅಗಲಿರುವ ಕಾರಣ ಅವರ ಗೌರವಾರ್ಥ ಹಾಗೂ ಶಕ್ತಿಧಾಮದ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು.

    Shiva Rajkumar Geetha Shiva Rajkumar Visited Shaktidhama In Mysore

    ಇದರ ನಡುವೆ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯನ್ನು ತಮಗೆ ನೀಡುವಂತೆ ನಟ ವಿಶಾಲ್ ಸಹ ದೊಡ್ಮನೆ ಕುಟುಂಬದವರ ಬಳಿ ಮನವಿ ಮಾಡಿದ್ದರು. ಹಾಗಾಗಿ ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

    ಪಾರ್ವತಮ್ಮ ರಾಜ್‌ಕುಮಾರ್-ರಾಜ್‌ಕುಮಾರ್ ಒತ್ತಾಸೆಯಿಂದ ಪ್ರಾರಂಭವಾದ ಶಕ್ತಿಧಾಮವನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ವಿಶೇಷ ಆಸಕ್ತಿಯಿಂದ ಬೆಳೆಸಿಕೊಂಡು ಬಂದರು. ಸಾವಿರಾರು ಹೆಣ್ಣುಮಕ್ಕಳಿಗೆ, ಶಿಕ್ಷಣ ಒಳ್ಳೆಯ ಜೀವನ ರೂಪಿಸಿಕೊಳ್ಳುವ ಅವಕಾಶವನ್ನು ಶಕ್ತಿಧಾಮ ಮಾಡಿಕೊಟ್ಟಿದೆ. ಪಾರ್ವತಮ್ಮ ರಾಜ್‌ಕುಮಾರ್ ಕಾಲಾನಂತರ ದೊಡ್ಮನೆ ಕುಟುಂಬ ಶಕ್ತಿಧಾಮವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ. ಶಕ್ತಿಧಾಮಕ್ಕೆ ಪುನೀತ್ ರಾಜ್‌ಕುಮಾರ್ ದೊಡ್ಡ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಈಗ ಅವರು ಮರೆಯಾಗಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ''ಯಾರೊ ಕೇಳಿದರು ಅಣ್ಣ-ತಮ್ಮಂದಿರು ನೀವು ಯಾವಾಗಲೂ ಜಗಳ ಆಡಿದ್ದೀರ? ಎಂದು. ಆದರೆ ನನ್ನ ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾವೆಂದೂ ಜಗಳವಾಡಿಲ್ಲ. ಅವನ ಪ್ರತಿಭೆ ನೋಡಿ, ಬೆಳವಣಿಗೆ ನೋಡಿ ನಾವು ಖುಷಿ ಪಟ್ಟಿದ್ದೇವೆ. ಖುಷಿಯಿಂದ ಕಣ್ಣೀರಿಟ್ಟಿದ್ದೇವೆ, ಆದರೆ ತಮ್ಮಂದಿರೊಂದಿಗೆ ಜಗಳವಾಡಿದ್ದು ನನಗೆ ನೆನಪೇ ಇಲ್ಲ'' ಎಂದರು ಶಿವರಾಜ್ ಕುಮಾರ್.

    ''ನಾವೆಲ್ಲ ಎಷ್ಟೋ ವರ್ಷಗಳಾದ ಮೇಲೆ ಸ್ಟಾರ್‌ಗಳಾದೆವು, ಆದರೆ ನಾವು ಈಗ ಸಾಧಿಸಿರುವುದನ್ನು ಅಪ್ಪು ಸಣ್ಣ ವಯಸ್ಸಿನಲ್ಲಿಯೇ ಸಾಧಿಸಿಬಿಟ್ಟ. ಅವನು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸ್ಟಾರ್. ನನಗೂ ಅವನಿಗೂ ಹದಿಮೂರು ವರ್ಷ ಅಂತರ, ನಾನು ಅವನನ್ನು ಮಗುವಿನಂತೆ ತೋಳಲ್ಲಿ ಎತ್ತಿಕೊಂಡು ಓಡಾಡಿದ್ದೇನೆ. ಅವನು ನನ್ನ ತಮ್ಮನಲ್ಲ, ಅವನು ನನ್ನ ಮಗ'' ಎಂದಿದ್ದಾರೆ ಶಿವಣ್ಣ.

    English summary
    Shiva Rajkumar and Geetha Shiva Rajkumar visited Shaktidhama in Mysore. Geetha Shiva Rajkumar attend meeting in Shakthidhama as she was the president of the trust.
    Saturday, November 27, 2021, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X