twitter
    For Quick Alerts
    ALLOW NOTIFICATIONS  
    For Daily Alerts

    James: 'ಜೇಮ್ಸ್' ಸಿನಿಮಾ ಪರ ನಿಂತ ಶಿವಣ್ಣ: ಸಿಎಂ ಭೇಟಿ

    |

    'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆಯುತ್ತಿರುವ ವಿಷಯ ದೊಡ್ಡದಾಗಿ ಸದ್ದಾಗುತ್ತಿದೆ. ನಟ ಶಿವರಾಜ್ ಕುಮಾರ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

    Recommended Video

    ಅಪ್ಪು ಜೇಮ್ಸ್, ಅಭಿಮಾನಿಗಳಿಗೆ ಕರೆಕೊಟ್ಟ ಶಿವಣ್ಣ

    ಶಿವರಾಜ್ ಕುಮಾರ್ ಜೊತೆಗೆ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ಮಾಪಕ ಶ್ರೀಕಾಂತ್ ಸಹ ಸಿಎಂ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದಾರೆ.

    ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಅಭಯ ನೀಡಿದ ಸಿಎಂ ಬೊಮ್ಮಾಯಿಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಅಭಯ ನೀಡಿದ ಸಿಎಂ ಬೊಮ್ಮಾಯಿ

    ಸಿಎಂ ಭೇಟಿ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, 'ಜೇಮ್ಸ್' ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಜೊತೆಗೆ ಅಭಿಮಾನಿಗಳಿಗೆ ಆತ್ಮೀಯ ಬಂಧವಿದೆ ಹೀಗಿದ್ದಾಗ ಸಿನಿಮಾವನ್ನು ತೆಗೆದರೆ ಅದು ಸರಿಯಲ್ಲ. ಸಿನಿಮಾ ತೆಗೆಯಲು ನಾವುಗಳು ಬಿಡಬಾರದು'' ಎಂದಿದ್ದಾರೆ.

    Shiva Rajkumar Met CM Basavaraj Bommai And Talked About James Movie

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದ 'ಜೇಮ್ಸ್' ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್, ಹಾಗೇನೂ ಇಲ್ಲ. ಬುಕ್‌ಮೈ ಶೋ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಯಾವ ಸಿನಿಮಾದಿಂದ 'ಜೇಮ್ಸ್'ಗೆ ಸಮಸ್ಯೆ ಆಗುತ್ತಿದೆ ಎಂದು ಪರೋಕ್ಷವಾಗಿ 'RRR' ಸಿನಿಮಾದಿಂದ 'ಜೇಮ್ಸ್'ಗೆ ಸಮಸ್ಯೆ ಆಗುತ್ತಿದೆ ಎಂದರು.

    The Kashmir Files Vs James: 'ಜೇಮ್ಸ್' ಸಿನಿಮಾ ತೆಗೆದರೆ ನಿಮ್ಮ ಮನೆ ಮುಂದೆ ಚಪ್ಪಲಿ ರಾಶಿ ಬೀಳುತ್ತೆThe Kashmir Files Vs James: 'ಜೇಮ್ಸ್' ಸಿನಿಮಾ ತೆಗೆದರೆ ನಿಮ್ಮ ಮನೆ ಮುಂದೆ ಚಪ್ಪಲಿ ರಾಶಿ ಬೀಳುತ್ತೆ

    'ಜೇಮ್ಸ್' ರಾಜ್ಯದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದಾಗ ಸಿನಿಮಾವನ್ನು ತೆಗೆಯುವುದು ಸರಿಯಲ್ಲ. ಸಿನಿಮಾ ಚೆನ್ನಾಗಿ ಓಡದೇ ಇದ್ದರೆ ತೆಗೆಯಲು ಅಡ್ಡಿಯಿಲ್ಲ ಆದರೆ ಸಿನಿಮಾ ಓಡುತ್ತಿದೆ. ಜನ ಇನ್ನೂ ನೋಡುತ್ತಿದ್ದಾರೆ ಹೀಗಿದ್ದಾಗ ಸಿನಿಮಾ ತೆಗೆಯುವುದು ಸೂಕ್ತವಲ್ಲ. ಸಿನಿಮಾವನ್ನು ತೆಗೆಯಲು ಅಭಿಮಾನಿಗಳು ಬಿಡಬಾರದು. ಇದರಲ್ಲಿ ಒಗ್ಗಟ್ಟಿರಬೇಕು. ಸಿನಿಮಾ ಯಾಕೆ ತೆಗೆಯುತ್ತಿದ್ದೀರಿ ಎಂದು ನಿರ್ಮಾಪಕರ ಬಳಿ, ನಿರ್ದೇಶಕರ ಬಳಿ ಜಗಳವಾಡಬೇಕು'' ಎಂದರು ಶಿವರಾಜ್ ಕುಮಾರ್.

    ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾ 'ಜೇಮ್ಸ್'ಗೆ ಮುಂಚೆಯೇ ಬಿಡುಗಡೆ ಆಗಿತ್ತು. ಆದರೆ ಅದು ಓಡುತ್ತಿದ್ದ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಅನ್ನು ಬಿಡುಗಡೆ ಮಾಡಿಲ್ಲ. ಚೆನ್ನಾಗಿ ಓಡುತ್ತಿರುವ ಸಿನಿಮಾಗಳನ್ನು ಮುಟ್ಟಬಾರದು ಎಂಬುದನ್ನು ನಮಗೆ ಕಲಿಸಲಾಗಿದೆ. 'ಅನುರಾಗ ಸಂಗಮ' ಎಂಬ ಸಿನಿಮಾ ಬಂದಿತ್ತು. ಚೆನ್ನಾಗಿ ಓಡುತ್ತಿತ್ತು. ಆಗಲೇ ನಾನು ಹೇಳಿದ್ದೆ ಆ ಸಿನಿಮಾವನ್ನು ತೆಗೆಸಬೇಡಿ ಎಂದು. ಬಹಳ ವರ್ಷಗಳಿಂದಲೂ ಕನ್ನಡ ಸಿನಿಮಾಗಳ ಪರವಾಗಿ ಹೋರಾಡುತ್ತ ಬಂದಿದ್ದೇನೆ. ಈಗಲೂ ಅಷ್ಟೆ, ಇದು ನನ್ನ ತಮ್ಮನ ಸಿನಿಮಾ ಎಂಬ ಕಾರಣಕ್ಕೆ ನಾನು ಬಂದಿಲ್ಲ. ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಬಂದಿದ್ದೇನೆ'' ಎಂದರು.

    'ಜೇಮ್ಸ್' ಚಿತ್ರ ಎತ್ತಂಗಡಿ ಖಂಡಿಸಿ ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳ ಪ್ರತಿಭಟನೆ'ಜೇಮ್ಸ್' ಚಿತ್ರ ಎತ್ತಂಗಡಿ ಖಂಡಿಸಿ ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳ ಪ್ರತಿಭಟನೆ

    'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ''20-25 ಲಕ್ಷ ಶೇರ್ ಬರುತ್ತಿರುವ ಚಿತ್ರಮಂದಿರಗಳಿಂದ ನಮ್ಮ ಸಿನಿಮಾವನ್ನು ತೆಗೆಯಲಾಗುತ್ತಿದೆ. ಮೊದಲಿಗೆ 386 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದವು. ಈಗ 250 ಸುಮಾರು ಚಿತ್ರಮಂದಿರಗಳಷ್ಟೆ ಇವೆ. ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಸಮಸ್ಯೆ ಬಗೆಹರಿಸುವ ನೆರವು ನೀಡಿದ್ದಾರೆ. ಫಿಲಂ ಚೇಂಬರ್‌ನವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ'' ಎಂದರು.

    English summary
    Actor Shiva Rajkumar met CM Basavaraj Bommai and discussed about James movie has been removed from theaters.
    Thursday, March 24, 2022, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X