»   » ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ

ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ

Posted By:
Subscribe to Filmibeat Kannada
ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ | Filmibeat Kannada

ಸಿನಿಮಾ ರಂಗದಲ್ಲಿ ಇನ್ನೂ ಮಿಂಚಬೇಕು, ಹೊಸಬರ ಮಧ್ಯೆ ತಾವೂ ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ತೂಕ ಇಳಿಸಿ, ಸಿಕ್ಸ್ ಪ್ಯಾಕ್ ಮಾಡುವ ದಿಟ್ಟ ಹೆಜ್ಜೆ ಇಟ್ಟರು ನಟ ಬುಲೆಟ್ ಪ್ರಕಾಶ್.

ತೆರೆಮೇಲೆ 'ಕರಿ ಇಡ್ಲಿ' ಅಂತಲೇ ಫೇಮಸ್ ಆಗಿದ್ದ ಬುಲೆಟ್ ಪ್ರಕಾಶ್, ಹಲವು ದಿನಗಳ ಕಾಲ ಕಟ್ಟುನಿಟ್ಟಿನ ಡಯೆಟ್ ಅನುಸರಿಸಿ, ಬರೀ ಲಿಕ್ವಿಡ್ ಆಹಾರವನ್ನೇ ಸ್ವೀಕರಿಸಿ ಸಿಕ್ಕಾಪಟ್ಟೆ ಸಣ್ಣ ಆಗಿದ್ದರು.

ಕೆ.ಜಿ.ಗಟ್ಟಲೆ ತೂಕ ಕಮ್ಮಿ ಮಾಡಿಕೊಂಡ ಬುಲೆಟ್ ಪ್ರಕಾಶ್ ಆರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ದಿನಕ್ಕೊಂದು ಗಾಸಿಪ್ ಹರಿದಾಡುತ್ತಿದೆ. ಈ ಮಧ್ಯೆ ಅನಾರೋಗ್ಯದ ಕಾರಣ ಬುಲೆಟ್ ಪ್ರಕಾಶ್, ಆಸ್ಪತ್ರೆಗೆ ಭೇಟಿ ನೀಡಿದ್ಮೇಲೆ 'ಬುಲೆಟ್ ಪ್ರಕಾಶ್ ಸಾವನ್ನಪ್ಪಿದ್ದಾರೆ' ಎಂಬ ಸುಳ್ಳು ಸುದ್ದಿ ಕೂಡ ಕಿಡಿಗೇಡಿಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬುಲೆಟ್ ಪ್ರಕಾಶ್ ಸಿಡಿಮಿಡಿಗೊಂಡಿದ್ದರು.

ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.?

Shiva Rajkumar meets Bullet Prakash in Vikram Hospital

ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬುಲೆಟ್ ಪ್ರಕಾಶ್ ರನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ಮಾಡಿದ್ದಾರೆ. ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿ ಬಂದಿದ್ದಾರೆ ಶಿವಣ್ಣ.

'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ

ಶಿವಣ್ಣ ಜೊತೆಗೆ 'ಭಜರಂಗಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಅಭಿನಯಿಸಿದ್ದಾರೆ. ಹೀಗಾಗಿ, ಬುಲೆಟ್ ಪ್ರಕಾಶ್ ಜೊತೆಗೆ ಶಿವಣ್ಣ ಆತ್ಮೀಯ ಒಡನಾಟ ಹೊಂದಿದ್ದಾರೆ.

ಇನ್ನೂ, ವಿಕ್ರಂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟಿ ಜಯಂತಿ ಅವರನ್ನೂ ಶಿವಣ್ಣ ಇದೇ ಸಮಯದಲ್ಲಿ ಭೇಟಿ ಮಾಡಿದ್ದಾರೆ. ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವೆಂಟಿಲೇಟರ್ ತೆಗೆಯಲಾಗಿದೆ.

English summary
Kannada Actor Shiva Rajkumar met Bullet Prakash, who has admitted in Vikram Hospital due to sickness.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X