For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ಜೊತೆ ಶಿವರಾಜ್ ಕುಮಾರ್.?

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಬಹು ನಿರೀಕ್ಷಿತ ಚಿತ್ರ 'ದೊಡ್ಮನೆ ಹುಡುಗ' ಅಡ್ಡದಿಂದ ನಿಮಗಾಗಿ ಒಂದು ಬ್ರೇಕಿಂಗ್ ನ್ಯೂಸ್ ತಂದಿದ್ದೀವಿ, ಕೇಳಿ...

  'ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಶಿವರಾಜ್ ಕುಮಾರ್ ಕೂಡ ಜೊತೆಯಾಗಿದ್ದಾರೆ. ಹಾಗಂದ ಮಾತ್ರಕ್ಕೆ, ಅಪ್ಪು ಜೊತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ ಅಂತಲ್ಲ.! ['ಅಭಿಮಾನಿ'ಗಳನ್ನು ಬಣ್ಣಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ']

  'ದೊಡ್ಮನೆ ಹುಡುಗ' ಚಿತ್ರಕ್ಕೆ ಶಿವರಾಜ್ ಕುಮಾರ್ ವಾಯ್ಸ್ ಓವರ್ ನೀಡಿದ್ದಾರೆ. ಚಿತ್ರಕಥೆಯಲ್ಲಿ ಬರುವ ಮುಖ್ಯಭಾಗಕ್ಕೆ ಶಿವಣ್ಣ ದನಿ ನೀಡಿದ್ದಾರೆ. ಈಗಾಗಲೇ ದುನಿಯಾ ಸೂರಿ ಸಮ್ಮುಖದಲ್ಲಿ ರೆಕಾರ್ಡಿಂಗ್ ಕೆಲಸ ಪೂರ್ಣಗೊಂಡಿದೆ. [ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು]

  'ದೊಡ್ಮನೆ ಹುಡುಗ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಭಾರತಿ ವಿಷ್ಣುವರ್ಧನ್, ಸುಮಲತಾ, ರಾಧಿಕಾ ಪಂಡಿತ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಇವರೆಲ್ಲರ ಜೊತೆ ಶಿವಣ್ಣ ದನಿ ಸೇರಿಸಿರುವುದು 'ದೊಡ್ಮನೆ ಹುಡುಗ'ನಿಗೆ ಮತ್ತಷ್ಟು ಬೂಸ್ಟ್ ಸಿಕ್ಕಿದ ಹಾಗಾಗಿದೆ. ಸೆಂಚುರಿ ಕಿಂಗ್ ಮತ್ತು ಪವರ್ ಸ್ಟಾರ್ ಫ್ಯಾನ್ಸ್ ಗೆ ಇದಕ್ಕಿಂತ ಬೇರೇನು ಬೇಕು ಹೇಳಿ...?

  English summary
  Kannada Actor Shiva Rajkumar has given voice over for Puneeth Rajkumar starrer Kannada Movie 'Dodmane Huduga'. The movie is directed by Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X