»   » 'ರುಸ್ತುಂ' : ಶಿವಣ್ಣ ಖಾತೆಗೆ ಸೇರಿದ ಮತ್ತೊಂದು ಹೊಸ ಸಿನಿಮಾ

'ರುಸ್ತುಂ' : ಶಿವಣ್ಣ ಖಾತೆಗೆ ಸೇರಿದ ಮತ್ತೊಂದು ಹೊಸ ಸಿನಿಮಾ

Posted By:
Subscribe to Filmibeat Kannada
'ರುಸ್ತುಂ' ಆಗಲಿರೋ ಶಿವಣ್ಣ | Filmibeat Kannada

ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾಗಳ ಪಟ್ಟಿ ನೋಡಿದರೆ ಬೇರಗಾಗುತ್ತದೆ. ಆದರೆ ದಿನ ಕಳೆದಂತೆ ಶಿವಣ್ಣ ಸಿನಿಮಾ ಲಿಸ್ಟ್ ದೊಡ್ಡದಾಗುತ್ತಲ್ಲೇ ಇದೆ. ಅದಕ್ಕೆ ಈಗ 'ರುಸ್ತುಂ' ಕೂಡ ಸಿನಿಮಾ ಸೇರಿಕೊಂಡಿದೆ.

ಈ ಹಿಂದೆಯೇ ಸಾಹಸ ನಿರ್ದೇಶಕ ರವಿವರ್ಮ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ರವಿವರ್ಮ ತಮ್ಮ ಮೊದಲ ಸಿನಿಮಾವನ್ನು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನ ಜೊತೆಗೆ ಮಾಡಲಿದ್ದಾರೆ. ಜೊತೆಗೆ ಈ ಚಿತ್ರದ ಟೈಟಲ್ 'ರುಸ್ತುಂ' ಎಂದು ಇಡಲಾಗಿದೆ. ವಿಶೇಷ ಅಂದರೆ ಇಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ.

ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯ ಮನೆಗೆ ಶಿವಣ್ಣ ಭೇಟಿ

Shiva Rajkumar new movie titled as Rustum

'ಮಫ್ತಿ' ನಂತರ ಶಿವರಾಜ್ ಕುಮಾರ್ ಅವರ ಈ ಚಿತ್ರಕ್ಕೂ ಜಯಣ್ಣ ಭೋಗೆಂದ್ರ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ ರವಿವರ್ಮ ಶಿವಣ್ಣ ಮತ್ತು ಪುನೀತ್ ಇಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ 'ರುಸ್ತುಂ' ಚಿತ್ರದಲ್ಲಿ ಶಿವಣ್ಣ ಮಾತ್ರ ನಟಿಸುತ್ತಾರೆ. ಸದ್ಯ 'ದಿ ವಿಲನ್' ಮತ್ತು 'ಕವಚ' ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಬಿಜಿ ಇದ್ದು 'ರುಸ್ತು' ಸಿನಿಮಾ ಸದ್ಯದಲ್ಲಿಯೇ ಸೆಟ್ಟೇರಲಿದೆಯಂತೆ.

English summary
Kananda actor Shiva Rajkumar new movie titled as Rustum. The movie will be will be directing by stunt master Ravi Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada